ಬೆಂಗಳೂರಲ್ಲಿ ರಾತ್ರಿ 11-30ರ ತನಕ ಬಾರ್, ಲೈವ್‌ಬ್ಯಾಂಡ್

ಇದಕ್ಕೆ ಬೆಂಗಳೂರಿನ ನೂತನ ಪೊಲೀಸ್ ಕಮೀಷನರ್ ಸಾಂಗ್ಲಿಯಾನ ಅನುಮತಿ ನೀಡಿದ್ದಾರೆ. ತಾವು ಅಧಿಕಾರ ವಹಿಸಿಕೊಂಡ ಮೊದಲ ದಿನವೇ 'ರಾತ್ರಿ 11ಗಂಟೆ ನಂತರ ವಹಿವಾಟು ನಡೆಸುವ ಬಾರ್ ಅಂಡ್ ಲೈವ್ ಬ್ಯಾಂಡ್ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ" ಪ್ರಕಟಿಸಿದ್ದ ಸಾಂಗ್ಲಿಯಾನ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ.
ಶುಕ್ರವಾರ ಬಾರ್ ಮತ್ತು ಲೈವ್‌ಬ್ಯಾಂಡ್ ಮಾಲಿಕರೊಂದಿಗೆ ಸಭೆ ನಡೆಸಿದ ಬಳಿಕ ಸಾಂಗ್ಲಿಯಾನಾ ಅವರು ತಮ್ಮ ನಿರ್ಧಾರ ಬದಲಿಸಿ, ಒಂದು ತಿಂಗಳು ಪ್ರಾಯೋಗಿಕವಾಗಿ ಅರ್ಧಗಂಟೆ ಹೆಚ್ಚು ಕಾಲ ಬಾರ್ ಅಂಡ್ ಬ್ಯಾಂಡ್ ತೆರೆಯಲು ಅನುಮತಿ ನೀಡಿದ್ದಾರೆ.
ಈ ಒಂದು ತಿಂಗಳ ಅವಧಿಯಲ್ಲಿ ರಸ್ತೆ ಅಪಘಾತ, ಅಪರಾಧ ಪ್ರಕರಣಗಳ ಪರಾಮರ್ಶೆ ಮಾಡಿ, ಹೊಸ ನಿರ್ಧಾರವನ್ನು ಶಾಶ್ವತಗೊಳಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ. ಈ ಒಂದು ತಿಂಗಳಂತೂ ಕುಡುಕರಿಗೆ ಇನ್ನೊಂದರ್ಧಗಂಟೆ ಸುಗ್ಗಿ.....












Click it and Unblock the Notifications