ಅಮೆರಿಕ ಕನ್ನಡ ಕೂಟಗಳ ಆಗರ ‘ಅಕ್ಕ’ಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು : ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. 55 ಗಣ್ಯರು ಹಾಗೂ ಮೂರು ಸಂಸ್ಥೆಗಳು ಪ್ರಶಸ್ತಿ ಪಡೆದ ಪಟ್ಟಿಯಲ್ಲಿವೆ. ಅದರಲ್ಲಿ ಇಬ್ಬರು ಹೊರನಾಡ ಕನ್ನಡಿಗರು ಮತ್ತು ಸದ್ದು ಗದ್ದಲ ಇಲ್ಲದೆ, ಕಡಲಾಚೆ ಕನ್ನಡ ಸೇವೆ ಸಲ್ಲಿಸುತ್ತಿರುವ ‘ಅಕ್ಕ’ ಪ್ರಶಸ್ತಿಗೆ ಪಾತ್ರವಾಗಿರುವುದು ಈ ಬಾರಿಯ ವಿಶೇಷ.
ಪ್ರಸ್ತುತ ಚೆನ್ನೈನಲ್ಲಿ ನೆಲೆಸಿರುವ, ಅಮೆರಿಕನ್ ಕನ್ಸುಲೇಟ್ ಜನರಲ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕೆಲಸ ಮಾಡುತ್ತಿರುವ ಕನ್ನಡಿಗ ಸಿ. ದಿವಾಕರ್ ಪತ್ರಕರ್ತ ಮತ್ತು ಸಾಹಿತಿ. ಇವರು ಹೊರನಾಡಿನಲ್ಲಿ ಸಲ್ಲಿಸುತ್ತಿರುವ ಸಾಹಿತ್ಯ ಹಾಗೂ ಕನ್ನಡ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಅಂತೆಯೇ ಇಂಗ್ಲೆಂಡ್‌ನಲ್ಲಿ ಕನ್ನಡ ಕೈಂಕರ್ಯ ಕೈಗೊಂಡಿರುವ ವಿಶ್ವಂಬರನಾಥ್ ಅವರ ಸೇವೆಯನ್ನೂ ಸರಕಾರ ಗುರ್ತಿಸಿದೆ.
ಅಕ್ಕ ಬಗ್ಗೆ : ಅಕ್ಕ ಅರ್ಥಾತ್ ಅಮೆರಿಕ ಕನ್ನಡ ಕೂಟಗಳ ಆಗರ, ಆರಂಭವಾದದ್ದು 1998ರಲ್ಲಿ . ಈ ಅಲ್ಪಾವಧಿಯಲ್ಲಿ ಅಕ್ಕ ಮಾಡಿರುವ ಸಾಧನೆ ಅಪಾರ, ಅನುಪಮ. ಸ್ಥಾಪನೆಯಾದ ವರ್ಷವೇ ಫೀನಿಕ್ಸ್ ನಗರದಲ್ಲಿ ಕನ್ನಡಿಗರ
ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಸಂಸ್ಥೆ, ಹ್ಯೂಸ್ಟನ್‌ನಲ್ಲಿ ವಿಶ್ವ ಸಹಸ್ರಮಾನ ಸಮ್ಮೇಳನ-2000 ವನ್ನೂ ವಿಜೃಂಭಣೆಯಿಂದ ನಡೆಸಿತು.
ಅಮೆರಿಕದ ವಿವಿಧೆಡೆ ಹಂಚಿಹೋಗಿರುವ ಕನ್ನಡಿಗರನ್ನು ಹಾಗೂ ಕನ್ನಡ ಸಂಘಟನೆಗಳನ್ನು ಒಂದೇ ಛತ್ರಿಯಡಿ ಸೇರಿಸುವ ಮಹತ್ವದ ಉದ್ದೇಶದಿಂದ ಹುಟ್ಟಿಕೊಂಡ ಈ ಬಳಗದಲ್ಲಿ ಅಮೇರಿಕಾದಲ್ಲಿರುವ ಕನ್ನಡಿಗರು ಮಾತ್ರವಲ್ಲದೆ, ಕೆನಡಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ಇದ್ದಾರೆ.
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರುವ ಎಂಬ ರಾಷ್ಟ್ರಕವಿ ಕುವೆಂಪು ಅವರ ವಾಣಿಯನ್ನು ಧ್ಯೇಯವಾಗಿಟ್ಟುಕೊಂಡಿರುವ ಅಕ್ಕ ಕನ್ನಡ ಹಾಗೂ ಕರ್ನಾಟಕದ ಏಳಿಗೆಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಪೈಕಿ ಕನ್ನಡ ಭಾಷೆ, ಸಂಸ್ಕೃತಿ ಅಭಿವೃದ್ಧಿಗಾಗಿ ಹಂಪಿ ಕನ್ನಡ ವಿ.ವಿ. ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕಾವ್ಯ ಸಂಪುಟ ಪ್ರಕಟಣೆ ಮುಖ್ಯವಾದುದು.
ಇದಲ್ಲದೆ, ಅಕ್ಕ ಬಿಳಿಗಿರಿ ರಂಗನ ಬೆಟ್ಟದ ವ್ಯಾಪ್ತಿಯ ಗುಡ್ಡಗಾಡುಗಳಲ್ಲಿ ವಾಸವಾಗಿರುವ ಕನ್ನಡಿಗರ ಆರೋಗ್ಯ, ಶಿಕ್ಷಣಕ್ಕೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಮೆರಿಕಕ್ಕೆ ಭೇಟಿ ನೀಡುವ ಸಾಹಿತಿ, ಕಲಾವಿದರನ್ನು ಆದರದಿಂದ ಸ್ವಾಗತಿಸಿ, ಆದರಿಸುವ ಅಕ್ಕ ಎಲೆ ಮರೆಯ ಕಾಯಿಯಂತೆ ಕನ್ನಡ ಸೇವೆ ಮಾಡುತ್ತಿದೆ.
ಕೇವಲ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಹಾಗೂ ಅಮೆರಿಕ ಕನ್ನಡಿಗರೊಂದಿಗೆ ಸಂಪರ್ಕ ಇರುವ ಕೆಲವೇ ಕನ್ನಡಿಗರಿಗೆ ಮಾತ್ರ ಪರಿಚಿತವಾಗಿದ್ದ ‘ಅಕ್ಕ ’ ವನ್ನು ಕರ್ನಾಟಕಾದ್ಯಂತ ಜನಪ್ರಿಯಗೊಳಿಸಿದ ಕೀರ್ತಿ ಗಾಯಕ ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications