ಸುಬ್ರಾಯ ಮಾಣಿ ಭಾಗವತರೀಗ ಸಂಗೀತ ಕ್ಷೇತ್ರದ ‘ಅನನ್ಯ’
ಉಡುಪಿ : ಕರ್ನಾಟಕ ಸಂಗೀತ ಗಾಯಕ ಪಡುಬಿದ್ರಿ ಸುಬ್ರಾಯ ಮಾಣಿ ಭಾಗವತರು ಈಗ ಅನನ್ಯ! ಬೆಂಗಳೂರಿನ ಅನನ್ಯ ಸಂಸ್ಥೆ ಕೊಡುವ ಅನನ್ಯ ಕಲಾವಿದ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಸೋಮವಾರ ನಡೆದ ಸಮಾರಂಭದಲ್ಲಿ ಪೇಜಾವರ ಕಿರಿಯ ಪಟ್ಟದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಸುಬ್ರಾಯ ಮಾಣಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ರಾಗಧನ ಉಡುಪಿ ಸಂಸ್ಥೆಯ ಸಹಯೋಗದಲ್ಲಿ ಎಂ.ಜಿ.ಎಂ.ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸುಬ್ರಾಯ ಮಾಣಿ ಭಾಗವತರಂಥ ಹಿರಿಯ ಕಲಾವಿದರು ಎಲೆ ಮರೆಯ ಕಾಯಿದ್ದಂತೆ. ಇಂಥವರನ್ನು ಗುರುತಿಸಿ, ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಪ್ರಶಸ್ತಿ ಪ್ರದಾನ ಮಾಡಿದ ಪ್ರಸನ್ನ ತೀರ್ಥ ಶ್ರೀಗಳು ಹೇಳಿದರು. ನನಗೆ ಸಿಗುತ್ತಿರುವ ಪ್ರಶಸ್ತಿ, ಗೌರವಗಳೆಲ್ಲಾ ಗುರು ದಿವಂಗತ ಚೆಂಬೈ ವೈದ್ಯನಾಥ ಭಾಗವತರಿಗೆ ಸಲ್ಲಬೇಕು ಎಂದು ಸುಬ್ರಾಯ ಮಾಣಿ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications