ದೀಪಾವಳಿ ನಂತರದ ಬಳವಳಿ! ಶೇ.13ರಷ್ಟು ವಿದ್ಯುತ್ ದರ ಏರಿಕೆ?
ಬೆಂಗಳೂರು : ವಿದ್ಯುತ್ ದರವನ್ನು ಪ್ರತಿಶತ 13ರಷ್ಟು ಏರಿಸಲು ರಾಜ್ಯ ಸರ್ಕಾರ ಕೆಪಿಟಿಸಿಎಲ್‌ಗೆ ಒಪ್ಪಿಗೆ ಸೂಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿದ್ಯುತ್ ದರ ಏರಿಸದೆ ಅನ್ಯ ಮಾರ್ಗವೇ ಇಲ್ಲ ಎಂದು ಶುಕ್ರವಾರ ನಡೆದ ದೀರ್ಘ ಕಾಲಿಕ ಸಂಪುಟ ಸಭೆಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಸಿದರು. ಕೆಪಿಟಿಸಿಎಸ್ ಅಧಿಕಾರಿಗಳು ಹಾಗೂ ಸಚಿವ ಸಂಪುಟ ವಿದ್ಯುತ್ ದರ ಏರಿಕೆ ಬಗ್ಗೆ ನಡೆಸಿದ ಚರ್ಚೆಯಲ್ಲಿ ಪರ- ವಿರೋಧ ದನಿಗಳೆದ್ದವು. ವಿದ್ಯುತ್ ಸೋರಿಕೆ ತಡೆಯುವ ಹಾಗೂ ಕಳವಿಗೆ ಬೆನ್ನು ತಟ್ಟುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಕುರಿತು ಮಾತುಗಳು ಹೊಮ್ಮಿದವು.
ರಾಜ್ಯ ಸರ್ಕಾರ 1550 ಕೋಟಿ ರುಪಾಯಿ ಸಹಾಯ ಧನ ಕೊಡುತ್ತಿದ್ದರೂ, ನಿಗಮ 2800 ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಶತ 13ರಷ್ಟು ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಬಹುದೆಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications