ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಸಾಮ- ಜಾರ್ಜ್‌ ಡಬ್ಲ್ಯು ಬುಷ್‌ ನಡುವೆ ಮಹಾ ದೋಸ್ತಿ ?!

By Staff
|
Google Oneindia Kannada News

George W Bushನ್ಯೂಯಾರ್ಕ್‌ : ಚುರುಕು ಚುರುಕಾದ ಅಮೆರಿಕಾ ಬೇಹುಗಾರಿಕಾ ದಳಗಳ ತಲಾಷಿನಿಂದ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಬುಡಕ್ಕೇ ಹೆಬ್ಬಾವು ಸುತ್ತಿಕೊಂಡಿದೆ. ಬುಷ್‌ ಹಾಗೂ ಒಸಾಮ ನಡುವೆ ಪರೋಕ್ಷ ವ್ಯವಹಾರವಿತ್ತು. ಅಸಲಿಗೆ ಜಾರ್ಜ್‌ ಡಬ್ಲ್ಯು ಬುಷ್‌ ಸಂಪಾದಿಸಿದ ಮೊದಲ 10 ಲಕ್ಷ ಡಾಲರ್‌ ಹಣ ಒಸಾಮನ ಫರ್ಮ್‌ ಮೂಲಕ ಬಂದದ್ದು !

ಬಿಬಿಸಿಯ ಪ್ರಸಕ್ತ ವಿದ್ಯಮಾನಗಳ ಬಿತ್ತರಿಸುವ ಕಾರ್ಯಕ್ರಮ ನ್ಯೂಸ್‌ನೈಟ್‌ನಲ್ಲಿ ಈ ವಿಷಯದ ಬಗೆಗೆ ವ್ಯಾಪಕ ಮಂಗಳವಾರ ಚರ್ಚೆಗಳಾದವು. ಬೇಹುಗಾರಿಕಾ ದಳಗಳು ಹೆಕ್ಕಿ ತೆಗೆದಿರುವ ಮಹತ್ತರ ಸರಕು ಇದು...

ಒಂದು ಕಾಲದಲ್ಲಿ ಒಸಾಮನ ಜಾಲದೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಬುಷ್‌, ಅಧ್ಯಕ್ಷ ಗಾದಿಗೆ ಏರಿದೊಡನೆ ಆತನ ಸುಳಿವು ಪತ್ತೆ ಹಚ್ಚುವ ಬೇಹುಗಾರಿಕಾ ದಳಗಳ ಕೆಲಸಕ್ಕೇ ಕೊಡಲಿ ಪೆಟ್ಟು ಕೊಟ್ಟಿದ್ದರು. ಆದರೆ ಸೆಪ್ಟೆಂಬರ್‌ 11ರ ದಾಳಿ ಅವರನ್ನು ಕಟ್ಟಿಹಾಕಿತು. ತಲಾಷು ಮಾಡಲು ಅಪ್ಪಣೆ ಕೊಡಿಸುವ ಅನಿವಾರ್ಯತೆ ಹುಟ್ಟುಹಾಕಿತು.

ತೈಲ ಕೊಳ್ಳ- ಬಾವಿಗಳ ತಾಣ ಸೌದಿ ಅರೇಬಿಯಾ ಅಂದರೆ ಎಲ್ಲರಿಗೂ ನೆಚ್ಚು. ಅಣು ಶಕ್ತಿಯಾಡನೆ ತೈಲ ಶಕ್ತಿ ಸೇರಿತೆಂದರೆ ಪರಮ ಬಲ. ಅಮೆರಿಕಾ ಕೂಡ ಸೌದಿಯಾಟ್ಟಿಗೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳುವ ಹೆಜ್ಜೆಗಳನ್ನು ಹಾಕಿತ್ತು ಎಂಬುದನ್ನು ಇತಿಹಾಸದ ಪುಟಗಳು ರುಜುವಾತು ಮಾಡುತ್ತವೆ. ಇಪ್ಪತ್ತು ವರ್ಷಗಳ ಹಿಂದೆ ಜಾರ್ಜ್‌ ಡಬ್ಲ್ಯು ಬುಷ್‌ಗೆ ಬಂಡವಾಳ ತಂದುಕೊಟ್ಟ ಅಮೆರಿಕಾ ಪ್ರತಿನಿಧಿ ಒಸಾಮನ ಸಹೋದರ ಸಲೀಂ ಬಿನ್‌ ಲ್ಯಾಡೆನ್‌ ಒಡನಾಡಿಯಾಗಿದ್ದ.

ಸಣ್ಣ ಪ್ರಮಾಣದಲ್ಲಿ ಹುಟ್ಟಿದ ಕಾರ್ಲೈಲ್‌ ಕಾರ್ಪೊರೇಷನ್‌, ಅಮೆರಿಕಾದ ದೊಡ್ಡ ರಕ್ಷಣಾ ಗುತ್ತಿಗೆದಾರ ಸಂಸ್ಥೆಯಾಗಿ ಬೆಳೆಯಿತು. ಅದರಲ್ಲಿ ಬುಷ್‌ ಅಪ್ಪ ಸೀನಿಯರ್‌ ಬುಷ್‌ ಪಗಾರ ಪಡೆಯುತ್ತಿದ್ದ ಸಲಹೆಗಾರ. ಅಂದಹಾಗೆ, ಈ ಸಂಸ್ಥೆಯಲ್ಲಿ ಒಸಾಮನ ಷೇರುಗಳೂ ಇದ್ದವಂತೆ. ಸೆಪ್ಟೆಂಬರ್‌ 11ರ ದಾಳಿ ನಂತರ ಅವೆಲ್ಲಾ ಬಿಕರಿಯಾಗಿವೆ.

ಸೌದಿ ಅರೇಬಿಯನ್ನರ ಕುರಿತ ಬೇಹುಗಾರಿಕೆಗೆ ಅಮೆರಿಕೆಯಲ್ಲಿ ಮೊದಲಿನಿಂದಲೂ ತೊಡರುಗಳಿದ್ದೇ ಇತ್ತು. ಆದರೆ, ಜಾರ್ಜ್‌ ಡಬ್ಲ್ಯು ಬುಷ್‌ ಅಧಿಕಾರಕ್ಕೆ ಬಂದಾಗ ಅದು ಭಾರೀ ಪ್ರಮಾಣದಲ್ಲಿ ಹಿನ್ನಡೆ ಕಂಡಿತು. ಅಂಥಾ ತಲಾಷು ಕೂಡದೆಂದು ಬೇಹುಗಾರಿಕಾ ದಳಗಳಿಗೆ ಅಪ್ಪಣೆ ಕೊಡಿಸಿದ್ದರು ಬುಷ್‌. ಇದರಿಂದ ಬೇಹುಗಾರಿಕಾ ದಳದ ಅನೇಕರಿಗೆ ಅಸಮಾಧಾನ ಉಂಟಾಗಿದ್ದೂ ನಿಜ. ಸೆಪ್ಟೆಂಬರ್‌ 11ರ ದಾಳಿ ನಂತರ ಬುಷ್‌ ಊಸರವಳ್ಳಿ ಥರ ಬಣ್ಣ ಬದಲಿಸಿದರಂತೆ. ನಿಯಮಾವಳಿಗಳೆಲ್ಲಾ ಏಕಾಏಕಿ ಬದಲು !

(ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X