ನ.30ರಿಂದ ಉಡುಪಿಯಲ್ಲಿ 3 ದಿನಗಳ ಕಥಾ-ಕೀರ್ತನ ಸಮ್ಮೇಳನ
ಉಡುಪಿ : ಶ್ರೀಕೃಷ್ಣನ ಅಡುಂಬೋಲ ಉಡುಪಿಯಲ್ಲಿ ನವೆಂಬರ್ 30ರಿಂದ ಮೂರು ದಿನಗಳ ಕಾಲ ಕಥಾ - ಕೀರ್ತನ ಸಮ್ಮೇಳನ ನಡೆಯಲಿದೆ. ಈ ವಿಷಯವನ್ನು ಸಮ್ಮೇಳನದ ಗೌರವಾಧ್ಯಕ್ಷ ಭದ್ರಗಿರಿ ಅಚ್ಚುತದಾಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನ.30ರಿಂದ ಡಿಸೆಂಬರ್ 2ರವರೆಗೆ ನಡೆಯಲಿರುವ ಈ ಅಖಿಲ ಕರ್ನಾಟಕ ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಹರಿದಾಸರು ಪಾಲ್ಗೊಳ್ಳುತ್ತಿದ್ದು, ಕಥೆ-ಕೀರ್ತನೆಯ ಬಗ್ಗೆ ಉಪಯುಕ್ತ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ರಾಜ್ಯದ ಮುಜರಾಯಿ ಖಾತೆ ಸಚಿವೆ ಸುಮಾ ವಸಂತ್ ಅವರು ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳತ್ತಿದ್ದಾರೆ ಎಂದೂ ಅವರು ಹೇಳಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications