ಶಿಲಾದಾನಕ್ಕೆ ಅಡ್ಡಿ ಬಂದರೆ ಆತ್ಮಹತ್ಯೆ: ರಾಮಚಂದ್ರ ಪರಮಹಂಸ ಬೆದರಿಕೆ
ಲಖನೌ : ಪೂಜೆ ಮಾಡುವುದು ನನ್ನ ಆಜನ್ಮ ಸಿದ್ಧ ಹಕ್ಕು. ಶುಕ್ರವಾರ (ಮಾರ್ಚ್ 15) ಶಿಲಾ ದಾನ ಮಾಡಲು ನನ್ನನ್ನು ಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ರಾಮಜನ್ಮ ಭೂಮಿ ನ್ಯಾಸ್ ಅಧ್ಯಕ್ಷ ರಾಮಚಂದ್ರ ದಾಸ್ ಪರಮಹಂಸ ಪಟ್ಟು ಹಿಡಿದಿದ್ದಾರೆ.
ಯಾವುದೇ ಪೊಲೀಸ್ ನನ್ನನ್ನು ಮುಟ್ಟಲು ಬಂದರೆ ವಿಷ ಸೇವಿಸಿ ಸಾಯುತ್ತೇನೆ. ರಾಮ ದೇವರು ಹಾಗೂ ದೇವಸ್ಥಾನಕ್ಕೆ ಪ್ರಾಣತ್ಯಾಗ ಮಾಡಲು ನಾನು ಸಿದ್ಧ. ಫೈಸಾಬಾದ್ ವಿಭಾಗೀಯ ಆಯುಕ್ತರಿಗೆ ಅಥವಾ ಸರ್ಕಾರದ ಯಾರಾದರೂ ಪ್ರತಿನಿಧಿಗೆ ಶಿಲಾದಾನ ಮಾಡುವುದು ನನ್ನ ಗುರಿ. ಹೀಗೆ ಮಾಡುವುದರಿಂದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಕ್ಕೆ ಚ್ಯುತಿ ಯಾಗುವುದಿಲ್ಲ ಎಂದು ಅಯೋಧ್ಯೆಯ ವಿಶ್ವ ಹಿಂದೂ ಪರಿಷತ್ ಕಾರ್ಯಾಗಾರದಲ್ಲಿರುವ ಪರಮಹಂಸ ಗುರುವಾರ ಸುದ್ದಿಗಾರರಿಗೆ ಹೇಳಿದರು.
ಅನುಮತಿ ಕೊಡದಿದ್ದರೆ ಸತ್ಯಾಗ್ರಹ : ಅಪೆಕ್ಸ್ ಕೋರ್ಟಿನ ತೀರ್ಪಿನಿಂದ ದೇಶ ಕ್ರುದ್ಧವಾಗಿದೆ. ಪರಿಸ್ಥಿತಿ ಪ್ರಕೋಪಕ್ಕೆ ತಿರುಗಿ, ಗಲಭೆ- ಧ್ವಂಸ ಕೃತ್ಯಗಳೇನಾದರೂ ನಡೆದಲ್ಲಿ ಅದಕ್ಕೆ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯವೇ ಕಾರಣ. ಒಂದು ವೇಳೆ ಶಿಲಾದಾನಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಶುಕ್ರವಾರದಿಂದ ವಿಹೆಚ್‌ಪಿ ದೇಶಾದ್ಯಂತ ಹತ್ತು ದಿನಗಳ ಸತ್ಯಾಗ್ರಹ ಮಾಡಲಿದೆ. ಪೊಲೀಸರು ಬಂಧಿಸುತ್ತಾರೆ ಎಂಬ ಕಾರಣಕ್ಕೆ ನಾವು ಹೆದರಿ, ಹಿನ್ನಡೆಯುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಕಿಶೋರ್ ಎಚ್ಚರಿಕೆ ನೀಡಿದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications