ನಿರ್ಬಂಧದ ಹಂಗಿಲ್ಲದೆ ಬೆಂಗಳೂರ ಬಾನಲಿ ಮೂಡಿದ ಪಟಾಕಿ ಚಿತ್ತಾರ
ಬೆಂಗಳೂರು : ಅತೀ ಸದ್ದು ಮಾಡುವ ಪಟಾಕಿಗಳನ್ನು ಸಿಡಿಸಲು ನಿರ್ಬಂಧವಿದ್ದರೂ ನಗರದಲ್ಲಿ ದೀಪಾವಳಿ ಹಬ್ಬದ ಸಡಗರಕ್ಕೆ ಯಾವುದೇ ಕುಂದು ಬಂದಿಲ್ಲ.
ಬುಧವಾರ ಬೆಳ್ಳಂಬೆಳಗ್ಗೇ ಅತಿವೃಷ್ಟಿ ಅನಾವೃಷ್ಟಿಗಳ ಹಂಗಿಲ್ಲದೇ ಆರಂಭವಾದ ಪಟಾಕಿ ಸದ್ದಿನ ಸರಮಾಲೆ ಇನ್ನೂ ಅಡಗಿಲ್ಲ. ರಾತ್ರಿ ಮನೆ ಮುಂದಿನ ರಸ್ತೆಗಳಲ್ಲಿ ಸದ್ದು ಮಾಡುವ ಸಾಲು ಪಟಾಕಿಗಳನ್ನು ಸಿಡಿಸಿ, ಬೆಂಕಿಯಲ್ಲಿ ಚಿತ್ತಾರ ಬಿಡಿಸುವ ರಾಕೆಟ್‌ಗಳನ್ನು ಹಾರಿಸಿ, ಕೈತಟ್ಟಿ ಖುಷಿಪಡುವ ಮಕ್ಕಳ ಜೊತೆಗೆ ದೊಡ್ಡವರೂ ಸೇರಿದ್ದರು. ತಮ್ಮ ಮಕ್ಕಳಿಗೆ ಜೋಪಾನ ಎನ್ನುತ್ತಲೇ ತಾವೂ ಪಟಾಕಿ ಹಾರಿಸಿ ಸಂತಸ ಪಟ್ಟರು.
ಸಂಜೆಯಾಗುತ್ತಿದ್ದಂತೆಯೇ ನಗರದ ಮನೆಗಳ ಮುಂದೆ ದೀಪಗಳು ಬೆಳಗಿದವು. ಎಳ್ಳೆಣ್ಣೆ ಹಣತೆಗಳು, ಕ್ಯಾಂಡಲ್,ತರಾವಳಿಯ ವಿದ್ಯುತ್ ಬಲ್ಬುಗಳು ವಿವಿಧ ಚಿತ್ತಾರಗಳೊಂದಿಗೆ ಉರಿಯುತ್ತಿದ್ದವು. ಅಲ್ಲೊಂದು ಇಲ್ಲೊಂದು ಆಕಾಶ ಬುಟ್ಟಿಗಳು ತೂಗುತ್ತಿದ್ದವು. ಹೆಚ್ಚಿನ ಮನೆಗಳ ಮುಂಬಾಗಿಲಿನ ಪಕ್ಕ ನಕ್ಷತ್ರಗಳು ನೇತಾಡುತ್ತಿದ್ದವು.
ಲಕ್ಷ್ಮೀ ಪೂಜೆಗಾಗಿ ಮೂರು ದಿನಗಳಲ್ಲಿ ಅನುಕೂಲದಿನವನ್ನು ನೋಡಿಕೊಂಡು ಸಂಭ್ರಮದ ತಯಾರಿ ನಡೆಯುತ್ತಿದೆ. ಪಟಾಕಿ ಕೊಳ್ಳುವುದರಲ್ಲಿ ಮಕ್ಕಳು ವ್ಯಸ್ತರಾಗಿದ್ದರೆ, ರಂಗೋಲಿಗಾಗಿ ಬಣ್ಣದ ಪುಡಿ, ಪೂಜೆ ಸಾಮಾನು, ಹೂವು, ಹಣ್ಣು, ಮಾವಿನೆಲೆಗಳನ್ನು ಕೊಳ್ಳುವ ದೃಶ್ಯ ನಗರದ ಕೆ.ಆರ್. ಮಾರುಕಟ್ಟೆ ಸೇರಿದಂತೆ ಸಣ್ಣ ಪುಟ್ಟ ಮಾರುಕಟ್ಟೆಗಳಲ್ಲಿಯೂ ಕಂಡು ಬರುತ್ತಿವೆ. ಹೂವಿನ ಬೆಲೆ ಮೊಳಕ್ಕೆ ಎಂಟು ರೂಪಾಯಿವರೆಗೂ ತಲುಪಿದೆ.
ಬಟ್ಟೆ, ಬಳೆ, ಸಿಹಿ ತಿಂಡಿ ಅಂಗಡಿಗಳ ಮುಂದೆ ನೂಕು ನುಗ್ಗಲು ಶುರುವಾಗಿದೆ. ಚಿನ್ನದಂಗಡಿಗಳು ಮತ್ತೆ ಅವಕ್ಕೆ ಸ್ಪರ್ಧೆಯಾಗಿ ಗಿಲೀಟು ಚಿನ್ನದ ಶಾಪ್‌ಗಳು ದೀಪಾವಳಿ ಡಿಸ್ಕೌಂಟು ಮೇಳ ಪ್ರದರ್ಶನಗಳನ್ನು ಏರ್ಪಡಿಸಿವೆ. ಮನೆಯಗಳಲ್ಲಿ ಹೆಚ್ಚು ರುಚಿಯಾದ ಕಜ್ಜಾಯ ತಯಾರಿಸಬೇಕೆಂಬ ಹುಮ್ಮಸ್ಸಿನಲ್ಲಿ ಹೆಂಗಸರು ಅಕ್ಕಿ ಕುಟ್ಟುತ್ತಿದ್ದಾರೆ.
ಬುಧವಾರ ಮತ್ತು ಶುಕ್ರವಾರ, ಹಬ್ಬದ ಪ್ರಯುಕ್ತ ರಜೆಯಿದ್ದರೆ ನಡುವೆ ವರ್ಕಿಂಗ್ ಡೇಯಾಗಿ ಗುರುವಾರ ವಕ್ಕರಿಸಿದೆ. ಶಾಲೆ, ಕಾಲೇಜು ಆಫೀಸುಗಳಿಗೆ ತೆರಳುವುದು ಅನಿವಾರ್ಯ ವಾದ್ದರಿಂದ ಹಬ್ಬದ ಗುಂಗಿನಲ್ಲಿಯೇ ಮಕ್ಕಳನ್ನು ಹೊತ್ತ ಆಟೋಗಳು , ಸ್ಕೂಲ್ ಬಸ್ಸುಗಳು, ಕಂಪೆನಿ ಬಸ್ಸುಗಳು ಪಟಾಕಿ ಕಸ ತುಂಬಿದ ರಸ್ತೆಗಿಳಿದವು.(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications