Get Updates
Get notified of breaking news, exclusive insights, and must-see stories!

ಬಂದಿದೆ,ದೇವಾಲಯಗಳಲೇವಾದೇವಿ ಲೆಕ್ಕ ಇಡಲೊಂದು ಸಾಫ್ಟ್‌ವೇರ್‌!

ಬೆಂಗಳೂರು : ದೇವಸ್ಥಾನಕ್ಕೆ ಬಂದ ಕಾಣಿಕೆ; ಅರ್ಚನೆ, ಹುಂಡಿ, ಸಹಸ್ರನಾಮ ಹೀಗೆ, ಅರ್ಚಕರು ಮತ್ತಿತರ ಸಿಬ್ಬಂದಿಗೆ ಪ್ರತಿ ತಿಂಗಳು ಕೊಡುವ ಪಗಾರ, ಬ್ಯಾಂಕಿನ ಲೇವಾದೇವಿ, ದೇವಾಲಯಕ್ಕೆ ಸೇರಿದ ಸ್ಥಿರಾಸ್ತಿ, ಮದುವೆ ಛತ್ರದ ಬುಕ್ಕಿಂಗ್‌.. ಇವೆಲ್ಲವನ್ನೂ ಬೆರಳ ತುದಿಗೆ ತಂದಿದೆ ಹೈದರಾಬಾದಿನ ಸಾಫ್ಟ್‌ವೇರ್‌ ಕಂಪನಿ ಸಿಎಂಸಿ.

ಸರ್ವರ್‌ಗಳು, ಡೆಸ್ಕ್‌ಟಾಪ್‌ಗಳು, ಪ್ರಿಂಟರ್‌ಗಳು, ಯುಪಿಎಸ್‌ ಹಾಗೂ ಜಾಲ ಸೌಕರ್ಯದೊಟ್ಟಿಗೆ ಸಾಫ್ಟ್‌ವೇರ್‌ ಲಭ್ಯ. ಈ ಪ್ಯಾಕೇಜ್‌ ಹೆಸರು ಟೆಂಪಲ್‌ನೆಟ್‌. ದೇವಾಲಯಗಳಿಗೆ ಹೇಳಿ ಮಾಡಿಸಿರುವಂಥದು ಎನ್ನುತ್ತಿದೆ ಕಂಪನಿ. ಇಂಟರ್ನೆಟ್‌ ಮೂಲಕ ಒಂದೇ ಆಡಳಿತಕ್ಕೆ ಸೇರಿದ ವಿವಿಧ ದೇವಾಲಯಗಳ ಮಾಹಿತಿ ದಾಖಲು ಮಾಡುವುದೂ ಈ ಸಾಫ್ಟ್‌ವೇರ್‌ ಮೂಲಕ ಸರಳ.

ಆಂಧ್ರಪ್ರದೇಶದಲ್ಲಿನ ಎಲ್ಲಾ ದೇವಾಲಯಗಳಲ್ಲೂ ಈ ಸಾಫ್ಟ್‌ವೇರ್‌ ಅಳವಡಿಸಲು ಅಲ್ಲಿನ ರಾಜ್ಯ ಸರ್ಕಾರ ನಿರ್ಧರಿಸಿದೆ. ಈಚೆಗೆ ನಡೆದ ಬೆಂಗಳೂರು ಐಟಿ ಡಾಟ್‌ ಕಾಂ ಮೇಳದಲ್ಲೂ ಕಂಪನಿ ತನ್ನ ಅಂಗಡಿಯಲ್ಲಿ ಈ ಉತ್ಪನ್ನವನ್ನು ಪ್ರಚುರ ಪಡಿಸಿದೆ. ಇದನ್ನು ಅಳವಡಿಸಿಕೊಳ್ಳಲು ದೇವಾಲಯಗಳಿಗೆ ಸೂಚಿಸುವಂತೆ ಕರ್ನಾಟಕ ಸರ್ಕಾರಕ್ಕೂ ಕಂಪನಿ ಒತ್ತಡ ತರುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+