Get Updates
Get notified of breaking news, exclusive insights, and must-see stories!

ಚುನಾವಣೆ ಪ್ರಚಾರ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಕೊಲೆ

ಬೆಂಗಳೂರು : ಹಗಲಿನಲ್ಲಿಯೇ ವೃದ್ಧೆಯಾಬ್ಬಳ ಕುತ್ತಿಗೆಗೆ ಬಟ್ಟೆ ಬಿಗಿದು ಸಾಯಿಸಿ, ಸುಮಾರು 50 ಸಾವಿರ ರುಪಾಯಿ ಮೌಲ್ಯದ ಹಣ ಮತ್ತು ಒಡವೆ ಅಪಹರಿಸಿದ ಘಟನೆ ನಗರದ ಶೇಷಾದ್ರಿಪುರಂ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಿವೃತ್ತ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ವೆಂಕಟ ನರಸಯ್ಯ ಅವರ ಪತ್ನಿ ನರಸಮ್ಮ (70) ಮನೆಯಲ್ಲಿ ಒಬ್ಬರೇ ಇದ್ದಾಗ ಮನೆಗೆ ನುಗ್ಗಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ವೆಂಕಟ ನರಸಯ್ಯ ಅವರು ಹತ್ತಿರದ ತಮ್ಮ ಅಳಿಯನ ಎಸ್‌ಟಿಡಿ ಬೂತ್‌ಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಮಯವನ್ನು ಗಮನಿಸಿದ ಪಾತಕಿಗಳು ಸಂಜೆ ನಾಲ್ಕು ಗಂಟೆಗೆ ನರಸಮ್ಮ ಅವರನ್ನು ಕೊಲೆ ಮಾಡಿ ಮಾಂಗಲ್ಯ, ಬಳೆ, ಕಿವಿಯೋಲೆಗಳು ಮತ್ತು ಬೀರುವಿನಲ್ಲಿದ್ದ ಹಣವನ್ನು ದೋಚಿದ್ದಾರೆ.

ಕೊಲೆ ನಡೆದ ಮನೆಯ ಮುಂದೆ ಚುನಾವಣಾ ಪ್ರಚಾರದ ಆಟೋ ನಿಂತಿತ್ತು ಎಂದು ತಿಳಿಸಿರುವ ಪೊಲೀಸರು ಪ್ರಚಾರದ ನೆಪದಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿರಬಹುದು ಎಂದು ಶಂಕಿಸಿದ್ದಾರೆ. ನಗರ ಪೊಲೀಸ್‌ ಆಯುಕ್ತ ಎಚ್‌. ಟಿ. ಸಾಂಗ್ಲಿಯಾನಾ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪರಿಚಿತರಿಂದಲೇ ಕೊಲೆ- ಸಾಂಗ್ಲಿಯಾನ ಶಂಕೆ?

ನರಸಮ್ಮ ಅವರ ಪರಿಚಿತರೇ ಈ ಕೊಲೆ ಮಾಡಿರಬಹುದು ಎಂದು ಸಾಂಗ್ಲಿಯಾನಾ ಶಂಕಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಎರಡು ಕಾಫಿ ಕಪ್‌ಗಳಿದ್ದು, ಇಬ್ಬರು ವ್ಯಕ್ತಿಗಳು ಈ ಕೃತ್ಯದಲ್ಲಿ ಇಬ್ಬರು ವ್ಯಕ್ತಿಗಳು ಭಾಗಿಯಾಗಿರಬಹುದು. ಕೊಲೆಗಾರರು ನರಸಮ್ಮ ಅವರ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ನಂತರ ಈ ಅಪರಾಧವೆಸಗಿರಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+