Get Updates
Get notified of breaking news, exclusive insights, and must-see stories!

ಬಿಡಿಎ 10 ಸಾವಿರ ಸೈಟ್‌ ಹಂಚುತ್ತಿದೆ; ತಡವೇಕೆ ಅರ್ಜಿ ಹಾಕಿ..

ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ 20 ಸಾವಿರ ನಿವೇಶನಗಳನ್ನು ಹಂಚುವ ಗುರಿ ಹೊಂದಿರುವ ಬಿಡಿಎ, 10 ಸಾವಿರ ನಿವೇಶನಗಳನ್ನು ಹಂಚಲು ಅರ್ಜಿ ಆಹ್ವಾನಿಸಿದೆ. ಬನಶಂಕರಿ 6ನೇ ಹಂತದಲ್ಲಿ ಈ ನಿವೇಶನಗಳನ್ನು ವಿತರಿಸಲಾಗುವುದು ಎಂದು ಬಿಡಿಎ ಪ್ರಕಟಣೆ ಹೇಳಿದೆ.

20x30, 30x40, 40x60, 50x80 ಅಳತೆಯ ನಿವೇಶನಗಳನ್ನು ಬನಶಂಕರಿ 6ನೇ ಹಂತದಲ್ಲಿ ವಿತರಿಸಲಾಗುವುದು. 20-30 ಅಳತೆಯ 3200 ನಿವೇಶನಗಳನ್ನು ಮಾಡಲಾಗಿದ್ದು, ಇದನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಿಡಲಾಗಿದೆ.

30-40 ಅಡಿ ಅಳತೆಯ 3500 ನಿವೇಶನ, 40-60ರ 2250 ನಿವೇಶನ ಹಾಗೂ 50-80 ಅಡಿ ಅಳತೆಯ 1050 ನಿವೇಶನಗಳನ್ನು ಈ ವಿಸ್ತರಣೆಯಲ್ಲಿ ವಿಂಗಡಿಸಲಾಗಿದೆ. ಶೇಕಡಾ 50ರಷ್ಟು ನಿವೇಶನಗಳನ್ನು ವಿವಿಧ ಮೀಸಲಾತಿ ವ್ಯಾಪ್ತಿಗೆ ತರಲಾಗಿದೆ.

ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸರಕಾರಿ ನೌಕರರು, ಮಾಜಿ ಸೈನಿಕರು, ಕ್ರೀಡಾಪಟುಗಳು, ಸಾಹಿತ್ಯ-ವಿಜ್ಞಾನ ಕ್ಷೇತ್ರದ ಸಾಧಕರು, ಅಂಗವಿಕಲರಿಗೆ ಶೇಕಡಾವಾರು ಮೀಸಲು ಘೋಷಿಸಲಾಗಿದೆ. ಉಳಿದ 50ರಷ್ಟು ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಲಾಗುವುದು ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.

ಕಳೆದ ಕೆಲವು ವರ್ಷಗಳಿಂದ ಹೆಚ್ಚು ಕಮ್ಮಿ ನಿದ್ರಾವಸ್ತೆಯಲ್ಲಿದ್ದ ಬಿಡಿಎ ಕಳೆದ ವರ್ಷದಿಂದ ಮತ್ತೆ ಮೈಕೊಡವಿ ಎದ್ದು ಕುಳಿತಿದೆ. ಕಳೆದ 14 ವರ್ಷದ ಅವಧಿಯಲ್ಲಿ ಕೇವಲ 4 ಸಾವಿರ ನಿವೇಶನ ಮಾತ್ರ ಹಂಚಿದ್ದ ಬಿಡಿಎ ಕಳೆದ ವರ್ಷ 10 ಸಾವಿರ ನಿವೇಶನ ಹಂಚಿತ್ತು.

ಈ ವರ್ಷ20 ಸಾವಿರ ನಿವೇಶನ ಹಂಚಿಕೆ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ ಅಂಜನಾಪುರ ಬಡಾವಣೆಯನ್ನು ಅಭಿವೃದ್ಧಿ ಪಡಿಸಿ ಕಳೆದ ಜುಲೈ-ಆಗಸ್ಟ್‌ನಲ್ಲಿ 5 ಸಾವಿರ ನಿವೇಶನಗಳನ್ನು ವಿತರಿಸಿತ್ತು. ಈಗ ಬನಶಂಕರಿ ಆರನೇ ಹಂತದಲ್ಲಿ 10 ಸಾವಿರ ನಿವೇಶನ ಹಂಚುತ್ತಿದ್ದೆ. ಅರ್ಜಿ ಸಲ್ಲಿಸುವವರು ನೋಂದಣಿಗೆ ಮುನ್ನ ಕನಿಷ್ಠ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.

ಅಂದಹಾಗೆ ಬೆಂಗಳೂರಿನ ಬಹುತೇಕ ಬಡಾವಣೆಗಳ ಕೆನರಾಬ್ಯಾಂಕ್‌ ಮತ್ತು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗಳ ಶಾಖೆಗಳಲ್ಲಿ ಅರ್ಜಿ ಲಭ್ಯವಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ನವೆಂಬರ್‌ 19. ನಿಮಗೂ ಬಿಡಿಎ ಸೈಟ್‌ ಬೇಕೆ? ತಡವೇಕೆ ಅರ್ಜಿ ಹಾಕಿ..
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+