• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತ್ಯ ವರ್ಸಸ್‌ ಸುಬ್ಬರಾವ್‌ : ಇಂಗು ತಿಂದ ಮಂಗನಂತಾದ ನಮ್ಮ ಸ್ಕೂಪ್‌!

By Staff
|
ಯುದ್ಧದ ವರದಿಯೇ ಆಗಲಿ, ಪ್ರಶಸ್ತಿ ರಾಜಕೀಯದ ವಾಸನೇ ಇರಲಿ. ಮಾಧ್ಯಮದಲ್ಲಿ ಮೂಡಿಬರುವ ಕೆಲವು ಸ್ಕೂಪುಗಳು ಯಾವ ರೀತಿಯಲ್ಲಿ ಠುಸ್ಸೆನ್ನುತ್ತವೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯನ್ನು ನೀವಿಲ್ಲಿ ಕಾಣುವಿರಿ. ಪ್ರಾತಃಸ್ಮರಣೀಯ ಪತ್ರಕರ್ತ ಟಿಎಎಸ್‌ಆರ್‌ ಪ್ರಶಸ್ತಿ ಈ ಬಾರಿ ಯಾರಿಗೆ ಎನ್ನುವ ವರದಿಯನ್ನು ನಮ್ಮ ಬಾತ್ಮೀದಾರ ಗೋಪಾಲಪ್ಪ ಬರೆದಿದ್ದರು. ಆದರೆ, ಇ.ಆರ್‌. ಸೇತೂರಾಂಗೆ ಪ್ರಶಸ್ತಿ ಎಂದು ತೀರ್ಮಾನವಾದ ಮೇಲೆ , ಸತ್ಯ ಅಥವಾ ಸುಬ್ಬರಾಯರಿಗೆ ಮಾತ್ರ ಈ ಪ್ರಶಸ್ತಿ ಮೀಸಲು ಎನ್ನುವ ಅವರ ವಾದ ಹೀನಾಯವಾಗಿ ಸೋಲು ಉಂಡಿತು. ಇನ್ನೇನು ಈ ಸ್ಕೂಪು ಪ್ರಕಟವಾಗಬೇಕು ಎನ್ನುವ ಹೊತ್ತಿಗೆ, ಸೇತೂರಾಂ ಪ್ರಶಸ್ತಿಗೆ ಆಯ್ಕೆಯಾದ ಸುದ್ದಿ ಹೊರಬಿತ್ತು . ನಮ್ಮ ಈ ಒಂದು ಸೋಲಿನ ವರದಿಯ ಓದುವಿಕೆ ನಿಮಗೆ ಗೆಲುವಾಗಿರಲಿ ಎಂದು ಆಶಿಸುತ್ತಾ....ಸಂಪಾದಕ

ಈ ಸಾರಿಯ ಟಿಯೆಸ್ಸಾರ್‌ ಪ್ರಶಸ್ತಿ ಯಾರಿಗೆ ಸಿಗಬೇಕು ?

ಕೇಳಿ ಬರುತ್ತಿರುವ ಹೆಸರು ಎರಡೇ ಎರಡು. ಇನ್ನೇನು ಕುರ್ಚಿಯನ್ನು ಖಾಲಿ ಮಾಡುತ್ತಿರುವ ಕನ್ನಡ ಪ್ರಭ ಸಂಪಾದಕ ಕೆ. ಸತ್ಯನಾರಾಯಣ. ಹೆಚ್ಚು ಕಡಿಮೆ ಅವರಷ್ಟೇ ಅನುಭವ ಇರುವ ಸಂಯುಕ್ತ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ ವಿ.ಎನ್‌. ಸುಬ್ಬರಾವ್‌. ಇವರಿಬ್ಬರನ್ನು ಬಿಟ್ಟು ಮೂರನೆಯ ಹೆಸರು ಪ್ರಸ್ತಾಪವಾಗುವುದು ಸಾಧ್ಯವೇ ಇಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಆದರೆ ಹಾಗಾಗುವುದಿಲ್ಲ ಎಂದು ಹೇಳುವುದು ಕಷ್ಟ. ಯಾಕೆಂದರೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಗರುಡನಗಿರಿ ನಾಗರಾಜ, ನಾಗಮಣಿ ಎಸ್‌. ರಾವ್‌, ಎಂ.ಬಿ. ಸಿಂಗ್‌, ನಿವೃತ್ತ ನ್ಯಾಯಮೂರ್ತಿ ಪಿ.ಪಿ. ಬೋಪಣ್ಣ ಹಾಗೂ ವಾರ್ತಾ ಇಲಾಖೆಯ ಪ್ರತಿನಿಧಿ ಡಿ.ವಿ. ಗುರುಪ್ರಸಾದ್‌ ಇದ್ದಾರೆ. ಇವರ ಪೈಕಿ ಸತ್ಯ ಅವರ ಆಜನ್ಮ ವೈರಿ ಗರುಡನಗಿರಿ ಇರುವಾಗ ಸತ್ಯ ಅವರಿಗೆ ಪ್ರಶಸ್ತಿ ಬಂದೀತಾದರೂ ಹೇಗೆ. ನಾಗಮಣಿ ಅವರು ಸತ್ಯ ಅವರ ಅಭಿಮಾನಿ ಆಗಿದ್ದರೂ ಕಮಿಟಿಯಲ್ಲಿ ಗರುಡನಗಿರಿ ಇರುವುದರಿಂದ ಹೆಲ್ಪ್‌ಲೆಸ್‌. ಪರಂತು ಉಳಿದವರಿಗೆ, ಅಂದರೆ ಸಿಂಗ್‌ ಅವರಿಗೆ ಯಾರಿಗೆ ಬಂದರೂ ಪರವಾಗಿಲ್ಲ ! ಗುರುಪ್ರಸಾದ್‌ ಅವರಿಗೆ ಜಾಣ ಮೌನಿ ಸತ್ಯನಾರಾಯಣ ಹಾಗೂ ಮಾತುಗಾರ ಸುಬ್ಬರಾವ್‌ ಅವರ ಸಾಧನೆಗಳ ವಿವರ ಮತ್ತು ಪ್ರವರ ಗೊತ್ತಿರುವುದು ಸಾಧ್ಯವೇ ಇಲ್ಲ. ಅವರು ಇತ್ತೀಚೆಗಷ್ಟೇ ವಾರ್ತಾ ಇಲಾಖೆಗೆ ಬಂದವರು. ಅದಕ್ಕಿಂತ ಮುಂಚೆ ಕೆಎಸ್ಸಾರ್ಟಿಸಿಯಲ್ಲಿದ್ದವರು. ಅಧ್ಯಕ್ಷ ಬೋಪಣ್ಣ ನ್ಯಾಯಮೂರ್ತಿಗಳಾಗಿರುವುದರಿಂದ ನಾವೇನೂ ಹೇಳಲು ಶಕ್ಯರಲ್ಲ. ಇದೆಲ್ಲ ಬೇರೆ ಮಾತು. ಈ ಸಾರಿ ಬಲವಾಗಿ ಕೇಳಿ ಬರುತ್ತಿರುವ ಎರಡು ಹೆಸರುಗಳ ಬಗ್ಗೆ ನೋಡೋಣ.

ವಿಎನ್‌. ಸುಬ್ಬರಾವ್‌

ಇವರು ಎಷ್ಟು ವರ್ಷದಿಂದ ಪತ್ರಿಕೋದ್ಯಮದಲ್ಲಿದ್ದಾರೆ ಅಂತ ಖಚಿತವಾಗಿ ಹೇಳುವುದು ಕಷ್ಟ. ಹಳೆಯ ತಲೆಮಾರಿನ ಪತ್ರಕರ್ತರೆಂದು ಇವರನ್ನು ರಾಜಕೀಯ ಮತ್ತು ಚಿತ್ರರಂಗದ ಮಂದಿ ಗುರುತಿಸುವುದುಂಟು. ಚಿತ್ರರಂಗದ ಜೊತೆ ಸಾಕಷ್ಟು ಬಲವಾದ ನಂಟು ಬೆಳೆಸಿಕೊಂಡಿದ್ದ ಸುಬ್ಬರಾವ್‌, ಪತ್ರಿಕೋದ್ಯಮ ಮತ್ತು ಪತ್ರಿಕಾಪ್ರಚಾರದ ನಡುವಣ ಅಂತರವನ್ನು ಕಿತ್ತೊಗೆದ ಕ್ರಾಂತಿಕಾರರು ಕೂಡ. ಅದೇ ಕಾರಣಕ್ಕೆ ಒಂದು ಕಾಲದಲ್ಲಿ ಸಿನಿಮಾ ಮಂದಿಗೆ ಅತ್ಯಂತ ಪ್ರಿಯರಾದವರು. ಸುಬ್ಬರಾವ್‌ ಹೆಚ್ಚು ಸಾರಿ ಮನೆ ಬದಲಾಯಿಸಿದ್ದಾರೋ ಕೆಲಸ ಬದಲಾಯಿಸಿದ್ದಾರೋ ಎಂಬ ಬಗ್ಗೆ ಸಾಕಷ್ಟು ವಿವಾದಗಳು ನಡೆದಿವೆ. ಅವರ ವೃತ್ತಿ ಜೀವನ ಕನ್ನಡ ಸಿನಿಮಾ ಪತ್ರಿಕೆ ಮೇನಕಾ ಇಂದ ತದನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ನಿಂದ ಆರಂಭವಾಯಿತು ಎನ್ನುವುದು ಅಧಿಕೃತ ಮಾಹಿತಿ. ಅರುಣ್‌ ಶೌರಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಸಂಪಾದಕರಾಗಿದ್ದಾಗ ಅವರ ಜೊತೆ ಸುಬ್ಬರಾವ್‌ ಕೆಲಸ ಮಾಡಿದರು. ಕೊನೆಗೆ ತಾವೇ ಬೆಳೆಸಿದ ಈ. ರಾಘವನ್‌ ತಮ್ಮನ್ನೇ ಮೀರಿ ಬೆಳೆದು ನಿಂತಾಗ ಸುಬ್ಬರಾವ್‌ ಕಂಗಾಲಾದದ್ದೂ ಉಂಟು. ಒಂದೋ ನಾನಿರಬೇಕು ಇಲ್ಲ ರಾಘವನ್‌ ಎಂದು ಸುಬ್ಬರಾವ್‌ ಹೊರ ನಡೆದಿದ್ದರು ಕೂಡ. ಅದು 1981ರ ಕತೆ.

1982ರಲ್ಲಿ ಸುಬ್ಬರಾವ್‌ ಸಂಡೇ ಮಿಡ್ಡೇಯ ರೆಸಿಡೆಂಟ್‌ ಎಡಿಟರ್‌ ಆಗಿ ಅಧಿಕಾರ ಸ್ವೀಕರಿಸಿದರು. ಮುಂದೆ 1984ರಲ್ಲಿ ಅರುಣ್‌ ಶೌರಿ ಎಕ್ಸ್‌ಪ್ರೆಸ್‌ನಿಂದ ಹೊರಬಿದ್ದಾಗ ಸುಬ್ಬರಾವ್‌ ಮತ್ತೆ ಎಕ್ಸ್‌ಪ್ರೆಸ್‌ ಸೇರಿದರು. ಅಲ್ಲಿದ್ದ ವಿ. ರಾಘವನ್‌ ತಮ್ಮ ಏಳು ಮಂದಿಯ ಟೀಮ್‌ನೊಂದಿಗೆ ಟೈಮ್ಸ್‌ಆಫ್‌ ಇಂಡಿಯಾ ಸೇರಿಕೊಂಡಾಗ, ಅಲ್ಲಿಗೆ ಕಾಲಿಟ್ಟವರು ಸುಬ್ಬರಾವ್‌.

ಸುಬ್ಬರಾವ್‌ ಒಳ್ಳೆಯ ಟೀಮ್‌ ಕಟ್ಟಿದ್ದರು. 84ರಲ್ಲಿ ಟಿಜೆಎಸ್‌ ಜಾರ್ಜ್‌ ಆಗಮನ ಆಗುವವರೆಗೂ ಸುಬ್ಬರಾವ್‌ ನೆಮ್ಮದಿಯಿಂದಲೇ ಇದ್ದರು. ಅತ್ತ ಅರುಣ್‌ ಶೌರಿ ಸ್ಥಾನಕ್ಕೆ ಸುಮನ್‌ ದುಬೆ ಬಂದು ಕೂತರು. ಸುಬ್ಬರಾವ್‌ ಕುರ್ಚಿ ಮತ್ತೆ ಅಲ್ಲಾಡಿತು ! 1985ರಲ್ಲಿ ಎಕ್ಸ್‌ಪ್ರೆಸ್‌ನಿಂದ ಸುಬ್ಬರಾವ್‌ ಅವರನ್ನು ಹೊರ ಹಾಕಿದ ಟೆಲೆಕ್ಸ್‌ ಸಂದೇಶ ಅವರ ಕೈ ತಲುಪುವ ಹೊತ್ತಿಗೆ ಅವರೆದುರು ಕೆ. ಸತ್ಯನಾರಾಯಣ ಕುಳಿತಿದ್ದರು.

ಸುಬ್ಬರಾವ್‌ ಅವರದು ಬಹುಮುಖ ಪ್ರತಿಭೆ. ಆರತಿ- ಅನಂತ್‌ ಅಭಿನಯದ ಪ್ರೇಮಾಯಣ ಚಿತ್ರ ನಿರ್ಮಿಸಿ ಸೋತದ್ದರಿಂದ ಹಿಡಿದು ಮಗನೊಂದಿಗೆ ಆ್ಯಡ್‌ ಏಜೆನ್ಸಿ ಶುರುಮಾಡಿ ಕೈ ಸುಟ್ಟುಕೊಂಡದ್ದರ ತನಕ ಅವರ ಪ್ರತಿಭಾ ವಿಸ್ತಾರ ಇದೆ.

ನ್ಯೂಸ್‌ ಟೈಮ್‌, ಸ್ಕಿೃೕನ್‌, ತಾರಾಲೋಕ, ಸಂಯುಕ್ತ ಕರ್ನಾಟಕ, ನೋಡು ಪತ್ರಿಕೆ, ಡೆಕನ್‌ ಹೆರಾಲ್ಡ್‌ ಹೀಗೆ ಅನೇಕ ಪತ್ರಿಕೆಗಳ ಜೊತೆ ರಾಯರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಸದ್ಯಕ್ಕೆ ಅವರು ಸಂಯುಕ್ತ ಕರ್ನಾಟಕದ ಒಂದು ಆಯಕಟ್ಟಿನ ಜಾಗದಲ್ಲಿ ಇರಬಹುದು. ಅವರನ್ನು ಚೆನ್ನಾಗಿ ಬಲ್ಲವರ ಪ್ರಕಾರ ಸುಬ್ಬರಾವ್‌ ಎಲ್ಲೇ ಇರಲಿ ಕಷ್ಟದಲ್ಲಿರುತ್ತಾರೆ. ಅವರಿಗೊಂದು ಹಮ್ಮಿಣಿ ಅರ್ಪಿಸಬೇಕೆಂದು ಅವರ ಸಿನಿಮಾ ಪತ್ರಕರ್ತರ ಮಿತ್ರರು ಕೆಲವು ವರ್ಷಗಳ ಹಿಂದೆ ಓಡಾಡುತ್ತಿದ್ದರು. ಡಾಟ್‌ಕಾಮ್‌, ಚಾನಲ್‌ ಮುಂತಾದ ಕಡೆ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದುಂಟು. ಅವರ ಇನ್ನೊಂದು ಆಸೆಯೆಂದರೆ ಫಿಲಂ ಅಕಾಡೆಮಿ ಅಧ್ಯಕ್ಷ ಪಟ್ಟ. ಆದರೆ ಫಿಲಂ ಅಕಾಡೆಮಿ ಸ್ಥಾಪನೆಯಾಗುವ ಸೂಚನೆಯೇ ಇಲ್ಲ.

ಕೆ. ಸತ್ಯನಾರಾಯಣ.

ಕೆ. ಸತ್ಯನಾರಾಯಣ ಮನಸ್ಸು ಮಾಡಿದ್ದರೆ ಯಾವತ್ತೋ ಕನ್ನಡ ಪ್ರಭ ಸಂಪಾದಕರಾಗಬಹುದಿತ್ತು. ಆದರೆ ಅಂಥದ್ದರಲ್ಲಿ ತನಗೆ ಆಸಕ್ತಿಯೇ ಇಲ್ಲ ಎಂಬಂತೆ ಸತ್ಯ ಇದ್ದುಬಿಟ್ಟಿದ್ದರು. ಬದಲಾವಣೆಯೆಂದರೆ ಮಾರುದೂರ ನಿಲ್ಲುವ ಅವರಿಗೆ ಯಥಾ ಸ್ಥಿತಿಯ ಮುಂದುವರಿಕೆ (status quo) ತುಂಬ ಪ್ರಿಯವಾದ ಸ್ಥಿತಿ. ರಾಜೀವಗಾಂಧೀ ಥರ ‘ ಸದ್ಯಕ್ಕೆ ಹಾಗೇ ಇರಲಿ... ಆಮೇಲೆ ನೋಡೋಣ’ ಅನ್ನುವುದು ಅವರ ಜನಪ್ರಿಯ Adhoc phrase.

ಸತ್ಯನಾರಾಯಣ ಅವರ ಹಿನ್ನೆಲೆ ಬಗ್ಗೆ ಹೆಚ್ಚಿನ ವಿವರಗಳು ಗೊತ್ತಿರುವವರು ನಿಮಗೆ ಸಿಗುವುದಿಲ್ಲ. ಅವರನ್ನು ಸುಮಾರಾಗಿ ಬಲ್ಲವರು ಕೂಡ ಸತ್ಯನಾರಾಯಣ ತಾಯಿನಾಡು ಪತ್ರಿಕೆಯಲ್ಲಿದ್ದರು ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ. ಅದಕ್ಕಿಂತ ಹೆಚ್ಚಿಗೆ ಅವರ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಮತ್ತು ಆಸಕ್ತಿ ಯಾರಿಗೂ ಬರದಂತೆ ಸತ್ಯ ನಡೆದುಕೊಂಡಿದ್ದಾರೆ ಕೂಡ. ತೀವ್ರವಾಗಿ ಕಾಡುವಂಥ ಸಂಗತಿಗಳ ಬಗ್ಗೆ ದಿವ್ಯ ನಿರ್ಲಿಪ್ತತೆ ಪ್ರದರ್ಶಿಸುವುದು ಸತ್ಯ ಅವರ ಮೆಚ್ಚಿನ ಹವ್ಯಾಸ.

ಕನ್ನಡ ಪ್ರಭ ಆರಂಭವಾದ ದಿನಗಳಿಂದ ಸತ್ಯ ಅದರ ಜೊತೆಗಿದ್ದಾರೆ. ಸಂಪಾದಕರು ಜಂಗಮ, ಸಹಾಯಕ ಸಂಪಾದಕರು ಸ್ಥಾವರ ಎಂಬ ನಂಬಿಕೆ ನುಚ್ಚುನೂರಾಗಿ ಕೊನೆಗೆ ಸಂಪಾದಕರಾದವರು. ಕನ್ನಡ ಪ್ರಭದ ನಿಷ್ಠಾವಂತ ಸೇವಕನಂತಿದ್ದ ಸತ್ಯ ಯಾವತ್ತೂ ಬೇರೆ ಕೆಲಸ ಹುಡುಕುವ ಪ್ರಯತ್ನವನ್ನು ಮಾಡಿದ ವರದಿಗಳು ಇನ್ನೂ ಬಂದಿಲ್ಲ. .ಬೆಂಗಳೂರಲ್ಲಿ ಇಕಾನಾಮಿಕ್‌ ಟೈಮ್ಸ್‌ ಆರಂಭವಾದಾಗೊಮ್ಮೆ ಸತ್ಯ ಆ ಕಡೆ ಹಾರುವ ಆಸಕ್ತಿ ತೋರಿದ್ದುಂಟು. ಆದರೆ ಅದು ನೆರವೇರಲಿಲ್ಲ.

ಕನ್ನಡ ಪ್ರಭ, ಎಕ್ಸ್‌ಪ್ರೆಸ್‌ಗಳಲ್ಲಿ ಸಂಪಾದಕರಿಲ್ಲದೆ ಇದ್ದಾಗ ನಿಭಾಯಿಸಿಕೊಂಡು ಹೋದ ಖ್ಯಾತಿ ಸತ್ಯ ಅವರದು. ಅವರನ್ನ ಅತ್ಯುತ್ತಮ ಪತ್ರಕರ್ತ ಎಂದು ಈಗಲೂ , ನನ್ನನ್ನೂ ಸೇರಿಸಿಕೊಂಡು ಎಲ್ಲರೂ ಗೌರವಿಸುತ್ತಾರೆ. ಪತ್ರಕರ್ತ ಹೇಗಿರಬೇಕು ಅನ್ನುವುದಕ್ಕೆ ಅವರು ಅತ್ಯುತ್ತಮ ಉದಾಹರಣೆ. ನಿಷ್ಠುರತೆ, ವಸ್ತುನಿಷ್ಠ ನಿಲುವು, ವೈಯಕ್ತಿಕ ಸಂಬಂಧಗಳಿಂದ ದೂರವಿರುವುದು ಮೊದಲಾದುವುಗಳನ್ನು ಸತ್ಯ ಇವತ್ತೂ ಬಿಟ್ಟಿಲ್ಲ. ಹೀಗಾಗಿ ಅವರು ಬೈಲೈನ್‌ ಮೂಲಕ ಹತ್ತಿರಾದಷ್ಟು ವೈಯಕ್ತಿಕವಾಗಿ ಯಾರಿಗೂ ಹತ್ತಿರವಾಗಲಿಲ್ಲ.

ವರ್ಷಕ್ಕೊಮ್ಮೆ ನ್ಯಾಷನಲ್‌ ಕಾಲೇಜ್‌ ಸೀಟಿಗೋಸ್ಕರ ಎಚ್‌. ನರಸಿಂಹಯ್ಯ ಅವರಿಗೆ ನಿರ್ಲಿಪ್ತರಾಗಿದ್ದುಕೊಂಡೇ ಒಂದು ಫೋನೋ, ಚೀಟಿಯೋ ಕಳಿಸುವುದು ಬಿಟ್ಟುಬಿಟ್ಟರೆ ಯಾರನ್ನೂ ಅವರು ಸ್ವಂತಕ್ಕಾಗಿ ಬಳಸಿಕೊಳ್ಳಲಿಲ್ಲ ಅನ್ನೋದು ಅವರ ಹೆಚ್ಚುಗಾರಿಕೆ.

ಆದರೆ ಕನ್ನಡ ಪ್ರಭದ ಸಂಪಾದಕತ್ವ ವಹಿಸಿಕೊಂಡ ಕ್ಷಣದಿಂದ ಸತ್ಯ ಅವರೇನೂ ಅಷ್ಟು ಸಂತೋಷವಾಗಿಲ್ಲ. ಹಾಗೇ ಅವರ ಸಹೋದ್ಯೋಗಿಗಳು ಕೂಡ. ಸತ್ಯ ತುಂಬ ನಿಧಾನ ಅನ್ನುವುದು ಅವರಿಗೇ ಅರಿವಾದಂತಿದೆ. ಹಳೆಯ ಕಾಲದ ಅವರ ಜಿಪುಣತನ ಹಾಗೂ ಇಕಾನಾಮಿಕ್‌ ಚೇಂಜ್‌ನ ನಿಲುವು ಬದಲಾಗಿಲ್ಲ. ಹೀಗಾಗಿ ಕನ್ನಡ ಪ್ರಭದಿಂದ ಮೂವತ್ತಕ್ಕೂ ಹೆಚ್ಚು ಪತ್ರಕರ್ತರು ಕೆಲಸ ಬಿಟ್ಟು ಹೋದರು. ಹೊಸಬರು ಸೇರಿಕೊಳ್ಳುವುದಕ್ಕೆ ಹಿಂದುಮುಂದು ನೋಡಿದರು. ಯಾರು ಬಿಟ್ಟು ಹೋದರೂ ತಾನೊಬ್ಬನೇ ಪತ್ರಿಕೆ ನಡೆಸಬಲ್ಲೆ ಎಂಬ ಆತ್ಮ ವಿಶ್ವಾಸ ಮಾತ್ರ ಸತ್ಯ ಅವರಲ್ಲಿ ಈಗಲೂ ಇದೆ. ಆದರೆ ಆತ್ಮ ವಿಶ್ವಾಸ ಒಂದೇ ಪತ್ರಿಕೆ ಹೊರಬರುವುದಕ್ಕೆ ಒಳ್ಳೆಯದಾಗುವುದಿಲ್ಲ ಎಂಬುದು ಅವರಿಗೆ ತಡವಾಗಿಯಾದರೂ ಅರ್ಥವಾಗಬಹುದು. ಆದರೆ ಇನ್ನೇನು

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X