Get Updates
Get notified of breaking news, exclusive insights, and must-see stories!

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 7.5 ಮಿ.ಡಾಲರ್‌ ದಂಡ

ವಾಷಿಂಗ್ಟನ್‌ : ಬ್ಯಾಂಕ್‌ ಕಾನೂನುಗಳ ಉಲ್ಲಂಘನೆ ಹಾಗೂ ಅಸಮರ್ಪಕ ದಾಖಲೆಗಳ ಆರೋಪದ ಮೇಲೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಅಮೆರಿಕಾದ ಪ್ರಾಧಿಕಾರಗಳು 7.5 ಮಿಲಿಯನ್‌ ಡಾಲರ್‌ ದಂಡ ವಿಧಿಸಿವೆ.

ಸಮರ್ಪಕ ಹಾಗೂ ಅಧಿಕೃತ ದಾಖಲೆ ಪತ್ರಗಳನ್ನು ನಿರ್ವಹಿಸುವಲ್ಲಿ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ವಿಫಲವಾಗಿದೆ ಎಂದು ಫೆಡರಲ್‌ ಡಿಪಾಜಿಟ್‌ ಇನ್ಷೂರೆನ್ಸ್‌ ಕಾರ್ಪೊರೇಷನ್‌ ಮತ್ತು ನ್ಯೂಯಾರ್ಕ್‌ ಸ್ಟೇಟ್‌ ಬ್ಯಾಂಕಿಂಗ್‌ ಡಿಪಾರ್ಟ್‌ಮೆಂಟ್‌ನ ಜಂಟಿ ಪ್ರಕಟಣೆ ತಿಳಿಸಿದೆ.

ಬ್ಯಾಂಕ್‌ನ ಗೋಪ್ಯತಾ ಕಾಯ್ದೆಗೆ ವಿರುದ್ಧವಾಗಿ ಅಸುರಕ್ಷತೆ ಹಾಗೂ ಅಸಮರ್ಪಕ ಚಟುವಟಿಕೆಗಳಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತೊಡಗಿತ್ತು ಹಾಗೂ ನ್ಯೂಯಾರ್ಕ್‌ ಸ್ಟೇಟ್‌ ಬ್ಯಾಕಿಂಗ್‌ ಡಿಪಾರ್ಟ್‌ಮೆಂಟ್‌ಗೆ ವರದಿ ಮಾಡುವಲ್ಲಿಯೂ ಬ್ಯಾಂಕ್‌ ವಿಫಲವಾಗಿತ್ತು ಎಂದು ಪ್ರಕಟಣೆ ಆರೋಪಿಸಿದೆ.

ಫೆಡರಲ್‌ ಕಾನೂನಿನ ಪ್ರಕಾರ, ಎಸ್‌ಬಿಐ ನೀಡಬೇಕಾದ 7.5 ಮಿಲಿಯನ್‌ ಡಾಲರ್‌ ದಂಡದಲ್ಲಿ ಅರ್ಧಭಾಗ ಸ್ಟೇಟ್‌ ಬ್ಯಾಂಕ್‌ ನ್ಯೂಯಾರ್ಕ್‌ಗೆ ಸೇರಿದರೆ, ಉಳಿದರ್ಧ ಯುಎಸ್‌ ಡಿಪಾರ್ಟ್‌ಮೆಂಟ್‌ ಆಫ್‌ ದಿ ಟ್ರೆಜರಿಗೆ ಸೇರುತ್ತದೆ ಎಂದು 27 ಪುಟಗಳ ಆದೇಶ ತಿಳಿಸಿದೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+