ತಂಗಾಳಿಯ ಕಬ್ಬನ್ ಆವರಣದ ಪ್ರೆಸ್ ಕ್ಲಬ್ಬಲ್ಲಿ ಆ್ಯಂಥ್ರಾಕ್ಸ್ ಗಾಳಿ !
ಬೆಂಗಳೂರು : ಪ್ರೆಸ್ ಕ್ಲಬ್ಬಲ್ಲಿ ಆ್ಯಂಥ್ರಾಕ್ಸಂತೆ! ಈ ಗುಲ್ಲು ಹರಡುತ್ತಲೇ ಕಬ್ಬನ್ ಉದ್ಯಾನದ ತಂಗಾಳಿ ನಡುವೆ ಮಾತು ಮಂಥನ ನಡೆಸುವ ಮಾಧ್ಯಮದ ಬಳಗದ ಸದಸ್ಯರ ಸಂಖ್ಯೆಯಲ್ಲಿ ಮೊಟಕಾಗಿದೆ. ಮಂಗಳವಾರ ಪ್ರೆಸ್ ಕ್ಲಬ್ ಆಫ್ ಬೆಂಗಳೂರಿಗೆ ಪೊಲೀಸರು ಬಂದಿದ್ದರು. ಎಂಥದೋ ಬಿಳಿಪುಡಿಯಿರುವ ಲಕೋಟೆಯಾಂದು ಅಲ್ಲಿತ್ತು !
ಎಂದಿನಂತೆ ಪತ್ರಗಳನ್ನು ವಿಂಗಡಿಸಿದ ಒಬ್ಬರ ಗಮನವನ್ನು ಹಿಡಿದಿಟ್ಟು, ಆತಂಕ ಹುಟ್ಟಿಸಿದ ಬಿಳಿಪುಡಿಯಿರುವ ಲಕೋಟೆ ನಗರದ ಫ್ರೇಜರ್ ಟೌನ್ನಿಂದ ಬಂದಿತ್ತು. ಬೆಂಗಳೂರು ಐಟಿ ಡಾಟ್ ಕಾಂ ಮೇಳ- 2001 ಕುರಿತ ಜಾಹಿರಾತಿನ ಝೆ- ರಾಕ್ಸ್ ಪ್ರತಿಯ ಜೊತೆಯಲ್ಲೇ ಅದು ಬೆರೆತಿತ್ತು. ಪೊಲೀಸರಿಗೆ ವಿಷಯ ಮುಟ್ಟಿ, ಬಂದು ಪರಿಶೀಲಿಸಿದರು. ಪೊಲೀಸ್ ಇನ್ಸ್ಪೆಕ್ಟರ್ ವೆಂಕಟಸ್ವಾಮಿ ಅವರ ಪ್ರಕಾರ ಲಕೋಟೆಯಲ್ಲಿನ ಪುಡಿ ಪ್ರಾಯಶಃ ಆ್ಯಂಥ್ರಾಕ್ಸ್ ಹರಡುವಂತಹುದಲ್ಲ. ಆದರೂ ಪರೀಕ್ಷೆಗೆ ಕಳುಹಿಸಿಕೊಡುವುದಾಗಿ ಅವರು ಹೇಳಿದರು.
ಬೆಂಗಳೂರಿಗೆ ಆ್ಯಂಥ್ರಾಕ್ಸ್ ಭೀತಿ ಹುಟ್ಟಿಸುವ ಪುಡಿ ಹೊತ್ತು ತಂದಿರುವ ಮೂರನೇ ಪತ್ರವಿದು. ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಯ ಕಾರ್ಯಾಲಯಕ್ಕೂ ಪುಡಿ ಹೊತ್ತ ಪತ್ರವೊಂದು ಬಂದಿದ್ದೂ ಸೇರಿದಂತೆ ಕಳೆದ ವಾರ ಇಂಥಾ ಎರಡು ಪ್ರಕರಣಗಳು ವರದಿಯಾಗಿದ್ದವು. ಪುಡಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಫಲಿತಾಂಶ ಇನ್ನೂ ತಿಳಿದುಬಂದಿಲ್ಲ.
(ಪಿಟಿಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications