ಪಾಕ್‌ನಲ್ಲಿನ ರಾಯಭಾರಿಕಚೇರಿಗೆ ಬೀಗ, ಝಹೀಫ್‌ಗೆ ಬೇಜಾರು

ಇಸ್ಲಮಾಬಾದ್‌: ಅಬ್ದುಲ್‌ ಸಲಾಂ ಝಹೀಫ್‌ ಅವರೀಗ ಅಸಮಾಧಾನದ ಅಸಂತೃಪ್ತ ಮನುಷ್ಯ. ಮಿತ್ರ ರಾಷ್ಟ್ರವೆಂದು ನಂಬಿದ್ದ ಪಾಕಿಸ್ತಾನ ಬೆನ್ನು ತಿರುಗಿಸಿದೆ. ಪಾಕಿಸ್ತಾನದಲ್ಲಿನ ತಾಲಿಬಾನ್‌ನ ರಾಯಭಾರಿ ಕಚೇರಿಯನ್ನು ಮುಷರ್ರಫ್‌ ಆಡಳಿತ ಮುಚ್ಚುವಂತೆ ಆದೇಶ ಹೊರಡಿಸಿದೆ. ಪರಿಣಾಮ, ಈವರೆಗೆ ಪಾಕ್‌ನಲ್ಲಿ ತಾಲಿಬಾನ್‌ ರಾಯಭಾರಿಯಾಗಿದ್ದ ಝಹೀಫ್‌ಗೆ ಬೇಜಾರು.

ಪಾಕಿಸ್ತಾನದ ಕ್ರಮದಿಂದಾಗಿ ಆಪ್ಘಾನಿಸ್ತಾನದಲ್ಲಿನ ನೆರವು ಕಾರ್ಯಕ್ರಮಗಳಿಗೆ ಧಕ್ಕೆಯಾಗುವುದು. ಅಂತರರಾಷ್ಟ್ರೀಯ ಸಂಸ್ಥೆಗಳು ಆಪ್ಘನಿಸ್ತಾನದೊಂದಿಗೆ ಸಂಪರ್ಕ ಸಾಧಿಸಲು ಕಷ್ಟವಾಗುವುದು ಎಂದು ಝಹೀಫ್‌ ಹೇಳಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಪಾಕ್‌ ಕ್ರಮದ ಬಗ್ಗೆ ಅಸಂತೋಷ ವ್ಯಕ್ತಪಡಿಸಿದ ಅವರು ನಿಟ್ಟುಸಿರಿಟ್ಟರು.

ರಾಯಭಾರಿ ಕಚೇರಿ ಮುಚ್ಚಿದರೂ ಇಸ್ಲಮಾಬಾದ್‌ನಲ್ಲೇ ಝಹೀಫ್‌ ಉಳಿಯುತ್ತಾರಂತೆ. ಏಕೆಂದರೆ, ತವರು ಆಪ್ಘನಿಸ್ತಾನದಲ್ಲಿ ಪರಿಸ್ಥಿತಿ ಸರಿಯಿಲ್ಲ . ಆ ಕಾರಣದಿಂದಾಗಿ ಪಾಕ್‌ನಲ್ಲೇ ಇರುವ ಆಸೆ ಝಹೀಫ್‌ಗೆ. ಅಂದಹಾಗೆ, ಪಾಕ್‌ನಲ್ಲಿ ನ ತಾಲಿಬಾನ್‌ ಕಚೇರಿಯನ್ನು ಮುಚ್ಚುವ ನಿರ್ಧಾರ ಹೊರಬಿದ್ದದ್ದು ನವಂಬರ್‌ 22 ರಂದು. ಇದಕ್ಕೂ ಮುನ್ನ ಕ್ವೆಟ್ಟಾ ಹಾಗೂ ಪೇಷಾವರ್‌ನಲ್ಲಿನ ತಾಲಿಬಾನ್‌ ರಾಜತಾಂತ್ರಿಕರು ಕಳೆದ ವಾರ ತಮ್ಮ ಕಚೇರಿಗಳನ್ನು ಮುಚ್ಚಿದ್ದರು.

(ಪಿಟಿಐ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+