ಅಯೋಧ್ಯೆಯಲ್ಲಿ ಸಾಂಕೇತಿಕ ಭೂಮಿಪೂಜೆಗೆ ತಕರಾರಿಲ್ಲ- ಕೇಂದ್ರಸರ್ಕಾರ
ನವ ದೆಹಲಿ : ಅಯೋಧ್ಯೆಯಲ್ಲಿ ಸಾಂಕೇತಿಕ ಪೂಜೆಗೆ ತನ್ನ ಅಡ್ಡಿಯಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಅಟಾರ್ಜಿ ಜನರಲ್ ಸೋಲಿ ಸೊರಾಬ್ಜಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಬುಧವಾರ ಬೆಳಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದರು. ಭೂಮಿ ಪೂಜೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವೇನು ಎಂದು ನ್ಯಾಯಾಲಯ ಪ್ರಶ್ನಿಸಿದ್ದಕ್ಕೆ- ಸೊರಾಬ್ಜಿ ಈ ಸ್ಪಷ್ಟನೆ ನೀಡಿದರು.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಬುಧವಾರ ಬೆಳಗ್ಗೆ ತನ್ನ ಮಹತ್ವದ ವಿಚಾರಣೆ ಪ್ರಾರಂಭಿಸಿದ್ದು , ಬುಧವಾರವೇ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆಂದು ನಿರೀಕ್ಷಿಸಲಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications