ಕ್ಯಾನ್ಸರ್‌ಗೆ ಹೊಸ ಚಿಕಿತ್ಸೆ : ಕಿದ್ವಾಯಿ ವೈದ್ಯರಿಗೆ 20 ಲಕ್ಷ ರು. ದೇಣಿಗೆ
ಬೆಂಗಳೂರು : ಕರ್ನಾಟಕದಲ್ಲಿ ಪ್ರತಿವರ್ಷ 35 ಸಾವಿರ ಮಂದಿ ಕ್ಯಾನ್ಸರ್ ರೋಗದ ತಪಾಸಣೆಗೊಳಗಾಗುತ್ತಾರೆ. ಈ ಪೈಕಿ 5 ಸಾವಿರ ಮಂದಿ ಬದುಕುವುದಿಲ್ಲ. ಕಾರಣ, ಚಿಕಿತ್ಸೆ ನೀಡಬಹುದಾದ ಹಂತವನ್ನು ರೋಗ ಮೀರಿಬಿಟ್ಟಿರುತ್ತದೆ.
ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಡಾ। ಎಂ.ವಿಜಯ ಕುಮಾರ್ ಶನಿವಾರ ಎಕ್ಸ್‌ಪ್ಲೋಸಿಟಿ ಡಾಟ್ ಕಾಂಗೆ ಈ ವಿಷಯ ತಿಳಿಸಿದ್ದಾರೆ. ಟೆರ್ರಿ ಫಾಕ್ಸ್ ಸಂಸ್ಥೆ ಕಳೆದ ನವೆಂಬರ್ 4ರಂದು ಅಭಿಯಾನ ನಡೆಸಿ, ಕ್ಯಾನ್ಸರ್ ನಿರ್ಮೂಲನೆಗೆಂದು ಸಂಗ್ರಹಿಸಿದ ಹಣದಲ್ಲಿ 20 ಲಕ್ಷ ರುಪಾಯಿಯನ್ನು ಶುಕ್ರವಾರ ಡಾ। ಎಂ.ವಿಜಯ ಕುಮಾರ್ ಅವರಿಗೆ ಕೊಟ್ಟಿದೆ. ಈ ಕುರಿತು ಅವರು ಮಾತಾಡುತ್ತಿದ್ದರು. ಕ್ಯಾನ್ಸರ್ ನಿರ್ಮೂಲನೆಗಾಗಿ ಈ ವೈದ್ಯ ನಡೆಸುತ್ತಿರುವ ಸಂಶೋಧನೆಗೆ ಈ ಹಣ ವಿನಿಯೋಗವಾಗಲಿದೆ.
ಭಾರತದಲ್ಲಿ ನ ಕ್ಯಾನ್ಸರ್ ರೋಗಿಗಳ ಪೈಕಿ ಮೂರನೇ ಒಂದರಷ್ಟು ಬಾಯಿಗೆ ಸಂಬಂಧಿಸಿದ್ದು. ಕಿದ್ವಾಯಿಯಲ್ಲಿ ನಾವು ಪತ್ತೆ ಮಾಡುವ ರೋಗಿಗಳಲ್ಲಿ ಪ್ರತಿಶತ 25ರಷ್ಟು ಜನರಿಗೆ ಬಾಯಿಗೆ ಸಂಬಂಧಿಸಿದ ಕ್ಯಾನ್ಸರ್ ಇರುತ್ತದೆ. ಈ 25 ಜನರಲ್ಲಿ 11 ಪುರುಷರು, 14 ಹೆಂಗಸರು. ಬಾಯಿ ಕ್ಯಾನ್ಸರ್‌ಗೆ ನೀಡುತ್ತಿರುವ ಓಬಿರಾಯನ ಕಾಲದ ಚಿಕಿತ್ಸೆಯನ್ನು ಮೀರಿ ಬೆಳೆಯುವ ಮಹದಾಸೆ ನನ್ನದು. ಅದಕ್ಕಾಗಿ ಕೆಮಿಯೋಥೆರಪಿ ಮಾಡಬೇಕೆಂದಿದ್ದೇನೆ. ಸಿಸ್‌ಪ್ಲಾರಿನ್ ಮತ್ತು ಪ್ಯಾಕ್ಲಿಟ್ಯಾಕ್ಸೆಲ್‌ನಂಥಾ ಏಜೆಂಟ್‌ಗಳನ್ನು ಬಳಸಿ, ಸಂಶೋಧನೆ ನಡೆಸುತ್ತಿದ್ದೇನೆ ಎಂದು ವಿಜಯಕುಮಾರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications