ಗುಜರಾತ್‌ :ಪಿಟಿವಿಗೆ ನಿಷೇಧ, ಕುದಿಮೌನದ ನಡುವೆ ಮರುಕಳಿಸುತ್ತಿರುವ ಶಾಂತಿ

ಅಹಮದಾಬಾದ್‌: ಪ್ರಚೋದನಕಾರಿ ವರದಿಗಳನ್ನು ಪ್ರಕಟಿಸುತ್ತಿದ್ದ ಪಾಕಿಸ್ತಾನ ಟೀವಿ (ಪಿಟಿವಿ) ಚಾನಲ್‌ನ್ನು ಗುಜರಾತ್‌ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿ ಆದೇಶ ಹೊರಡಿಸಿದೆ.

ಗುಜರಾತ್‌ ಅಗ್ನಿಕುಂಡದಲ್ಲಿ ಬೇಯುತ್ತಿರುವ ಹೊತ್ತಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗುವ ವರದಿಗಳನ್ನು ಪಿಟಿವಿ ಪ್ರಸಾರ ಮಾಡುತ್ತಿತ್ತು . ಈ ಕುರಿತು ಉನ್ನತ ಮಟ್ಟದ ಸಮಾಲೋಚನೆಯ ನಂತರ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪಿಟಿವಿ ನಿಷೇಧಿಸುವ ಕುರಿತು ತೀರ್ಮಾನ ಕೈಗೊಂಡಿದ್ದಾರೆ.

ಹಿಂಸಾತ್ಮಕ ಹಾಗೂ ಎರಡು ಕೋಮುಗಳ ನಡುವಣ ಘರ್ಷಣೆಯನ್ನು ತೋರಿಸುವ ಚಾನಲ್‌ಗಳ ಪ್ರಸಾರವನ್ನು ನಿಲ್ಲಿಸುವಂತೆ ಪೊಲೀಸರು ಕೇಬಲ್‌ ಆಪರೇಟರ್‌ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಸೂರತ್‌ನಲ್ಲಿನ ಘಟನೆಗಳನ್ನು ಚಿತ್ರೀಕರಿಸಿ ಪ್ರಸಾರ ಮಾಡಿರುವ ಖಾಸಗಿ ವಾಹಿನಿಯ ಬಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನರೇಂದ್ರ ಮೋದಿ ಅವರು, ಸೂಕ್ಷ್ಮ ಸನ್ನಿವೇಶವನ್ನು ಕಲಕುವ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಮರಳಿ ಶಾಂತಿಯತ್ತ ಗುಜರಾತ್‌ : ಶನಿವಾರ ರಾತ್ರಿಯಿಂದ ಯಾವುದೇ ಅಹಿತಕರ ಘಟನೆಗಳು ರಾಜ್ಯದಲ್ಲಿ ಸಂಭವಿಸಿಲ್ಲ ಎಂದು ಭಾನುವಾರ ಬೆಳಗ್ಗೆ ಪೊಲೀಸರು ತಿಳಿಸಿದ್ದಾರೆ. ಶನಿವಾರ ಇಳಿಸಂಜೆ ಪ್ರತ್ಯೇಕ ಘಟನೆಗಳಲ್ಲಿ 15 ಮಂದಿ ಸಾವಿಗೀಡಾಗಿದ್ದನ್ನು ಹೊರತು ಪಡಿಸಿದರೆ, ಆನಂತರ ಯಾವುದೇ ದುಷ್ಕೃತ್ಯಗಳು ವರದಿಯಾಗಿಲ್ಲ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+