For Daily Alerts
ಗುಲ್ಬರ್ಗಾದ ಮದನ ಹಿಪ್ಪಾರಗ ಆಶ್ರಮದ ಕೃಷ್ಣ ಸ್ವಾಮಿ ಆತ್ಮಹತ್ಯೆ
ಗುಲ್ಬರ್ಗಾ : ಜಿಲ್ಲೆಯ ಆಲಂಡ್ ತಾಲ್ಲೂಕಿನ ಮದಗುಣಕಿ ಗ್ರಾಮದ ಕೃಷ್ಣ ಸ್ವಾಮಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಕೃಷ್ಣ ಸ್ವಾಮಿ ಮೂರು ವರ್ಷದ ಹಿಂದೆ ಮದನ ಹಿಪ್ಪಾರಗ ಗ್ರಾಮಕ್ಕೆ ವಲಸೆ ಬಂದು, ಆಶ್ರಮವೊಂದನ್ನು ಕಟ್ಟಿದ್ದರು. ಈ ಸ್ವಾಮೀಜಿಗೆ ಮೊರೆ ಹೋಗುತ್ತಿದ್ದ ಭಕ್ತರ ಸಂಖ್ಯೆ ಕಡಿಮೆಯೇನೂ ಇರಲಿಲ್ಲ. ಸೋಮವಾರ ಇದ್ದಕ್ಕಿದ್ದಂತೆ ಮದಗುಣಕಿ ಗ್ರಾಮಕ್ಕೆ ತೆರಳಿದ ಸ್ವಾಮೀಜಿ, ಅಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ವಾಮೀಜಿಯ ಕಳೇಬರದ ಪಕ್ಕದಲ್ಲಿ ದೊರೆತ ಚೀಟಿಯಲ್ಲಿ, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
(ಇನ್ಫೋ ವಾರ್ತೆ)