ಕುದುರೆಮುಖ ಕಬ್ಬಿಣ ಅದಿರು ಕಂಪನಿಯ 712 ಕೋಟಿ ರು. ದಾಖಲೆ ವಹಿವಾಟು
ಬೆಂಗಳೂರು : ವಿವಾದದ ಅಲೆಯಲ್ಲಿ ತೇಲುತ್ತಾ ಗುತ್ತಿಗೆ ಅವಧಿ ವಿಸ್ತರಿಸಿಕೊಂಡಿರುವ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ನಿಯಮಿತ (ಕೆಐಓಸಿಎಲ್) 2001- 02ನೇ ವಿತ್ತ ವರ್ಷದಲ್ಲಿ ದಾಖಲೆಯ 712 ಕೋಟಿ ರುಪಾಯಿ ವಹಿವಾಟು ನಡೆಸಿದೆ.
ಕಂಪನಿಯು 5.4 ದಶಲಕ್ಷ ಟನ್ ಕಬ್ಬಿಣ ಹಾಗೂ 3.215 ದಶಲಕ್ಷ ಟನ್ ಕಬ್ಬಿಣದ ಸಣ್ಣ ಗುಂಡುಗಳನ್ನು ಉತ್ಪಾದಿಸಿದೆ. 5.516 ದಶಲಕ್ಷ ಟನ್‌ಗಳಷ್ಟು ಕಬ್ಬಿಣ ಹಾಗೂ ಕಬ್ಬಿಣದ ಸಣ್ಣ ಗುಂಡುಗಳನ್ನು ರಫ್ತು ಮಾಡಿದೆ ಎಂದು ಸುದ್ದಿ ಹೇಳಿಕೆ ಮೂಲಕ ಕಂಪನಿ ತಿಳಿಸಿದೆ.
ಹಿಂದಿನ ವಿತ್ತ ವರ್ಷಕ್ಕಿಂತ ನಿವ್ವಳ ವಹಿವಾಟಿನಲ್ಲಿ ಪ್ರತಿಶತ 22ರಷ್ಟು ಪ್ರಗತಿಯನ್ನು ಕಂಪನಿ ಸಾಧಿಸಿದೆ. 2001- 02ನೇ ವಿತ್ತ ವರ್ಷದಲ್ಲಿ 150 ದಶಲಕ್ಷ ಅಮೆರಿಕನ್ ಡಾಲರ್‌ಗಳ ವಿದೇಶೀ ವಿನಿಮಯ ಗಳಿಸಿರುವ ಕಂಪನಿ ತನ್ನ ಮಾಲನ್ನು ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಮೂಲಕ ರಫ್ತು ಮಾಡುತ್ತಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...


Click it and Unblock the Notifications
