ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ, ಅಮೆರಿಕಾ, ಬ್ರಿಟನ್‌... ಇದೀಗ ವಾಜಪೇಯಿ ಜಪಾನ್‌ಗೆ

By Staff
|
Google Oneindia Kannada News

ದೀಪಾವಳಿಗೆ ಮುನ್ನವಷ್ಟೇ ರಷ್ಯಾ, ಅಮೆರಿಕ ಹಾಗೂ ಬ್ರಿಟನ್‌ಗಳ ಯಶಸ್ವಿ ವಿದೇಶ ಪ್ರವಾಸ ಮುಗಿಸಿಕೊಂಡು ವಾಪಸ್ಸಾಗಿರುವ ಪ್ರಧಾನಿ ವಾಜಪೇಯಿ ಇನ್ನೊಂದು ವಿದೇಶಯಾತ್ರೆಗೆ ಸಿದ್ಧರಾಗುತ್ತಿದ್ದಾರೆ. ಬರುವ ಡಿಸೆಂಬರ್‌ 7 ರಿಂದ 11 ರವರೆಗೆ ವಾಜಪೇಯಿ ಜಪಾನ್‌ ಪ್ರವಾಸ್‌ ಕೈಗೊಳ್ಳುವರೆಂದು ಜಪಾನ್‌ ಸರ್ಕಾರ ಶಕ್ರವಾರ ಪ್ರಕಟಿಸಿದೆ.

ಪ್ರವಾಸದ ಸಂದರ್ಭದಲ್ಲಿ ಜಪಾನ್‌ ಪ್ರಧಾನಿ ಜುನಿಚಿರೊ ಕೊಯಿಜುಮಿ, ಚಕ್ರವರ್ತಿ ಅಕಿಹಿಟೊ ಹಾಗೂ ಮಹಾರಾಣಿ ಮಿಚಿಕೊ ಅವರನ್ನು ವಾಜಪೇಯಿ ಭೇಟಿ ಮಾಡುವರು.

ವಾಜಪೇಯಿ ಅವರ ಭೇಟಿಯಿಂದಾಗಿ ಭಾರತ ಹಾಗೂ ಜಪಾನ್‌ ನಡುವಣ ಸ್ನೇಹ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂದು ಜಪಾನ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X