Get Updates
Get notified of breaking news, exclusive insights, and must-see stories!

ಶಾಂಘೖ, ಇಂಗ್ಲೆಂಡಲ್ಲಿ ಶಾಖೆ ತೆರೆಯಲಿದೆ ಪಂಜಾಬ್‌ ನ್ಯಾ. ಬ್ಯಾಂಕ್‌

ಬೆಂಗಳೂರು : ಭಾರತದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಇಂಗ್ಲೆಂಡ್‌, ಶಾಂಘೖ ಹಾಗೂ ವಾಂಕೋವರ್‌ಗಳಲ್ಲಿ ತನ್ನ ಸಾಗರೋತ್ತರ ಶಾಖೆಗಳನ್ನು ತೆರೆಯಲು ಉದ್ದೇಶಿಸಿದೆ. ಈ ವಿಷಯವನ್ನು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಸ್‌. ನಾರಾಯಣಸ್ವಾಮಿ ಶುಕ್ರವಾರ ಬೆಂಗಳೂರಿನಲ್ಲಿ ಪ್ರಕಟಿಸಿದರು.

ಸಾಗರೋತ್ತರ ಶಾಖೆಗಳಲ್ಲದೆ, ಸಿಗ್ನೇಚರ್‌ ಬ್ರಾಂಚಸ್‌ ಎಂದು ಕರೆಯಲಾಗುವ 100 ಪರ್ಸನಲೈಸ್ಡ್‌ ಶಾಖೆಗಳನ್ನು ಭಾರತದಲ್ಲಿ ತೆರೆಯುವ ಉದ್ದೇಶವೂ ಬ್ಯಾಂಕಿಗೆ ಇದೆ ಎಂದರು. 300 ಕೋಟಿ ರುಪಾಯಿ ವೆಚ್ಚದಲ್ಲಿ ತನ್ನ ಎಲ್ಲ ಶಾಖೆಗಳಲ್ಲಿ ಕಂಪ್ಯೂಟರೀಕರಣ ಮತ್ತು ಅಂತರ್ಜಾಲ ಸಂಪರ್ಕ ಜೋಡಣೆಯ ಕಾಮಗಾರಿ ಕೈಗೆತ್ತಿಕೊಂಡಿರುವುದಾಗಿ ಅವರು ವಿವರಿಸಿದರು.

ಬೆಂಗಳೂರಿನಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈಗಾಗಲೇ ಬ್ಯಾಂಕಿನ ಶೇ.75ರಷ್ಟು ಶಾಖೆಗಳು ಕಂಪ್ಯೂಟರೀಕರಣಗೊಂಡಿದ್ದು, ಮಾರ್ಚ್‌ ವೇಳೆಗೆ ಈ ಪ್ರಮಾಣ ಶೇ.80ನ್ನು ತಲುಪಲಿದೆ ಎಂದು ತಿಳಿಸಿದರು.

(ಪಿ.ಟಿ.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+