ತುಮಕೂರಿನ ಅಕ್ಕತಂಗಿಕೆರೆ ಸೇತುವೆ ಮೇಲೆ ಅಪಘಾತ: 3 ಸಾವು
ತುಮಕೂರು : ಅಕ್ಕತಂಗಿಕೆರೆ ಸೇತುವೆ ಮೇಲೆ ಶುಕ್ರವಾರ ಮರಳು ಲಾರಿಯಾಂದು ಟಿವಿಎಸ್ ಮೊಪೆಡ್ ಹಾಗೂ ಸೇತುವೆಯ ಗೋಡೆಗೆ ಗುದ್ದಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಟಿವಿಎಸ್‌ನಲ್ಲಿ ಹೋಗುತ್ತಿದ್ದ ಅಂಚೆ ಇಲಾಖೆ ನೌಕರ ಗಂಗಹನುಮಯ್ಯ (45) ಮತ್ತು ಆಂಜಿನಪ್ಪ ಹಾಗೂ ಲಾರಿ ಚಾಲಕ ಬಾಷಾ ಮೃತ ಪಟ್ಟಿರುವ ದುರ್ದೈವಿಗಳು. ಟಿವಿಎಸ್ ಹಾಗೂ ಲಾರಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದವು. ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮೊಪೆಡ್‌ಗೆ ಗುದ್ದಿ, ನಂತರ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆಯಿತು. ಲಾರಿಯಲ್ಲಿದ್ದ ಮೂವರು ಕೂಲಿ ಕರ್ಮಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಗಂಗಹನುಮಯ್ಯ ಮತ್ತು ಆಂಜಿನಪ್ಪ ಬೆಳಗುಂಬ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications