Get Updates
Get notified of breaking news, exclusive insights, and must-see stories!

20500 ಅಂಗವಿಕಲರಿಗೆ ಉಚಿತ ಬಸ್‌ಪಾಸ್‌- ಮೋಟಮ್ಮ ಭರವಸೆ

ಬೆಂಗಳೂರು : ರಾಜ್ಯದಲ್ಲಿನ ಅಂಗವಿಕಲರಿಗೆ ಉಚಿತ ಬಸ್‌ ಪಾಸ್‌ ನೀಡಲು ರಾಜ್ಯ ಸರ್ಕಾರ ನಿಶ್ಚಯಿಸಿದ್ದು , ಪ್ರಸಕ್ತ ವರ್ಷ 20,500 ಅಂಗವಿಕಲರಿಗೆ ಬಸ್‌ಪಾಸ್‌ ವಿತರಿಸಲು ನಿರ್ಧರಿಸಿದೆ.

ಡಿಸೆಂಬರ್‌ ಮೂರರಂದು ವಿಶ್ವ ಅಂಗವಿಕಲರ ದಿನಾಚರಣೆಯನ್ನು ಸರ್ಕಾರ ಆಚರಿಸಲಿದ್ದು , ಈ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ವಿ.ಎಸ್‌.ರಮಾದೇವಿ ಹಾಗೂ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಭಾಗವಹಿಸುವರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೋಟಮ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅಂಗವಿಕಲ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ದುಪ್ಪಟುಗೊಳಿಸಲಾಗುವುದು. ಬೆಳಗಾವಿ ಮತ್ತು ತುಮಕೂರಿನಲ್ಲಿ ಜಿಲ್ಲಾ ಪುನರ್‌ ವಸತಿ ಕೇಂದ್ರಗಳನ್ನು ಡಿಸೆಂಬರ್‌ ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಮೋಟಮ್ಮ ತಿಳಿಸಿದರು.

ವಿಶ್ವ ಅಂಗವಿಕಲರ ದಿನಾಚರಣೆಯಂದು ಗಂಗಾವತಿಯ ಅಂಗವಿಕಲರ ಪುನರ್‌ವಸತಿ ಸಂಸ್ಥೆಗೆ 25 ಸಾವಿರ ರುಪಾಯಿ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂಗವಿಕಲರಿಗೆ ಅಕ್ಷರ ಕಲಿಸಿದ ಶಿಕ್ಷಕರಾದ ವಸಂತಕುಮಾರ ಶೆಟ್ಟಿ , ಗಿರಿಜಾಶಾಸ್ತ್ರಿ , ವಿಜಯಲಕ್ಷ್ಮಿ ಅವರುಗಳಿಗೆ ಪ್ರಶಸ್ತಿ ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಬಿ.ಟಿ.ಪ್ರಕಾಶ್‌, ಗಿರಿಧರ್‌, ಯತೀಶ್‌, ಅಶೋಕ್‌ಕುಮಾರ್‌ ಎ, ಮೇರಿ ಮಾಸ್ಕರ್‌ ನಾಸ್‌ ಹಾಗೂ ಘನಶ್ಯಾಮ ತುಲಾ, ಜನತಾಬಾಂಡ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.

ಅಂಗವಿಕಲ ಮಕ್ಕಳ ಸಮಗ್ರ ಶಿಕ್ಷಣ ಎನ್ನುವ ಕೇಂದ್ರ ಸರ್ಕಾರದ ಯೋಜನೆಯನ್ನು ರಾಜ್ಯದ ಶಿರಾ, ಪಾವಗಡ, ಮಧುಗಿರಿ, ಚಳ್ಳಕೆರೆ, ಹಿರಿಯೂರು, ಅರಕಲಗೂಡು, ಹೊಳೆನರಸಿಪುರ, ಕೊಪ್ಪ , ಹೊನ್ನಾಳಿ, ಹಳಿಯಾಳಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಮೋಟಮ್ಮ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+