ಗಿಲಿಗಿಲಿ ಗಿಲಕ್ಕು ...
*ರಾಜಲಕ್ಷ್ಮಿ ಕೆ.ರಾವ್
ಎದುರಿಗೆ ಮಲಗಿದ ಬಾಲಕ ಮೂರು ತುಂಡಾಗುತ್ತಾನೆ. ಪ್ರೇಕ್ಷಕರ ಉಸಿರು ನಿಂತಂತೆ ಭಾಸ. ಕತ್ತಿಯಿಂದ ಹುಡುಗನ ತುಂಡು ತುಂಡು ಮಾಡಿದವರು ಮಾತ್ರ ನಗುತ್ತಲೇ ಇದ್ದಾರೆ. ಇದು ಜಾದೂ ಜಗತ್ತು. ಅಲ್ಲಿ ಪೆಟ್ಟಿಗೆಯಾಳಗೆ ಹೋದ ಸುಂದರಿ ಕರಡಿಯಾಗಿ ಹೊರಬರುತ್ತಾಳೆ. ನಾಣ್ಯದಿಂದ ಚಕ್ಕಂತ ಹೂವಿನ ಗುಚ್ಛವೊಂದು ಕೈಗೆ ಬರುತ್ತದೆ. ಇಂಥ ನೂರಾರು ವಿಶೇಷಗಳ ಗಿಲಿಗಿಲಿ-2001 ಜಾದೂಗಾರರ ಸಮ್ಮೇಳನ ಉಡುಪಿ ಮಠದ ರಾಜಾಂಗಣದಲ್ಲಿ ಶುಕ್ರವಾರ(ನ.23) ಆರಂಭವಾಗಿದೆ.
ತನ್ನೂರಿನ ಕೀರ್ತಿ ಸಾಗರ ದಾಟಲಿ ಎಂಬ ಆಸೆಯಿಂದ ಅಂತರರಾಷ್ಟ್ರೀಯ ಜಾದೂಗಾರರ ಸಮ್ಮೇಳನವನ್ನು ಮೂರನೇ ಬಾರಿಗೆ ಆಯೋಜಿಸಿದ ಕೀರ್ತಿ ಸಲ್ಲಬೇಕಾದದ್ದು ವಿಶ್ವ ಪ್ರಸಿದ್ಧ ಜಾದೂಗಾರ ಪ್ರೊ. ಶಂಕರ್ ಜಾದೂ ಅವರಿಗೆ. ನೀವು ನಂಬುತ್ತೀರೋ ಇಲ್ಲವೋ, ಈ ಸಮ್ಮೇಳನ ನಡೆಯುವುದಕ್ಕೆ ಶಂಕರ್‌ಜಾದೂ ಅವರು ತಮ್ಮ ಹಿತ್ತಲು ಮತ್ತು ಮನೆಯನ್ನು 16 ಲಕ್ಷ ರೂಪಾಯಿಗೆ ಅಡವಿಟ್ಟಿದ್ದಾರೆ. ಸ್ಥಳೀಯ ಸಹಕಾರಿ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡ 16 ಲಕ್ಷ ರೂಪಾಯಿ ಹಣದಲ್ಲಿ ಗಿಲಿಗಿಲಿ - 2001 ಸಮಾವೇಶ ಶುರುವಾಗಿದೆ. ಇನ್ನು ಮೂರು ದಿನಗಳ ಕಾಲ ಉಡುಪಿಯ ಬೀದಿ ಬೀದಿಗೂ ಯಕ್ಷಿಣಿಯ ಅಮಲು.
ಸಾವಿರಾರು ಪ್ರೇಕ್ಷಕರು ಹಾಗೂ 30ಕ್ಕೂ ಹೆಚ್ಚು ದೇಶದ ಜಾದೂಗಾರರು ಸೇರುವ ಈ ಸಮ್ಮೇಳನಕ್ಕಾಗಿ ಬೆವರು ಸುರಿದ ಶಂಕರ್‌ಜಾದೂ ಮೂರನೆಯ ಬಾರಿಗೆ ಈ ಸಮ್ಮೇಳನವನ್ನು ಆಯೋಜಿಸಿದ್ದಾರೆ. ಎರಡು ಬಾರಿ ಸೋಲುಂಡರೂ ಮತ್ತೆ ಯಾಕೆ ಈ ಪ್ರಯತ್ನ ಎಂದು ಕೇಳಿದರೆ, ಜಾದೂ ಕನಸಿಗೆ ಬೆನ್ನಾಗಿ ನಿಂತ ಉಡುಪಿಯನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂಬ ಆಸೆ ಎಂದು ಜಾದೂ ಹೇಳುತ್ತಾರೆ; ಇದು ಕೊನೆ ಬಾರಿ ಎಂದು ಸಣ್ಣದಾಗಿ ಸೇರಿಸುತ್ತಾರೆ. ಏಕೆಂದರೆ ಜಾದೂ ಹುಚ್ಚಿಗೆ ಮನೆ ಅಡವಿಟ್ಟಾಗಿದೆ.
ಸಿಂಡಿಕೇಟ್ ಬ್ಯಾಂಕ್ ಮ್ಯಾಜಿಕ್ಕು, ಮನೆ ಅಡವಿಟ್ಟ ಜಾದೂಗಾರ
ಸಿಂಡಿಕೇಟ್ ಬ್ಯಾಂಕ್ ಮುಖ್ಯ ಪ್ರಾಯೋಜಕತ್ವ ವಹಿಸುತ್ತದೆ ಎಂದು ನಂಬಿದ್ದ ಶಂಕರ್ ನಿರೀಕ್ಷೆ ಸುಳ್ಳಾಗಿದೆ. ರಾಜ್ಯ ಸರಕಾರದ ನೆರವು ಕೇಳಿದರೆ ವಿಷಾದ ಪತ್ರ ಕೈ ಸೇರಿತು. ಕೇಂದ್ರ ಸರ್ಕಾರದಿಂದ ಅದೂ ಇಲ್ಲ. ಎಲ್ಲವನ್ನೂ ನಾನು ಭಗವಂತನ ಇಚ್ಛೆಗೆ ಬಿಟ್ಟಿದ್ದೇನೆ ಎಂದು ಶಂಕರ್ ಎರಡೂ ಕೈ ಮೇಲೆತ್ತುತ್ತಾರೆ.
ಶಂಕರ್ ಅವರದು ಹೆಂಡತಿ ಲಕ್ಷ್ಮಿ, ಮಗಳು ಯಶಸ್ವಿನಿ ಮತ್ತು ಜೂನಿಯರ್ ಶಂಕರ್ ತೇಜಸ್ವಿ ಜೊತೆಗಿನ ತೃಪ್ತ ಕುಟುಂಬ. ನಾಲ್ಕೂ ಮಂದಿ ಜಾದೂಗಾರರು. ಜಾದೂ ಪ್ರವೃತ್ತಿಯ ಜೊತೆಗೆ ಜಾದೂ ಜಗತ್ತಿನ ಬಗ್ಗೆ ಜನರಲ್ಲಿ ಆಸಕ್ತಿ, ಜಾಗೃತಿ ಉಳಿಸುವುದಕ್ಕೂ ಶ್ರಮಿಸುತ್ತಿರುವ ಕುಟುಂಬ. ದೇಶದಲ್ಲಿಯೇ, ಐದು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಏಕೈಕ ಕುಟುಂಬವಿದು. ಶಂಕರ್ ಅವರ ವರ್ಲ್ಡ್ ಆಫ್ ಮ್ಯೂಸಿಕ್ ಎಂಬುದೊಂದು ಜಾದೂಲೋಕ.
ಜಾದೂ ಮಾತ್ರವಲ್ಲ , ಸಮಾಜಸೇವೆಯಲ್ಲೂ ಮುಂದು
ಜಾದೂಗಷ್ಟೇ ವರ್ಲ್ಡ್ ಆಫ್ ಮ್ಯಾಜಿಕ್‌ನ ಚಟುವಟಿಕೆ ಸೀಮಿತವಾಗಿಲ್ಲ . ಸಮಾಜಸೇವೆಯಲ್ಲೂ ಶಂಕರ್ ಕುಟುಂಬ ತೊಡಗಿಸಿಕೊಂಡಿದೆ. ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲೂ ಜಾದೂ ಫಲಿತಾಂಶಗಳನ್ನು ಬಳಸಿಕೊಳ್ಳುವ ಪ್ರಯತ್ನಗಳಲ್ಲಿ ಕುಟುಂಬ ಕ್ರಿಯಾಶೀಲವಾಗಿದೆ. ಕುಟುಂಬದ ಜೊತೆಗೆ ಕೈ ಜೋಡಿಸಿದ ಭಾರವಿ ದೇರಾಜೆ, ಶಿವಾನಂದ ರೈ, ಈಶ್ವರ ಕುಮಾರ್, ಚಿರಂತನ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದರು. ಪ್ರಸ್ತು ತ ಮಂಗಳೂರಿನಲ್ಲಿ ಚಿರಂತನದಿಂದ ಒಂದು ವೃದ್ಧಾಶ್ರಮವೂ ಕಾರ್ಯ ನಿರ್ವಹಿಸುತ್ತಿದೆ.
‘ಜಗತ್ತಿನ ಜಾದೂಗಾರರೆಲ್ಲರೂ ನನ್ನಿಂದ ಎಷ್ಟೊಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವ ವಹಿಸಿಕೊಳ್ಳಲಿಲ್ಲ ಎಂಬ ಒಂದೇ ಕಾರಣಕ್ಕೆ ಸಮ್ಮೇಳನ ನಡೆಸದಿರಲಿಕ್ಕಾಗುತ್ತದೆಯೇ’ ಎನ್ನುವ ಶಂಕರ್ ಸಮ್ಮೇಳನಕ್ಕಾಗಿ ಮನೆ ಅಡವಿಟ್ಟಿದ್ದಾರೆ. ಮುಂದೆಯೂ ಸಮ್ಮೇಳನ ಆಯೋಜಿಸುವ ಯೋಚನೆ ಇದೆಯಾ ಅಂತ ಕೇಳಿದರೆ , ಖಂಡಿತಾ ಇಲ್ಲ ಎನ್ನುತ್ತಾರೆ, ಬೇಜಾರಿನಿಂದ. ಅಂದರೆ, ಉಡುಪಿಯಲ್ಲಿ ಅಂತರರಾಷ್ಟ್ರೀಯ ಜಾದೂಗಾರರ ಸಮ್ಮೇಳನ ನಡೆಯುವುದು ಇದು ಕೊನೆಯ ಸಲ. ಕರಾವಳಿಗೆ ಇಷ್ಟೊಂದು ಬಡತನ ಬಂದದ್ದು ಯಾವಾಗ?
ವಾರ್ತಾ ಸಂಚಯ
ಮುಖಪುಟ / ಲೋಕೋಭಿನ್ನರುಚಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications