Get Updates
Get notified of breaking news, exclusive insights, and must-see stories!

ಚಿತ್ರದುರ್ಗದ ಶೂನ್ಯಪೀಠದಲ್ಲಿ ಐದು ದಿನಗಳ ಸಾಂಸ್ಕೃತಿಕ ಉತ್ಸವ

ಚಿತ್ರದುರ್ಗ : ಚಿನ್ಮೂಲಾದ್ರಿಯ ಶಿವಮೂರ್ತಿ ಸ್ವಾಮಿ ನೇತೃತ್ವದ ಶೂನ್ಯ ಪೀಠ , ಐದು ದಿವಸಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ.

ಉತ್ಸವವು ಅಕ್ಟೋಬರ್‌ 23ರಂದು ಆರಂಭವಾಗಲಿದೆ. ಅರಣ್ಯ ಮಂತ್ರಿ ಕೆ. ಎಚ್‌. ರಂಗನಾಥ್‌ ಉತ್ಸವವನ್ನು ಉದ್ಘಾಟಿಸುವರು. ಐದು ದಿನಗಳ ಉತ್ಸವದಲ್ಲಿ ಸುಮಾರು 15ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸ್ವಾಮೀಜಿಗಳ ಪ್ರಕಟಣೆ ತಿಳಿಸಿದೆ.

ಸಾಹಿತಿ, ಪ್ರೊ. ಜಿ. ಎಸ್‌. ಶಿವರುದ್ರಪ್ಪ, ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್‌, ಸಂಸ್ಕೃತಿ ಸಚಿವೆ ರಾಣಿ ಸತೀಶ್‌, ಶಿವರಾಜ್‌ ಪಾಟೀಲ್‌, ಎ.ಎಂ. ಹಿಂಡಸಗೇರಿ ಮತ್ತು ಸಿದ್ಧಲಿಂಗಯ್ಯ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಹಿರಿಯ ಪ್ರತಿನಿಧಿಗಳು ಈ ಉತ್ಸವದಲ್ಲಿ ಭಾಗವಹಿಸುವರು.

ಅಕ್ಟೋಬರ್‌ 26ರಂದು ಜಾನಪದ ಮೇಳ ನಡೆಯಲಿದೆ. ಜೊತೆಗೆ ಶಿವಮೂರ್ತಿ ಸ್ವಾಮಿಗಳ ಆಧ್ಯಾತ್ಮ ಪುಸ್ತಕಗಳನ್ನೂ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+