ಶಿವಸುಬ್ರಮಣ್ಯಂ ಬಂಧನದ ಮಾಹಿತಿ ಹೆಕ್ಕಲು ಪತ್ರಕರ್ತರ ನಿಯೋಗ
ಚೆನ್ನೈ : ಮದ್ರಾಸ್ ಪತ್ರಕರ್ತರ ಒಕ್ಕೂಟ, ಚೆನ್ನೈ ಪ್ರೆಸ್ ಕ್ಲಬ್, ಮದ್ರಾಸ್ ವರದಿಗಾರರ ಸಂಘ ಮತ್ತು ಪತ್ರಕರ್ತರ ಕ್ರಿಯಾ ಸಂಘದ ತಲಾ ಒಬ್ಬೊಬ್ಬರು ಒಟ್ಟಾಗಿ ನಿಯೋಗವೊಂದನ್ನು ರಚಿಸಿಕೊಂಡಿದ್ದು, ಕರ್ನಾಟಕ ಪೊಲೀಸರ ಅತಿಥಿಯಾಗಿರುವ ನಕ್ಕೀರನ್ ವರದಿಗಾರ ಶಿವಸುಬ್ರಮಣ್ಯಂ ಬಂಧನದ ಕಾರಣಗಳನ್ನು ಹೆಕ್ಕಲಿದ್ದಾರೆ.
ಒಂದು ವಾರ ಕಾಲ ಬಂಧನದ ಭೀತಿಯ ಕಾರಣ ಅಜ್ಞಾತವಾಸದಲ್ಲಿದ್ದ ನಕ್ಕೀರನ್ ಸಂಪಾದಕ ಆರ್.ಆರ್.ಗೋಪಾಲ್ ಚೆನ್ನೈನಲ್ಲಿ ಸೋಮವಾರ ಅಡ್ಡಾಡಿದರು. ನಕ್ಕೀರನ್‌ನ ಸಹ ಸಂಪಾದಕ ಕಾಮರಾಜ್ ಸೇರಿದಂತೆ ನಾಲ್ಕೂ ಪತ್ರಕರ್ತರ ಸಂಘಟನೆಗಳ ಮೂವರೊಟ್ಟಿಗೆ ಚೆನ್ನೈ ಪ್ರೆಸ್ ಕ್ಲಬ್‌ನಲ್ಲಿ ಗೋಪಾಲ್ ಚರ್ಚಿಸಿದರು.
ಮತ್ತೊಂದು ಪತ್ರಕರ್ತರ ನಿಯೋಗ ಶಿವಸುಬ್ರಮಣ್ಯಂ ಬಂಧನ ಕುರಿತು ತಮಿಳುನಾಡು ಸರ್ಕಾರದ ವಿವರಣೆ ಕೇಳಲಿದೆ. ಈ ನಿಯೋಗ ಹಾಗೂ ಗೋಪಾಲ್ ನೇತೃತ್ವದ ನಾಲ್ಕು ಪತ್ರಕರ್ತರ ನಿಯೋಗ ಬರುವ ಶನಿವಾರ ಪತ್ರಕರ್ತರ ನಾಲ್ಕೂ ಸಂಘಟನೆಗಳಿಗೆ ವರದಿಗಳನ್ನು ಸಲ್ಲಿಸಲಿವೆ.
ರಾಜ್ ಬಿಡುಗಡೆಗೆ ಹಣ ಇಸಿದುಕೊಂಡಿಲ್ಲ : ಇದೇ ದಿನ ಚೆನ್ನೈನ ಹೈಕೋರ್ಟಿನ ಆವರಣದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಟಿಎನ್‌ಎಲ್‌ಎ ನಾಯಕ ಮಾರನ್, ಡಾ.ರಾಜ್ ಬಿಡುಗಡೆ ವೇಳೆ ನಗದು ಕೊಡು- ಕೊಳ್ಳುವಿಕೆ ನಡೆದಿಲ್ಲ. ರಾಜ್ಯ ಸರ್ಕಾರ ಸುಖಾ ಸುಮ್ಮನೆ ಹುಟ್ಟುಹಾಕಿರುವ ಸುದ್ದಿಯಿದು ಎಂದಿದ್ದಾನೆ. ಪೊಲೀಸ್ ವಶದಲ್ಲಿರುವ ಅವರ ಬಂಧನದ ಅವಧಿಯನ್ನು ವಿಸ್ತರಿಸುವ ಬಗ್ಗೆ ವಿಚಾರಣೆಗೆಂದು ಹೈಕೋರ್ಟಿಗೆ ಆತನನ್ನು ಕರೆತರಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications