ಎಸ್‌ಟಿಎಫ್ ಪೊಲೀಸರಿಂದ ಸೇತುಕುಳಿ ಅಣ್ಣ ವೀರಪ್ಪನ್ ಬಂಧನ
ಸೇಲಂ : ಬಂಧಿತ ವ್ಯಕ್ತಿ ಅಣ್ಣಾವ್ರನ್ನು ಅಪಹರಿಸಿದ್ದ ದಂತಚೋರ ವೀರಪ್ಪನ್ ಅಲ್ಲ. ಆತನ ಬಂಟ ಸೇತುಕುಳಿ ಗೋವಿಂದನ್ ಅಣ್ಣ , ವೀರಪ್ಪನ್. ಹೀಗಾಗಿ ಜೂನಿಯರ್ ವೀರಪ್ಪನ್ ಎನ್ನಬಹುದು.
ತನ್ನ ಮನೆಯಲ್ಲಿ 2 ಲಕ್ಷ ರುಪಾಯಿ ಇಟ್ಟುಕೊಂಡಿದ್ದಾನೆ ಎಂಬ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದ್ದು, ಆ ಹಣ ವೀರಪ್ಪನ್ ಮೂಲಕವೇ ಹರಿದು ಬಂದಿರುವ ಶಂಕೆಯಿದೆ.
ಜೂನಿಯರ್ ವೀರಪ್ಪನ್ ಬಂಧನದ ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. 15 ದಿನಗಳವರೆಗೆ ಈತನನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಲಾಗಿದೆ. ಈತನ ಬಂಧನದ ಮೂಲಕ ಕಳೆದ 10 ದಿನಗಳಲ್ಲಿ ಬಂಧಿತರಾಗಿರುವ ವೀರಪ್ಪನ್ ನಿಕಟವರ್ತಿಗಳ ಸಂಖ್ಯೆ ಏಳಕ್ಕೇರಿದೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications