• search

ಪತ್ರಕರ್ತರ ಫೂಲ್‌ ಮಾಡಿದ ಮಲ್ಯ ರಾಜಕೀಯ ಜೀವನದ ಮೊದಲ ಸುದ್ದಿಗೋಷ್ಠಿ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ವಿಜಯ್‌ ಮಲ್ಯ ಅವರ ರಾಜಕೀಯ ಜೀವನದ ಮೊದಲ ಸುದ್ದಿಗೋಷ್ಠಿಯೇ ಏಪ್ರಿಲ್‌ ಫೂಲ್‌ ಪ್ರಕರಣವಾಗಿದೆ !

    ಸುದ್ದಿಗಾರರನ್ನು ಫೂಲ್‌ ಮಾಡುವ ಗೊಡವೆಗೆ ಹೋದವರು ಕಡಿಮೆಯೇ. ಆದರೆ, ಮಲ್ಯ ಉದ್ದೇಶ ಪೂರ್ವಕವಾಗಿ ಅಲ್ಲದಿದ್ದರೂ, ಅಕಸ್ಮಾತ್ತಾಗಿ ಅದನ್ನು ಮಾಡಿದ್ದಾರೆ. ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ನಂತರ ಕರೆದ ಮೊದಲ ಸುದ್ದಿಗೋಷ್ಠಿಯೇ ಠುಸ್ಸು. ಸುದ್ದಿಗಾರರಿಂದ ಹಿಡಿಶಾಪ.

    ನಡೆದದ್ದು ಇಷ್ಟು- ಅಂಬೇಡ್ಕರ್‌ ಭವನದಲ್ಲಿ ಏಪ್ರಿಲ್‌ 1ರಂದು ಸಂಜೆ 4.30 ಗಂಟೆಗೆ ಮಲ್ಯ ಅವರ ಸುದ್ದಿಗೋಷ್ಠಿ ಅಂತ ಸುದ್ದಿ ಮಾಧ್ಯಮಗಳಿಗೆ ಆಹ್ವಾನ ಬಂತು. ಅಂತಿಮ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ಸುದ್ದಿಗೋಷ್ಠಿಯ ಸಮಯ ಹಾಗೂ ಸ್ಥಳ ಬದಲು. ಅಂಬೇಡ್ಕರ್‌ ಭವನದ ಬದಲು ವಿಠಲ್‌ ಮಲ್ಯ ರಸ್ತೆಯ ಯುಬಿ ಭವನದಲ್ಲಿ ಗೋಷ್ಠಿ , ಮಧ್ಯಾಹ್ನ 3.30ಕ್ಕೆ ಅಂತ ಕೆಲವು ಮಾಧ್ಯಮಗಳಿಗೆ ದೂರವಾಣಿ ಕರೆ.

    ಕೆಲವು ಪತ್ರಕರ್ತರು ಮೊದಲು ಅಂಬೇಡ್ಕರ್‌ ಭವನಕ್ಕೆ ಹೋಗಿ, ಗೋಷ್ಠಿ ಬದಲಾವಣೆಯಾಗಿರುವ ಸುದ್ದಿ ತಿಳಿದು ಯುಬಿ ಹೌಸ್‌ಗೆ ಬಂದರು. ಮತ್ತೆ ಕೆಲವರು ನೇರವಾಗಿ ಯುಬಿ ಹೌಸ್‌ಗೆ ಬಂದರು. ಆದರೆ ಅಲ್ಲಿ ಮಲ್ಯ ಇರಲಿಲ್ಲ. ಅವರ ಕಚೇರಿಯ ಸಿಬ್ಬಂದಿಯ ಮಾತುಗಳು ಸುದ್ದಿಗೋಷ್ಠಿ ನಡೆಯುವ ವಿಷಯವನ್ನು ಸ್ಪಷ್ಟಪಡಿಸಲೇ ಇಲ್ಲ. ಅರ್ಧ ತಾಸು ಕಳೆದರೂ ಮಲ್ಯ ನಾಪತ್ತೆ. ಕೊನೆಗೆ, ‘ಬಾಸ್‌ ಲಿಫ್ಟಿನಲ್ಲಿ ಬರ್ತಿದಾರೆ’ ಎಂಬ ಸಿಹಿ ಸುದ್ದಿ !

    ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಪತ್ರಕರ್ತರ ಕಣ್ಣೆಲ್ಲಾ ಲಿಫ್ಟಿನತ್ತ. ಇನ್ನೂ ಅರ್ಧ ತಾಸು ಕಳೆದರೂ ಮಲ್ಯ ಇರಲಿ, ಲಿಫ್ಟೂ ಮೇಲಕ್ಕೆ ಬರಲಿಲ್ಲ. ಕೊನೆಗೆ ಪತ್ರಕರ್ತರ ಹಿಂಡಿನಲ್ಲಿ ಗುಸುಗುಸು ಶುರುವಾಯಿತು. ಇದು ಮೂರ್ಖರ ದಿನ. ಮಲ್ಯ ತಮ್ಮನ್ನು ಮೂರ್ಖರನ್ನಾಗಿಸಿರಬೇಕು ಎಂಬ ಮಾತುಗಳು ಅನುರಣಿಸಿದವು. ಕೊನೆಗೆ ಮಲ್ಯ ಅವರಿಗೆ ಹಿಡಿಶಾಪ ಹಾಕಿಕೊಂಡು ಪತ್ರಕರ್ತರು ಜಾಗ ಖಾಲಿ ಮಾಡಿದರು. ಕೊನೆಗೆ ಮಲ್ಯ ಬಂದರು. ಅಷ್ಟರಲ್ಲಿ ಸುದ್ದಿಗೋಷ್ಠಿ ಮೂರ್ಖರ ದಿನಾಚರಣೆಯ ಡೋಸ್‌ ಪ್ರಕರಣವಾಗಿ ಮುಗಿದು ಹೋಗಿತ್ತು !

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more