ರಾಹುಲ್ ದ್ರಾವಿಡ್, ಅಜೀಂ ಪ್ರೇಂಜಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು : ಪ್ರತಿವರ್ಷದಂತೆ ಈ ವರ್ಷ ಕೂಡ ರಾಜ್ಯ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ವಿಶ್ವವಿಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್, ಸಾಫ್ಟ್‌ವೇರ್ ಸುಲ್ತಾನ್ ಅಜೀಂ ಪ್ರೇಂಜಿ, ನೃತ್ಯಪಟು ಪ್ರತಿಭಾ ಪ್ರಹ್ಲಾದ್ ಸೇರಿದಂತೆ 55 ಗಣ್ಯರಿಗೆ ಹಾಗೂ ಮೂರು ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗಿದೆ.
ಈ ವಿಷಯವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಅವರು, ಯಾವುದೇ ಅಪಸ್ವರಕ್ಕೆ ಆಸ್ಪದ ಇಲ್ಲದಂತೆ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದ್ದು, ಸಮತೋಲನ ಕಾಯ್ದು ಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಶಸ್ತಿ ಕೋರಿ ವಿವಿಧ ಕ್ಷೇತ್ರಗಳಿಂದ ಸುಮಾರು 2000 ಅರ್ಜಿಗಳು ಬಂದಿದ್ದವು. ಪ್ರಶಸ್ತಿಗೆ ಆಯ್ಕೆ ಮಾಡಿರುವ 55 ಜನರು ಹಾಗೂ 3 ಸಂಸ್ಥೆಗಳ ಪೈಕಿ ಶೇಕಡಾ 70ರಷ್ಟನ್ನು ಈ ಅರ್ಜಿ ರಾಶಿ ಇಂದಲೂ ಉಳಿದ 30 ರಷ್ಟನ್ನು ವಿವಿಧ ಅಕಾಡಮಿ ಹಾಗೂ ತಜ್ಞರ ಸಲಹೆ ಮೇರೆಗೆ ಆಯ್ಕೆ ಮಾಡಲಾಗಿದೆ. ಈಬಾರಿ 14 ಮಹಿಳೆಯರು ಪ್ರಶಸ್ತಿ ಪಡೆದಿದ್ದು. ಇದು ಪ್ರಶಸ್ತಿಯ ಶೇ. 24ರಷ್ಟಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತಂದು, ಕಡಲಾಚೆ ಕನ್ನಡ ಸೇವೆ ಸಲ್ಲಿಸುತ್ತಿರುವ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕಾ) ದೇವದಾಸಿ ವಿಮೋಚನಾ ಸಂಸ್ಥೆ ಮತ್ತು ಶ್ರೀರಾಮಸೇವಾ ಮಂಡಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ನವೆಂಬರ್ 1ರ ಗುರುವಾರ ಸಂಜೆ 6-30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ. ರಾಮಮೂರ್ತಿ ಹಾಗೂ ಕಾರ್ಯದರ್ಶಿ ಸಿ.ಎಸ್. ಕೇದಾರ್ ಹಾಜರಿದ್ದರು.
ನೆನಪಿನ ಗಣಿಯಿಂದ : ನಾಲ್ಕು ವರ್ಷಗಳ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾದಾಗ ಪಿ. ಲಂಕೇಶ್ ಹೀಗೆ ಪ್ರತಿಕ್ರಿಯಿಸಿದ್ದರು : ಯೋಗ್ಯರಿಗೆ ಮುಂದಿನ ಬಾರಿ....!
ಇಸವಿ 2001- ರಾಜ್ಯೋತ್ಸವ ಪ್ರಶಸ್ತಿ ಪಡೆದ ಗಣ್ಯರು-1
| ಕ್ರ.ಸಂ | ಪ್ರಶಸ್ತಿ ವಿಜೇತರ ಹೆಸರು | ಕ್ಷೇತ್ರ |
| 1 | ಅಂತಪ್ಪ ಫಾದರ್ - ಬೆಂಗಳೂರು ಗ್ರಾಮಾಂತರ | ಕನ್ನಡ ಸೇವೆ |
| 2 | ಜಯಸಿಂಹ .ಬಿ. - ಮೈಸೂರು | ಕನ್ನಡ ಸೇವೆ |
| 3 | ದೇಚು ಮೂಲ - ಬೆಂಗಳೂರು | ಟೆನ್ನಿಸ್ |
| 4 | ರಾಹುಲ್ ದ್ರಾವಿಡ್ - ಬೆಂಗಳೂರು | ಕ್ರಿಕೆಟ್ |
| 5 | ರಂಜನಿ ರಾಮಾನುಜಂ - ಅಂಗವಿಕಲರು - ಬೆಂಗಳೂರು | ಬ್ಯಾಡ್‌ಮಿಂಟನ್ |
| 6 | ಹೊನ್ನಪ್ಪ - ಬೆಂಗಳೂರು | ಕಬಡ್ಡಿ |
| 7 | ಜಯಮಾಲಾ - ಉಡುಪಿ | ಸಿನಿಮಾ |
| 8 | ಬಿ.ಎಸ್. ರಂಗ - ಬೆಂಗಳೂರು | ಸಿನಿಮಾ |
| 9 | ನಿಂಗಮ್ಮ ಯಾಚೇನಹಳ್ಳಿ - ಮೈಸೂರು | ಸೋಬಾನೆ ಹಾಡು |
| 10 | ಬಸಪ್ಪ ಎಂ.ಆರ್. - ಚಿಕ್ಕಮಗಳೂರು | ವೀರಗಾಸೆ |
| 11 | ಬಸವೇಗೌಡ - ಮಂಡ್ಯ | ಭಾಗವಂತಿಕೆ-ಪಟಾಕುಣಿತ |
| 12 | ಹೆಗಡೆ ಎಲ್.ಆರ್ - ಉತ್ತರ ಕನ್ನಡ | ಜಾನಪದ |
| 13 | ಪ್ರತಿಭಾ ಪ್ರಹ್ಲಾದ್ - ಬೆಂಗಳೂರು | ನೃತ್ಯ |
| 14 | ಭಾನುಮತಿ - ಬೆಂಗಳೂರು | ನೃತ್ಯ |
| 15 | ಬಿ.ಎಸ್. ಮಣಿ- ಬೆಂಗಳೂರು | ಪತ್ರಿಕೋದ್ಯಮ |
| 16 | ಬಿ.ವಿ. ವೈಕುಂಠರಾಜು- ಚಿತ್ರದುರ್ಗ | ಪತ್ರಿಕೋದ್ಯಮ |
| 17 | ಕೆ. ಎಸ್. ಸಚ್ಚಿದಾನಂದ ಮೂರ್ತಿ - ಕೋಲಾರ | ಪತ್ರಿಕೋದ್ಯಮ |
| 18 | ಅರುವ ಕೊರಗಪ್ಪ ಶೆಟ್ಟಿ - ದಕ್ಷಿಣ ಕನ್ನಡ | ಯಕ್ಷಗಾನ |
| 19 | ನೀಲಾವರ ಲಕ್ಷ್ಮೀನಾರಾಯಣ ರಾವ್ - ಉಡುಪಿ | ಭಾಗವಂತಿಕೆ |
| 20 | ಬೆಳ್ಳಿ ಕಿರೀಟದ ವೆಂಕಟದಾಸ್ - ಬೆಂಗಳೂರು ಗ್ರಾಮಾಂತರ | ಮೂಡಲಪಾಯ |
| 21 | ಚನ್ನಬಸಪ್ಪ ಜಿ.ವಿ. - ಗುಬ್ಬಿ | ರಂಗಭೂಮಿ |
| 22 | ನಾಗರತ್ನ ಕೆ. - ಬಳ್ಳಾರಿ | ರಂಗಭೂಮಿ |
| 23 | ಬಷೀರ್ - ಬೆಂಗಳೂರು | ರಂಗಭೂಮಿ |
| 24 | ಬಸವಲಿಂಗಯ್ಯ - ಮೈಸೂರು | ರಂಗಭೂಮಿ |
| 25 | ಲಲಿತಾ ರಾಚಪ್ಪ ಪಾತ್ರೋಟ - ಬೆಳಗಾವಿ | ರಂಗಭೂಮಿ |
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications