Get Updates
Get notified of breaking news, exclusive insights, and must-see stories!

ಕೊಡಲಿ ಆತಂಕದಿ ಚಿತ್ರದುರ್ಗದ 197 ಹುಣಸೆ,ಅಂಜೂರ,ಬೇವು

ಚಿತ್ರದುರ್ಗ: ಇಲ್ಲಿನ ಹೊಳಲ್ಕೆರೆಯ ಹಾದಿಪಕ್ಕದಲ್ಲಿನ ಸುಮಾರು 197 ಮರಗಳನ್ನು ರಾಷ್ಟ್ರೀಯ ಹೆದ್ದಾರಿ 13ರ ಅಗಲೀಕರಣ ಕಾರ್ಯಕ್ಕಾಗಿ ಕಡಿಯಲು ನಿರ್ಧರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ವಿಭಾಗ ಈ ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಸುಮಾರು 422 ಕಿಮೀ ದೂರದವರೆಗಿನ ರಸ್ತೆಯನ್ನು ಅಗಲಗೊಳಿಸಲಾಗುವುದು. ಈ ಪ್ರದೇಶದಲ್ಲಿ 197 ಬೃಹತ್‌ ಗಾತ್ರದ ಮರಗಳು ಕಾಲುದಾರಿಗೆ ನೆರಳು ನೀಡುತ್ತಿವೆ. ಆದರೆ ಅರಣ್ಯ ಇಲಾಖೆಗೆ ರಾಷ್ಟ್ರೀಯ ಹೆದ್ದಾರಿ ವಿಭಾಗ ಬರೆದ ಪತ್ರದಲ್ಲಿ ಈ ಮರಗಳನ್ನು ಕಡಿಯಲು ಅನುಮತಿ ಕೇಳಲಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರೀಕ್ಷೆ ನಡೆಸಿದಾಗ ಈ ಪ್ರದೇಶದಲ್ಲಿ 167 ಹುಣಸೇ ಮರಗಳು, ಮತ್ತು ಹಿಪ್ಪೆ, ಬೇವು ಅಂಜೂರದ ಮರಗಳಿವೆ.

ಮರಗಳನ್ನು ಕತ್ತರಿಸದೇ ವಿಧಿಯಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗ ಹೇಳುತ್ತಿದ್ದರೆ, ಈ ಉತ್ತಮ ಜಾತಿಯ ಮರಗಳ ಟೊಂಗೆಗಳನ್ನು ಕತ್ತರಿಸುವುದರಿಂದ ಅಭಿವೃದ್ಧಿ ಕಾಮಗಾರಿಯನ್ನು ಮುಗಿಸಬಹುದು ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಅಲ್ಲದೆ ರಸ್ತೆಯ ಎರಡೂ ಬದಿಯ ಮರಗಳನ್ನು ಕಡಿಯುವ ಬದಲು ಒಂದೇ ಕಡೆಯ ಮರಗಳನ್ನು ಕತ್ತರಿಸುವ ಮೂಲಕವೂ ಕಾಮಗಾರಿ ಮುಂದುವರೆಸಬಹುದು.

ಆದರೆ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಈ ಸಲಹೆಗಳನ್ನೆಲ್ಲ ಕಿವಿಗೆ ಹಾಕಿಕೊಳ್ಳುವ ವ್ಯವಧಾನ ಇಲ್ಲ. ಮರಕಡಿಯುವ ಬಗ್ಗೆ ಅಕ್ಟೋಬರ್‌ 11ರೊಳಗೇ ಏನೇ ತಕರಾರು ಇದ್ದರೂ ಅರ್ಜಿ ಮುಖೇನ ಹೇಳುವಂತೆ ಸಾರ್ವಜನಿಕರಿಗೆ ಮತ್ತು ಪರಿಸರವಾದಿಗಳಿಗೆ ಸೂಚಿಸಲಾಗಿತ್ತು. ಈಗ ತಡವಾಗಿ ತಗಾದೆ ತೆಗೆಯುತ್ತಿರುವ ಅರಣ್ಯ ಇಲಾಖೆಯ ವಾದ ಸರಿಯಲ್ಲ ಎಂಬುದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ವಾದ.

ಜಿಲ್ಲೆಯಲ್ಲಿ ರಸ್ತೆ ಬದಿಯ ಮರಗಳು ಎರಡು ವರ್ಷಗಳಿಂದ ಸುಮಾರು 25 ಲಕ್ಷ ಆದಾಯ ತರುತ್ತಿವೆ. 80 ವರ್ಷಕ್ಕೂ ಹಿಂದಿನ ಹುಣಸೇ ಮರಗಳು ಇಲ್ಲಿವೆ. ಇವೆಲ್ಲವನ್ನೂ ಪರಿಗಣಿಸದೇ ರಾಷ್ಟ್ರೀಯ ಹೆದ್ದಾರಿ ವಿಭಾಗ ಮರ ಕಡಿಯುವುದಾದರೆ ಕಿಲೋಮೀಟರ್‌ಗೆ 54,200 ರೂಪಾಯಿಗಳನ್ನು ಅರಣ್ಯ ಇಲಾಖೆಗೆ ಅರಣ್ಯ ಅಭಿವೃದ್ಧಿಗಾಗಿ ನೀಡಬೇಕು. ಈ ಕಿರಿಕಿರಿಗಳನ್ನು ನಿವಾರಿಸಲು ಅರಣ್ಯ ವಿಭಾಗ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗಗಳು ಜಂಟಿಯಾಗಿ ವೀಕ್ಷಣೆ ನಡೆಸಲಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+