ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಮೇಲೆ ಲ್ಯಾಡೆನ್‌ ಬೆಂಬಲಿಗರಿಂದ ಮತ್ತೆ ದಾಳಿ ಸಂಭವ- ಎಫ್‌ಬಿಐ

By Staff
|
Google Oneindia Kannada News

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ ಜೊತೆ ಸಂಬಂಧವುಳ್ಳ ಭಯೋತ್ಪಾದಕರು ಅಮೆರಿಕವನ್ನು ಗುರಿಯಾಗಿಸಿಕೊಂಡು ಇನ್ನಷ್ಟು ದಾಳಿಗಳನ್ನು ನಡೆಸುವ ಸಂಭವವಿದೆಯೆಂದು ಅಮೆರಿಕ ಇಂಟೆಲಿಜೆನ್ಸ್‌ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ದೇಶದೊಳಗೆ ಅಥವಾ ಆಚೆ ಲ್ಯಾಡೆನ್‌ ಬೆಂಬಲಿಗರು ಮತ್ತೊಂದು ಭಾರೀ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಎಫ್‌ಬಿಐ ಹಾಗೂ ಸಿಐಎ ಅಧಿಕಾರಿಗಳು ಅಮೆರಿಕನ್‌ ಕಾಂಗ್ರೆಸ್‌ ಸದಸ್ಯರನ್ನು ಎಚ್ಚರಿಸಿರುವು-ದಾ-ಗಿ ವಾಷಿಂಗ್ಟನ್‌ ಪೋಸ್ಟ್‌ ಶುಕ್ರವಾರ ಪ್ರಕಟಿಸಿದೆ.

ಅಧಿಕಾರಿಯಾಬ್ಬರು ಹೇಳುವಂತೆ, ಆಪ್ಘಾನಿಸ್ತಾನದ ಮೇಲೆ ಅಮೆರಿಕಾ ಮಿಲಿಟರಿ ಕಾರ್ಯಾಚರಣೆ ನಡೆಸಿದಲ್ಲಿ ಭಯೋತ್ಪಾದಕರು ಇನ್ನೊಂದು ದಾಳಿ ನಡೆಸುವ ಸಾಧ್ಯತೆ ಪ್ರತಿಶತ 100 ರಷ್ಟಿದೆ. ಶಕ್ತಿ ಸ್ಥಾವರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯೂ ಇಲ್ಲದಿಲ್ಲ ಎನ್ನುವುದು ಇನ್ನೊಬ್ಬ ಅಧಿಕಾರಿಯ ಗುಮಾನಿ.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X