Get Updates
Get notified of breaking news, exclusive insights, and must-see stories!

ಬೈರನಕುಪ್ಪೆಯಲ್ಲಿ ಕಬಿನಿಗಡ್ಡ ಸೇತುವೆ ನಿರ್ಮಿಸಲು ಕೇಂದ್ರಕ್ಕೆ ಪ್ರಸ್ತಾವನೆ

ಬೆಂಗಳೂರು: ಕೇರಳ ಹಾಗೂ ಕರ್ನಾಟಕದ ಗಡಿಯಲ್ಲಿರುವ ಬೈರನಕುಪ್ಪೆ ಬಳಿ ಕಬಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಕುರಿತಂತೆ ಕೇಂದ್ರಕ್ಕೆ ಜಂಟಿ ಪ್ರಸ್ತಾವನೆ ಕಳಿಸಲು ಎರಡೂ ರಾಜ್ಯಗಳು ನಿರ್ಧರಿಸಿವೆ.

ಕೇರಳದ ಸಚಿವ ಎಂ. ಕೆ. ಮುನೀರ್‌ ಹಾಗೂ ರಾಜ್ಯ ಲೋಕೋಪಯೋಗಿ ಸಚಿವ ಧರಂ ಸಿಂಗ್‌ ಭಾನುವಾರ ಈ ಪ್ರಸ್ತಾವನೆಯ ಕುರಿತು ಮಾತು ಕತೆ ನಡೆಸಿದರು. ಮಡಿಕೇರಿಯ ಬೈರನಕುಪ್ಪೆ ಬಳಿ ಸೇತುವೆ ನಿರ್ಮಾಣವಾದರೆ ಮೈಸೂರು ಮತ್ತು ಕೇರಳ ನಡುವೆ ಸುಮಾರು 45 ಕಿಮೀ ಅಂತರ ಕಡಿಮೆಯಾಗುತ್ತದೆ. ಇದರಿಂದ ಎರಡೂ ರಾಜ್ಯಗಳ ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಉತ್ತಮ ಗೊಳ್ಳಲಿವೆ ಎಂದು ಭಾನುವಾರದ ಜಂಟಿ ಸುದ್ದಿಗೋಷ್ಠಿಯಲ್ಲಿ ಎರಡೂ ರಾಜ್ಯದ ಸಚಿವರು ಅಭಿಪ್ರಾಯಪಟ್ಟರು.

ಎರಡೂ ರಾಜ್ಯಗಳು ಕೇಂದ್ರಕ್ಕೆ ಮನವಿ ಸಲ್ಲಿಸಿ, ರಸ್ತೆ ನಿಧಿಯಿಂದ ಸುಮಾರು 6.5 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ಧರಂ ಸಿಂಗ್‌ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+