ಮ್ಯಾಚ್‌ಫಿಕ್ಸಿಂಗ್‌ ಆರೋಪದಿಂದ ಕಪಿಲ್‌ದೇವ್‌ ಮುಕ್ತ

Kapil Devನವದೆಹಲಿ : ವಿಶ್ವವಿಖ್ಯಾತ ಕ್ರಿಕೆಟ್‌ ಪಟು, ಭಾರತ ತಂಡದ ಮಾಜಿ ನಾಯಕ ಕಪಿಲ್‌ದೇವ್‌ ಮ್ಯಾಚ್‌ಫಿಕ್ಸಿಂಗ್‌ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಭಾರತೀಯ ಕ್ರಿಕೆಟ್‌ನ ಭ್ರಷ್ಟಾಚಾರ ತನಿಖಾಧಿಕಾರಿ ಕೆ. ಮಾಧವನ್‌ ಪ್ರಮಾಣ ಪತ್ರ ನೀಡಿದ್ದಾರೆ.

ಈ ಸಂಬಂಧದ ವಿಚಾರಣೆಯನ್ನು ಅವರು ಸೋಮವಾರ ಮಕ್ತಾಯಗೊಳಿಸಿದ್ದಾರೆ. ಆದರೆ, ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಹಾಗೂ ಅಜಿತ್‌ ವಾಡೇಕರ್‌ ವಿರುದ್ಧ ಬೊಟ್ಟು ಮಾಡಿ ತೋರಿದ್ದಾರೆ. 1999ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಸಂಬಂಧಿಸಿದಂತೆ, ಕೋಚ್‌ ಕಪಿಲ್‌ದೇವ್‌, ನಾಯಕ ಸಚಿನ್‌ ತೆಂಡೂಲ್ಕರ್‌ ಅವರನ್ನೊಳಗೊಂಡ ಅಂದಿನ ಭಾರತ ತಂಡದ ಆಡಳಿತ ಯಾವುದೇ ಅವ್ಯವಹಾರದಲ್ಲಿ ಪಾಲ್ಗೊಂಡಿಲ್ಲ ಎಂದು ಮಾಧವನ್‌ ನೀಡಿರುವ 52 ಪುಟಗಳ ಅಂತಿಮ ವರದಿಯಲ್ಲಿ ತಿಳಿಸಿದ್ದಾರೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಚಿನ್‌ ತಂಡೂಲ್ಕರ್‌ ಹಾಗೂ ಕಪಿಲ್‌ದೇವ್‌ ಈ ಪಂದ್ಯಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳು ತಮಗೆ ತೃಪ್ತಿ ನೀಡಿವೆ ಎಂದೂ ಬಿಸಿಸಿಐ ಪರವಾಗಿ ಪ್ರಕರಣದ ವಿಚಾರಣೆ ನಡೆಸಿದ ಮಾಧವನ್‌ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್‌ ಪಂದ್ಯವು ಅನಿಶ್ಚಿತತೆಯ ಆಟವಾಗಿದ್ದು, ಈ ಪಂದ್ಯದಲ್ಲಿ ಭಾರತದ ಅದೃಷ್ಟ ಕೈಕೊಟ್ಟಿತೇ ವಿನಾ, ಮತ್ತಾವುದೇ ರೀತಿಯ ಶಂಕಾಸ್ಮದ ನಡೆವಳಿಕೆಗಳಿಗೆ ಆಸ್ಪದ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮುನ್ನ ಸಿ.ಬಿ.ಐ ಕಪಿಲ್‌ ಮೇಲೆ ಮನೋಜ್‌ ಪ್ರಭಾಕರ್‌ ಹೊರಿಸಿದ್ದ ಆರೋಪವನ್ನು ವಜಾ ಮಾಡಿತ್ತು.

ಶ್ರೀಲಂಕಾದಲ್ಲಿ 1994ರಲ್ಲಿ ನಡೆದ ತ್ರಿಕೋಣ ಸರಣಿಯ ಪಾಕಿಸ್ತಾನ ವಿರುದ್ಧದ ಪಂದ್ಯ ಸಮಯದಲ್ಲಿ ಕಪಿಲ್‌ ತಮಗೆ ಲಂಚ ನೀಡಲು ಬಂದಿದ್ದರು ಎಂದು ಭಾರತ ತಂಡದ ಮಾಜಿ ವೇಗದ ಬೌಲರ್‌ ಮನೋಜ್‌ ಪ್ರಭಾಕರ್‌ ಆರೋಪಿಸಿದ್ದರು.

ಅಜರುದ್ದೀನ್‌ ಮೇಲೆ ಅನುಮಾನ: ಕಪಿಲ್‌ ನಿದೋಷಿಯಾದರೂ ಅನುಮಾನಗಳು ಮೊಹಮ್ಮದ್‌ ಅಜರುದ್ದೀನ್‌ ಹಾಗೂ ವಾಡೇಕರ್‌ ಸುತ್ತ ಸುತ್ತುತ್ತಿವೆ. 1996ರಲ್ಲಿ ಕಾನ್ಪುರದಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ವಿವಾದಾತ್ಮಕ ಪಂದ್ಯಕ್ಕೆ ಸಂಬಂಧಿಸಿದಂತೆ ಅನುಮಾನಗಳು ಹಾಗೇ ಉಳಿದಿವೆ. ಈ ಪಂದ್ಯದಲ್ಲಿ ಕ್ರಿಕೆಟ್‌ ಪಂದ್ಯಕ್ಕೆ ನ್ಯಾಯ ಒದಗಿಸದ ರೀತಿಯಲ್ಲಿ ಅತಿ ಕಡಿಮೆ ಸ್ಕೋರ್‌ ಮಾಡಿದ ಮನೋಜ್‌ ಪ್ರಭಾಕರ್‌ ಹಾಗೂ ನಯನ್‌ ಮೊಂಗಿಯಾ ಅವರಿಗೆ ದಂಡ ವಿಧಿಸಲಾಗಿತ್ತು.

ಈ ಹಂತದಲ್ಲಿ ತಂಡದ ಕೋಚ್‌ ವಾಡೇಕರ್‌ ಆಗಲೀ, ನಾಯಕ ಅಜರುದ್ದೀನ ಆಗಲೀ ಮೊಂಗಿಯಾ ಹಾಗೂ ಪ್ರಭಾಕರ್‌ಗೆ ವೇಗವಾಗಿ ರನ್‌ ಮಾಡುವಂತೆ ಸೂಚನೆ ಕಳಿಸದ ಬಗ್ಗೆ ಮಾಧವನ್‌ ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಇಬ್ಬರ ವಿರುದ್ಧ ಪ್ರಸಕ್ತ ಸಂದರ್ಭದಲ್ಲಿ ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯ. ಕಾರಣ ಅಜಿತ್‌ ವಾಡೇಕರ್‌ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೆ, ಮೊಹಮ್ಮದ್‌ ಅಜರುದ್ದೀನ್‌ ಅವರಿಗೆ ಈಗಾಗಲೇ ಅಜೀವ ಪರ್ಯಂತ ಕ್ರಿಕೆಟ್‌ ಆಡದಂತೆ ನಿಷೇಧ ಹೇರಲಾಗಿದೆ.

(ಎಎಫ್‌ಪಿ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+