ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹೆ ಮತ್ತು ಮಿಸ್ಸೌರಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಒಪ್ಪಂದ

By Staff
|
Google Oneindia Kannada News

ಮಣಿಪಾಲ : ಇಂಜಿನಿಯರಿಂಗ್‌ ಶಿಕ್ಷಣಕ್ಕೆ ಸಂಬಂಧಿಸಿ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಬಳಗ ಅಮೆರಿಕದ ಕಾನ್ಸಾಸ್‌ನ ಮಿಸ್ಸೌರಿ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಹೊಸ ಒಪ್ಪಂದದ ಪ್ರಕಾರ ಮಣಿಪಾಲದಲ್ಲಿ ಮೊದಲ ಎರಡು ವರ್ಷ ಇಂಜಿನಿಯರಿಂಗ್‌ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕೊನೆಯ ಎರಡು ವರ್ಷದ ಶಿಕ್ಷಣವನ್ನು ಮಿಸ್ಸೌರಿ ವಿಶ್ವ ವಿದ್ಯಾಲಯದಲ್ಲಿ ಪಡೆಯಲಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್‌ ಪದವಿಯನ್ನೂ ಮಿಸ್ಸೌರಿ ವಿಶ್ವ ವಿದ್ಯಾಲದಲ್ಲಿಯೇ ನೀಡಲಾಗುವುದು.

ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ಎಜುಕೇಶ್‌ನ್‌ ಅಧ್ಯಕ್ಷ ಡಾ. ರಾಮದಾಸ್‌ ಪೈ ಮತ್ತು ಮಿಸ್ಸೌರಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಪ್ಯಾಟ್ರಿಸಿಯಾ ಲಾಂಗ್‌ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಸಂಸ್ಥೆಯ ಪ್ರಕಟಣೆ ಸೋಮವಾರ ತಿಳಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X