ಕೇಳ್ರಪ್ಪೋ ಕೇಳ್ರಿ,ಆಂಧ್ರದಲ್ಲಿನ ಬರಕ್ಕೆ ಆಲಮಟ್ಟಿಯೇ ಕಾರಣವಂತೆ
ಪ್ರಕಾಶಂ: ಕರ್ನಾಟಕ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ನಿರ್ಮಿಸಿರುವುದೇ ಆಂಧ್ರಪ್ರದೇಶದಲ್ಲಿ ತಲೆದೋರಿರುವ ಭೀಕರ ಬರಗಾಲಕ್ಕೆ ಕಾರಣ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕರ್ನಾಟಕದ ಮೇಲೆ ಗೂಬೆ ಕೂರಿಸಿದ್ದಾರೆ.
ಬರಕ್ಕೆ ತುತ್ತಾದ ಪ್ರಕಾಶಂ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಹಾರ ಕಾಮಗಾರಿಗಳ ಸಮೀಕ್ಷೆ ನಡೆಸಿದ ಚಂದ್ರಬಾಬು ನಾಯ್ಡು , ಕಾರ್ಯಕ್ರಮವೊಂದರಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯದಲ್ಲಿನ ಬರಕ್ಕೆ ಆಲಮಟ್ಟಿಯನ್ನು ದೂಷಿಸಿದರು. ಅಣೆಕಟ್ಟೆಯನ್ನು ಎತ್ತರಿಸುವ ಮೂಲಕ ರಾಜ್ಯದ ಜನತೆಗೆ ನ್ಯಾಯೋಚಿತವಾಗಿ ದೊರೆಯಬೇಕಿದ್ದ ನೀರನ್ನು ಕಬಳಿಸಿದೆ ಎಂದು ಅವರು ಆಪಾದಿಸಿದರು.
ಆಂಧ್ರದ ರೈತರು ಕೃಷ್ಣಾ ನೀರಿನ ಬಳಕೆಯಿಂದ ವಂಚಿತರಾಗಿದ್ದಾರೆ. ಕರ್ನಾಟಕ ಬಚಾವತ್ ತೀರ್ಪನ್ನು ಸ್ಪಷ್ಟವಾಗಿ ಉಲ್ಲಂಘಿದೆ ಎಂದು ಚಂದ್ರಬಾಬು ನಾಯ್ಡು ಟೀಕಿಸಿದರು. ಬರಕ್ಕ ಸಂಬಂಧಿಸಿದಂತೆ, ಈವರೆಗೂ ಕೇಂದ್ರ ಸರ್ಕಾರದ ನೆರವು ದೊರೆಯದಿರುವ ಬಗ್ಗೆ ಅವರು ವಿಷಾದಿಸಿದರು.
(ಇನ್ಫೋ ವಾರ್ತೆ)












Click it and Unblock the Notifications