ಒಸಾಮನೊಟ್ಟಿಗೆ ಒಡನಾಟ: ಪಾಕ್‌ನ3 ವಿಜ್ಞಾನಿಗಳು ಅಮೆರಿಕಾ ವಶಕ್ಕೆ
ಇಸ್ಲಾಮಾಬಾದ್ : ಒಸಾಮನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರೆಂದು ಶಂಕಿಸಲಾಗಿರುವ ಮೂವರು ನಿವೃತ್ತ ಅಣು ವಿಜ್ಞಾನಿಗಳನ್ನು ಪಾಕಿಸ್ತಾನ ಅಮೆರಿಕಾದ ವಶಕ್ಕೆ ಒಪ್ಪಿಸಿದೆ ಎಂದು ಪಾಕಿಸ್ತಾನ್ ಅಬ್ಸರ್ವರ್ ಪ್ರಕಟಿಸಿದೆ.
ಸುಲ್ತಾನ್ ಬಷೀರುದ್ದೀನ್ ಮಹ್ಮೂದ್, ಅಬ್ದುಲ್ ಮಜೀದ್ ಹಾಗೂ ಮಿರ್ಜಾ ಯೂಸಫ್ ಎಂಬುವರೇ ಈ ವಿಜ್ಞಾನಿಗಳು. ಮಜೀದ್ ಹಾಗೂ ಯೂಸಫ್ ಪಾಕಿಸ್ತಾನ ಅಣು ಶಕ್ತಿ ಆಯೋಗ (ಪಿಎಇಸಿ)ದಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಲ್ತಾನ್ ಬಷೀರುದ್ದೀನ್ ಪಾಕಿಸ್ತಾನದ ಪ್ರಸಿದ್ಧ ವಿಜ್ಞಾನಿಗಳಲ್ಲೊಬ್ಬರು. ಈ ವಿಜ್ಞಾನಿಗಳನ್ನು ಎಫ್‌ಬಿಐ ಹಾಗೂ ಸಿಐಎ ಅಧಿಕಾರಿಗಳ ಜಂಟಿ ತಂಡದ ವಶಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪತ್ರಿಕೆ ವರದಿ ಮಾಡಿದೆ.
ಮಹ್ಮೂದ್ ಮೊಗದಲ್ಲಿ ಭರ್ತಿ ಆತಂಕ : ಅಕ್ಟೋಬರ್ 26ರಂದು ವಿಜ್ಞಾನಿ ಮಹ್ಮೂದ್ ಅವರನ್ನು ಪಾಕಿಸ್ತಾನಿ ಭದ್ರತಾ ದಳಗಳು ವಿಚಾರಣೆ ನಡೆಸಿ, ಅಂದೇ ಮನೆಗೆ ವಾಪಸ್ಸು ಕಳುಹಿಸಿದ್ದವು. ನಂತರ ಅಕ್ಟೋಬರ್ 28ರಂದು ಮತ್ತೆ ವಿಚಾರಣೆಗಾಗಿ ಕೊಂಡೊಯ್ದವು. ಕುಟುಂಬದವರು ಹೇಳಿರುವ ಪ್ರಕಾರ, ಮೊದಲ ಬಾರಿ ವಿಚಾರಣೆಗೆ ಒಳಗಾಗಿ ವಾಪಸ್ಸಾದ ನಂತರ ಮಹ್ಮೂದ್ ಮೊಗದ ತುಂಬಾ ಗಾಬರಿ ಭರ್ತಿಯಾಗಿತ್ತು. ಹೆಚ್ಚು ಮಾತಾಡಲಿಲ್ಲ. ಯಾರನ್ನೂ ಭೇಟಿಯಾಗಲು ನಿರಾಕರಿಸಿದ್ದರು. ಆತಂಕ, ಚಡಪಡಿಕೆಯಿತ್ತು. ಎರಡನೇ ಬಾರಿ ಭದ್ರತಾ ದಳದವರು ವಿಚಾರಣೆಗೆ ಕೊಂಡೊಯ್ಯುವಾಗ, ಎರಡು ದಿನಗಳೊಳಗೆ ಸಂಪರ್ಕಿಸದಿದ್ದಲ್ಲಿ ನಾನು ಸತ್ತೆನೆಂದೇ ಭಾವಿಸಿ ಎಂದು ಮಹ್ಮೂದ್ ತಮ್ಮ ಕುಟುಂಬದ ಸದಸ್ಯರಿಗೆ ಹೇಳಿದ್ದರು. ಮಿಗಿಲಾಗಿ ಆಸ್ತಿಯ ಉಯಿಲು ಕೂಡ ಬರೆದಿಟ್ಟು ಹೋಗಿದ್ದಾರೆ.
ಉಮ್ಮಾ ರಿಕನ್‌ಸ್ಟ್ರಕ್ಷನ್- ಅಲ್ ಕ್ವೆದಾ ಭಾಯಿ ಭಾಯಿ : ಸಿಟಿಬಿಟಿಗೆ ಸಹಿ ಹಾಕುವ ಬಗ್ಗೆ ನವಾಜ್ ಷರೀಫ್ ಒಲವು ತೋರಿದ ಸಂದರ್ಭದಲ್ಲಿ ಪಿಎಇಸಿಗೆ ಮಹ್ಮೂದ್ ರಾಜೀನಾಮೆ ಕೊಟ್ಟರು. ಆಫ್ಘಾನಿಸ್ತಾನದಲ್ಲಿ ಕಲ್ಯಾಣ ಕಾರ್ಯಗಳನ್ನು ಮಾಡುವ ಉಮೇದಿನಿಂದ ಉಮ್ಮಾ ರಿಕನ್‌ಸ್ಟ್ರಕ್ಷನ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆ ಒಸಾಮನ ಅಲ್-ಕ್ವೆದಾ ಜಾಲದೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿದೆ ಎಂಬುದು ಅಮೆರಿಕಾ ಮತ್ತು ಬ್ರಿಟನ್ ಬೇಹುಗಾರಿಕಾ ದಳಗಳು ಪತ್ತೆ ಹಚ್ಚಿರುವ ವಿಷಯ. ಬೇಹುಗಾರಿಕಾ ಜಾಲಗಳ ಪ್ರಕಾರ ಒಸಾಮನಿಗೆ ಈ ವಿಜ್ಞಾನಿಗಳು ಅಣು ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದರು.
(ಪಿಟಿಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications