ಡಿಸೆಂಬರ್ 2ರ ಭಾನುವಾರ ಮಹಾತ್ಮನ ರಸ್ತೆ ಮೇಲೆ ಮಕ್ಕಳಾಟ
ಬೆಂಗಳೂರು : ಆಡೋಣು ಬಾ.. ಹಾಡೋಣು ಬಾ ಪೊಲೀಸು ಅಂಕಲ್‌ಗಳ ನಡುವೆ. ಎಂ.ಜಿ.ರೋಡೆಂಬ ಮೈದಾನದ ಮೇಲೆ. ...
ನಗರದ ಪ್ರತಿಷ್ಠಿತ ಶಾಲೆಗಳ ಮಕ್ಕಳು ಭಾನುವಾರ ಹಮ್ಮಿಕೊಂಡಿರುವ ಪಿಕ್‌ನಿಕ್ ಇದು. ಪಿಕ್‌ನಿಕ್ ಆಯೋಜಿಸಿರುವುದು ಎಂ.ಜಿ.ರೋಡ್ ಪ್ರೇಮಿ ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಎಚ್.ಟಿ.ಸಾಂಗ್ಲಿಯಾನ. ಪೊಲೀಸರ ದಂಡಿನ ಸಮ್ಮುಖದಲ್ಲಿ ಡಿಸೆಂಬರ್ 2ರಂದು ಬೆಳಗ್ಗೆ 9.30 ಗಂಟೆಯಿಂದ 11.30 ಗಂಟೆವರೆಗೆ ಮಕ್ಕಳಾಟ. ಅನಿಲ್‌ಕುಂಬ್ಳೆ ವೃತ್ತದಿಂದ ಬ್ರಿಗೇಡ್ ರೋಡ್ ಜಂಕ್ಷನ್‌ವರೆಗೆ ಎರಡು ತಾಸು ಮಕ್ಕಳ ಮೇಳ.
ಆಟದ ಕಾರು, ಟ್ರೆೃಸಿಕಲ್ಲು, ಬೈಸಿಕಲ್ಲು, ಸ್ಕೇಟಿಂಗು ಏನು ಬೇಕಾದರೂ ಆಡಬಹುದು. ಹಾಡಿ, ಕುಣಿದು ಕುಪ್ಪಳಿಸಬಹುದು. ಅಂದಹಾಗೆ, ಬೈಸಿಕಲ್ಲು, ಟ್ರೆೃಸಿಕಲ್ಲು, ಆಟದ ಕಾರುಗಳನ್ನು ಕೆಲವು ಅಂಗಡಿಯವರು ರಸ್ತೆಗೆ ತಂದಿಡುತ್ತಾರೆ. ಜನರೇ ತರುವ ಅಗತ್ಯವಿಲ್ಲ. ಕಾರುಗಳನ್ನು ಬಿಆರ್‌ವಿ ಪೆರೇಡ್ ಗ್ರೌಂಡ್ ಹತ್ತಿರ ನಿಲ್ಲಿಸಿ, ಅಪ್ಪ- ಮ್ಮಂದಿರೂ ಮಕ್ಕಳಾಟ ನೋಡಬಹುದು. ಮಕ್ಕಳು ತಿಂದು ಬಿಸುಡುವ ಪದಾರ್ಥಗಳ ತುಂಬಿಕೊಳ್ಳಲು ಪಾಲಿಥಿನ್ ಚೀಲಗಳನ್ನು ತರುವುದು ಕಡ್ಡಾಯ. ಯಾಕೆಂದರೆ, ಎಂ.ಜಿ. ರಸ್ತೆ ಶುಚಿಯಾಗಿರಬೇಕು !
ಆಟದ ಜೊತೆಗೇ ಮಕ್ಕಳಿಗೆ ಪೊಲೀಸರಿಂದ ಟ್ರಾಫಿಕ್ ರೂಲ್ಸಿನ ಪಾಠ. ಅಪರಾಧ ಮಾಡಬಾರದು ಎಂಬ ಬೋಧ. ಪ್ರಥಮ ಚಿಕಿತ್ಸೆ ಮಾಡುವುದನ್ನೂ ಹೇಳಿಕೊಡುತ್ತಾರೆ. ಭಾನುವಾರದ ಮುಂಜಾನೆ ಎರಡು ತಾಸಿನಲ್ಲಿ ಮಜಾ ಮಾಡುತ್ತಲೇ ಬೆಂಗಳೂರಿನ ಟ್ರಾಫಿಕ್ ಎಂಬ ದೌರ್ಭಾಗ್ಯವನ್ನು ಅರಿಯುವ ಅಪರೂಪದ ಅವಕಾಶ ಮಕ್ಕಳಿಗೆ. ಕುಣಿದು- ಮೆರೆದು, ಪಾಠ ಕಲಿತ ನಂತರ ಫುಡ್‌ವರ್ಲ್ಡ್ ಜಾಯಿಂಟ್‌ನಲ್ಲಿ ಸುಸ್ತಾದ ಮಕ್ಕಳಿಗೆ ನೆಸ್ಟ್ಲೆಯ ಮೈಲೋ ಮುಫತ್ತು !
ಮಕ್ಕಳಾಟದ ಸಮಯದಲ್ಲಿ ವಾಹನಗಳ ಸಂಚಾರವನ್ನು ಚರ್ಚ್ ಸ್ಟ್ರೀಟ್, ಕನ್ನಿಂಗ್‌ಹ್ಯಾಂಮ್ ರಸ್ತೆ ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಯಿಂದ ಬದಲಿಸಲಾಗುವುದು. ಪ್ರತಿ ತಿಂಗಳ ಮೊದಲ ಭಾನುವಾರ ಮುಂಜಾನೆ 8ರಿಂದ 10 ಗಂಟೆವರೆಗೆ ಇದೇ ರೀತಿ ಎಂ.ಜಿ.ರಸ್ತೆಯಲ್ಲಿ ಮಕ್ಕಳಾಟ ಇರುತ್ತದೆ. ಈ ಅವಕಾಶ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಮಕ್ಕಳಿಗೆ ಮಾತ್ರ. ಕೊಳಗೇರಿ ಮಕ್ಕಳೂ ಇಲ್ಲಿ ಬಂದು ಆಡುವ ನಿರೀಕ್ಷೆ ಸಾಂಗ್ಲಿಯಾನ ಅವರದು.
ಎಂ.ಜಿ.ರಸ್ತೆಯ ಜೊತೆಗೆ ಸಾಂಗ್ಲಿಯಾನ ಮಕ್ಕಳ ಪ್ರೇಮಿಯೂ ಹೌದೆ?
ಮಕ್ಕಳಿಗಾಗಿ ಸಾಂಗ್ಲಿಯಾನ ಏನೆಲ್ಲಾ ಮಾಡುತ್ತಿದ್ದಾರೆ. ರಸ್ತೆ ಮೇಲೆ ಆಟ- ಪಾಠ ಆಯೋಜಿಸುವುದರ ಜೊತೆಗೆ ಪೊಲೀಸ್ ಠಾಣೆಗಳ ನೋಡುವ ಅವಕಾಶವನ್ನೂ ಕಲ್ಪಿಸಲಿದ್ದಾರೆ. ‘ಪೊಲೀಸರು, ಠಾಣೆ ಎಂದರೆ ಎಷ್ಟೋ ಮಕ್ಕಳಿಗೆ ಭಯವಿದೆ. ಪೊಲೀಸರ ಬಗ್ಗೆ ಅನೇಕ ಭ್ರಮೆಗಳೂ ಇವೆ. ಅವನ್ನೆಲ್ಲಾ ಹೋಗಲಾಡಿಸುವ ಉದ್ದಿಶ್ಯದಿಂದ ಶಾಲಾ ಮಕ್ಕಳನ್ನು ಕರೆತಂದು, ಪೊಲೀಸ್ ಠಾಣೆಗಳನ್ನು ತೋರಿಸಲಾಗುವುದು’ ಎನ್ನುತ್ತಾರೆ ಸಾಂಗ್ಲಿಯಾನ.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನ ವಾಚ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications