ಚೆನ್ನೈಗೆ ಬೆಂಗಳೂರು ಮಹಾನಗರ ಪಾಲಿಕೆ ನಿಯೋಗ; ಸ್ವಂತ ಖರ್ಚಿನಲ್ಲಿ !

ಬೆಂಗಳೂರು : ಪಾಲಿಕೆಯ ಹಣದಲ್ಲಿ ದೇಶ- ವಿದೇಶ ಸುತ್ತಿ ಬರುವುದರಲ್ಲೇ ನಗರದ ಮೇಯರ್‌ ಅಧಿಕಾರಾವಧಿ ಮುಗಿದು ಹೋಗುತ್ತದೆ ಎಂಬ ಮಾತಿಗೆ ಮೇಯರ್‌ ಕೆ.ಚಂದ್ರಶೇಖರ್‌ ದಿಟ್ಟ ಉತ್ತರ ಕೊಟ್ಟಿದ್ದಾರೆ. ಇವತ್ತು (ಭಾನುವಾರ) ಚೆನ್ನೈಗೆ ಹೊರಡುತ್ತಿರುವ ಇವರ ನೇತೃತ್ವದ ಮಹಾ ನಗರ ಪಾಲಿಕೆ ನಿಯೋಗ ಎರಡು ದಿನಗಳ ಪ್ರಯಾಣದ ವೆಚ್ಚವನ್ನು ತಾನೇ ಭರಿಸಿಕೊಳ್ಳಲಿದೆ.

ಆರೋಗ್ಯ, ಕಾಮಗಾರಿ ಮತ್ತು ವಿತ್ತ ಸಮಿತಿಗಳ ಅಧ್ಯಕ್ಷರು, ಸಮಿತಿಗಳಲ್ಲಿನ ಎಲ್ಲಾ ಪಕ್ಷಗಳ ಮುಖಂಡರು, ಡೆಪ್ಯುಟಿ ಕಮಿಷನರ್‌ಗಳು ಮೇಯರ್‌ ನೇತೃತ್ವದ ತಂಡದಲ್ಲಿದ್ದಾರೆ. ಇವರೆಲ್ಲಾ ಚೆನ್ನೈಗೆ ಹೊರಡುತ್ತಿರುವುದು ತಮ್ಮ ಸ್ವಂತ ಖರ್ಚಿನಲ್ಲಿ. ಚೆನ್ನೈ ಮೇಯರ್‌ ಸ್ಟಾಲಿನ್‌ ಅವರನ್ನು ಭೇಟಿ ಮಾಡಿ, ಅಲ್ಲಿನ ಮೂಲಭೂತ ಸೌಕರ್ಯ ವೃದ್ಧಿ ಹಾಗೂ ಸ್ವಚ್ಛತಾ ಯೋಜನೆಗಳನ್ನು ನಿಯೋಗ ಪರಿಶೀಲಿಸಲಿದೆ. ಅದನ್ನು ಬೆಂಗಳೂರಿಗೆ ಹೇಗೆ ಹೊಂದಿಸಿಕೊಳ್ಳಬಹುದು ಎಂಬುದು ಈ ಪ್ರವಾಸದ ಉದ್ದೇಶ ಎಂದು ಚಂದ್ರಶೇಖರ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+