ಬೀದರ್‌ನಲ್ಲಿ ಭಾರೀ ಮಳೆ ; ಕಾರಂಜಾ ಜಲಾಶಯ ಭರ್ತಿ
ಬೀದರ್: ನಗರ ಹಾಗೂ ಸುತ್ತಮುತಲ ಪ್ರದೇಶಗಳಲ್ಲಿ ಶುಕ್ರವಾರದಿಂದ ಬೀಳುತ್ತಿರುವ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಕಾರಂಜಾ ಜಲಾಶಯ ಭರ್ತಿಯಾಗಿದ್ದು , ಕಾರಂಜಾ ನದಿ ನೀರು ಹೊಲಗದ್ದೆಗಳಿಗೆ ನುಗ್ಗಿದೆ.
ಬೀದರ್ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ಹರಿಯುವ ಕಾರಂಜಾ ನದಿ ಈಗ ತುಂಬಿ ಹರಿಯುತ್ತಿದೆ. ಬೇಸಗೆಯಲ್ಲಿ ಒಣಬತ್ತಿಯಂತಾಗಿದ್ದ ನದಿಯಲ್ಲಿ ಮತ್ತೆ ಕಾಣಿಸಿಕೊಂಡಿರುವ ನೀರಿನ ಸೆಳೆವು ಸ್ಥಳೀಯರಲ್ಲಿ ಸಂತೋಷ ಉಂಟು ಮಾಡಿದೆ. ನದಿ ತುಂಬಿ ಹರಿಯ್ತುತಿರುವುದರಿಂದ ಅಂತರ್ಜಲದ ಮಟ್ಟ ಸುಧಾರಿಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬಹುದೆನ್ನುವ ಆಶಾಭಾವನೆ ಮೂಡಿದೆ.
ಕಾರಂಜಾ ಜಲಾಶಯ ತುಂಬಿರುವುದರಿಂದ, ಜಲಾಶಯದಲ್ಲಿನ ಹೆಚ್ಚಿನ ನೀರನ್ನು ನಾಲ್ಕು ಗೇಟುಗಳ ಮೂಲಕ ಶನಿವಾರ ನದಿಗೆ ಬಿಡಲಾಯಿತು.
(ಇನ್ಫೋ ವಾರ್ತೆ)












Click it and Unblock the Notifications