ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲೂ ರ್ಯಾಟ್‌ ಫೀವರ್‌ : ಒಬ್ಬನ ಬಲಿ

By Staff
|
Google Oneindia Kannada News

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇಲಿ ಜ್ವರ (ರ್ಯಾಟ್‌ ಫೀವರ್‌) ದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇತರ 8 ಜನರಿಗೆ ಈ ರೋಗ ತಗುಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎ. ರಾಘವೇಂದ್ರರಾವ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಜಿಲ್ಲೆಯ ಕಾಪು, ಬೈಲೂರು, ಹಿರೇಬೆಟ್ಟು, ಬಡಗುಬೆಟ್ಟು, ಸಾಲಿಗ್ರಾಮ, ಬ್ರಹ್ಮಾವರ, ಉದ್ಯಾವರ, ಪರ್ಕಳ ಮೊದಲಾದ ಕಡೆ ಇಲಿ ಜ್ವರ ಕಾಣಿಸಿಕೊಂಡಿರುವ ಬಗ್ಗೆ ವರದಿಗಳು ಬಂದಿವೆ. ಸಕಾಲದಲ್ಲಿ ರೋಗಿಗಳ ರಕ್ತ ಪರೀಕ್ಷೆ ಮಾಡಿಸುವುದರಿಂದ ರೋಗ ನಿಯಂತ್ರಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಲಿಯ ಮೂತ್ರ ಅಥವಾ ಸಾಕು ಪ್ರಾಣಿಗಳ ಸಂಪರ್ಕದಿಂದ ಈ ಕಾಯಿಲೆ ಹರಡುತ್ತದೆ. ಇಲಿಗಳನ್ನು ಕೊಂದು, ಜನವಸತಿ ಇಲ್ಲದ ಜಾಗದಲ್ಲಿ ಎಸೆಯುವುದರಿಂದ, ಇಲ್ಲ ಹೂಳುವುದರಿಂದ ಈ ರೋಗ ಹಬ್ಬುವುದನ್ನು ತಡೆಗಟ್ಟಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X