ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಘನ್ನರಿಂದ ಅಮೆರಿಕನ್‌ ಸೈನಿಕರ ಬಂಧನ- ಟೀವಿ : ಇಲ್ಲ - ತಾಲಿಬಾನ್‌

By Staff
|
Google Oneindia Kannada News

ದೋಹಾ: ಅಮೆರಿಕಾದ ವಿಶೇಷ ಸೈನಿಕ ಪಡೆಯ ಮೂರು ಮಂದಿ ಸೈನಿಕರನ್ನು ಅಫ್ಘಾನ್‌ನ ರಕ್ಷಣಾ ದಳದವರು ಬಂಧಿಸಿರುವುದಾಗಿ ವರದಿಯಾಗಿದೆ.

ಅಫ್ಘಾನ್‌ನ ಇರಾನ್‌ ಗಡಿ ಸಮೀಪ ಇಬ್ಬರು ಅಫ್ಘಾನಿಯರನ್ನೂ ಬಂಧಿಸಲಾಗಿದೆ ಎಂದು ಕತಾರ್‌ನ ಆಲ್‌ ಜರಿkುೕರಾ ಟೀವಿ ವರದಿ ತಿಳಿಸಿದೆ. ಈ ಐದು ಮಂದಿಯನ್ನು ಎಷ್ಟು ಹೊತ್ತಿಗೆ ಬಂಧಿಸಲಾಯಿತು ಎಂಬ ಬಗ್ಗೆ ಟೀವಿ ವರದಿ ವಿವರಿಸಿಲ್ಲ. ಆದರೆ ಬಂಧಿತರ ಬಳಿ ಮಾರಕ ಆಯುಧಗಳು ಮತ್ತು ಒಸಾಮಾ ಬಿನ್‌ ಲ್ಯಾಡೆನ್‌ನ ಆಲ್‌ ಖೈದಾ ಸಂಘಟನೆಯಿರುವ ಪ್ರದೇಶದ ನಕಾಶೆಗಳು ದೊರಕಿವೆ.

ಅಮೆರಿಕ ಕಮಾಂಡೊಗಳ ಬಂಧನ ಇಲ್ಲ - ತಾಲಿಬಾನ್‌

ಅಮೆರಿಕಾದ ಮೂವರು ಕಮಾಂಡೊಗಳನ್ನು ಆಪ್ಘಾನಿಸ್ತಾನದ ರಕ್ಷಣಾದಳ ಬಂಧಿಸಿರುವ ವಿಷಯಗಳನ್ನು ತಾಲಿಬಾನ್‌ ಮಿಲಿಟರಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಬಖ್ತರ್‌ ಸುದ್ದಿಸಂಸ್ಥೆಗೆ ನೀಡಿರುವ ಹೇಳಿಕೆಯಲ್ಲಿ ಅಮೆರಿಕಾದ ಯಾವುದೇ ಅಧಿಕಾರಿಯನ್ನು ಬಂಧಿಸಿಲ್ಲ ಎಂದು ತಾಲಿಬಾನ್‌ನ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X