Get Updates
Get notified of breaking news, exclusive insights, and must-see stories!

ಚನ್ನರಾಯಪಟ್ಟಣ : ಆಂಥ್ರಾಕ್ಸ್‌ ಭೀತಿ ಹುಟ್ಟಿಸಿದ ಬಿಳಿಪುಡಿ ಅಂಚೆ!

ಚನ್ನರಾಯಪಟ್ಟಣ : ಈಗ ವಿಶ್ವಾದ್ಯಂತ ಒಂದೇ ಸುದ್ದಿ. ಎಲ್ಲೆಡೆ ಆಂಥ್ರಾಕ್ಸ್‌ ಭೀತಿ. ಅಂಚೆ ಪತ್ರಗಳ ಮೂಲಕ ಮಾರಣಾಂತಿಕ ಆಂಥ್ರಾಕ್ಸ್‌ ಸೊಂಕು ಹಬ್ಬುತ್ತಿದೆ ಎಂಬ ಸುದ್ದಿ ಅಂಚೆ ಇಲಾಖೆಯನ್ನೇ ಕಂಗೆಡಿಸಿದೆ. ಹಗ್ಗ ಕಂಡು ಹೆದರುವವನ ಮೇಲೆ ಹಾವು ಬಿದ್ದರೆ ಏನಾಗಬೇಡ ಹೇಳಿ? ಚನ್ನರಾಯಪಟ್ಟಣದಲ್ಲಿ ಆಗಿರುವುದೂ ಅದೇ.

ಪಟ್ಟಣದ ನಿವಾಸಿ ಗಣೇಶ್‌ ಎಂಬುವವರಿಗೆ ಬೆಂಗಳೂರಿನ ಮುದ್ರೆ ಹೊತ್ತು ಬಂದಿರುವ ಅನಾಮಧೇಯ ಅಂಚೆ ಕವರ್‌ನಲ್ಲಿ ವಿಭೂತಿಯಂಥ ಬಿಳಿ ಪುಡಿ ಇದ್ದು, ಪಟ್ಟಣದಲ್ಲಿ ಆತಂಕ ಮೂಡಿದೆ. ಕೆಲವರು ಇದು ಆಂಥ್ರಾಕ್ಸ್‌ ಸೊಂಕು ಪುಡಿ ಎಂದರೇ, ಮತ್ತೆ ಕೆಲವರು ಯಾರೋ ಆಗದವರು ಮಾಟ ಮಾಡಿಸಿ, ವಿಭೂತಿ ಕಳಿಸಿದ್ದಾರೆ ಎನ್ನುತ್ತಿದ್ದಾರೆ.

ಸದ್ಯಕ್ಕಂತೂ ಅನಾಮಧೇಯ ಕವರ್‌ ಹೊತ್ತು ತಂಡ ಬಿಳಿ ಪುಡಿ ಇಲ್ಲಿನ ಸರಕಾರ ಆಸ್ಪತ್ರೆಯ ವೈದ್ಯರ ಪರೀಕ್ಷೆಗಾಗಿ ತೆರಳಿದೆ. ಪರೀಕ್ಷೆ ಫಲಿತಾಂಶದ ನಂತರವಷ್ಟೇ ಆ ಪುಡಿ ಏನು ಎಂಬುದಕ್ಕೆ ಉತ್ತರ ಸಿಗಲು ಸಾಧ್ಯ.

ದೆಹಲಿ ವರದಿ : ಈ ಮಧ್ಯೆ ಜಗತ್ತಿನೆಲ್ಲೆಡೆ ಆಂಥ್ರಾಕ್ಸ್‌ ಸೊಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲ ಪತ್ರಗಳ ಮೇಲೆ ತೀವ್ರ ನಿಗಾ ಇಡುವಂತೆ ಅಂಚೆ ಇಲಾಖೆ ತನ್ನ ಸಿಬ್ಬಂದಿಗೆ ಸೂಚಿಸಿದೆ. ಭಾರತದ ಎಲ್ಲೂ ಆಂಥ್ರಾಕ್ಸ್‌ ಸೊಂಕು ಇಲ್ಲವಾದರೂ, ಉಗ್ರಗಾಮಿಗಳು ಈ ಕಾರ್ಯಕ್ಕೆ ಕೈಹಾಕಬಹುದು ಎಂಬ ಕಾರಣದಿಂದ ತೀವ್ರ ನಿಗಾ ವಹಿಸಲಾಗಿದೆ ಎಂದು ಅಂಚೆ ಇಲಾಖೆ ಕಾರ್ಯದರ್ಶಿ ಗೌತಮ್‌ ಗುಪ್ತಾ ತಿಳಿಸಿದ್ದಾರೆ.

ಪ್ರವೇಶ ಹಂತದಲ್ಲೇ ಇದನ್ನು ಪತ್ತೆಹಚ್ಚಲು ಎಲ್ಲಾ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ವಿಶ್ವಸಂಸ್ಥೆಯ ಜಾಗತಿಕ ಅಂಚೆ ಒಕ್ಕೂಟ ನೀಡಿರುವ ನಿರ್ದೇಶನ ಹಾಗೂ ಮಾರ್ಗದರ್ಶನಗಳನ್ನು ಚಾಚೂ ತಪ್ಪದೆ ಅನುಸರಿಸಲಾಗುತ್ತಿದೆ. ಅಂತೆಯೇ ದೇಶದಿಂದ ಅಮೆರಿಕೆಗೆ ಹೋಗುವ ಪತ್ರಗಳನ್ನೂ ಕಲಂಕಷ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+