Get Updates
Get notified of breaking news, exclusive insights, and must-see stories!

ಇಂಗ್ಲಿಷ್‌ ಮಾಧ್ಯಮದಲ್ಲಿ ಭೋದಿಸುತ್ತಿದ್ದ 1200 ಶಾಲೆಗಳಿಗೆ ನೋಟಿಸ್‌

ಬೆಂಗಳೂರು : ಒಂದರಿಂದ ನಾಲ್ಕನೇ ತರಗತಿವರೆಗೆ ಕನ್ನಡ ಮಾಧ್ಯಮ ಅಥವಾ ಮಾತೃಭಾಷೆಯಲ್ಲಿ ಮಾತ್ರ ಶಿಕ್ಷಣ ನೀಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ನಡೆಸುತ್ತಿರುವ 1,200ಕ್ಕೂ ಹೆಚ್ಚು ಅನುದಾನ ರಹಿತ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನೋಟಿಸ್‌ ಜಾರಿಮಾಡಿದೆ.

ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅನುದಾನ ರಹಿತ ಪ್ರಾಥಮಿಕ ಶಿಕ್ಷಣ ಶಾಲೆಗಳಲ್ಲಿ ಅಂದರೆ ಒಂದನೇ ತರಗತಿಯಿಂದ 4ನೇ ತರಗತಿವರೆಗೆ ಕಡ್ಡಾಯವಾಗಿ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.

1995-96ರ ಸಾಲಿನಲ್ಲಿ ರಾಜ್ಯ ಸರಕಾರ 1,200 ಅನುದಾನ ರಹಿತ ಶಾಲೆಗಳ ಆರಂಭಕ್ಕೆ ಅನುಮತಿಸಿತ್ತು. ಆಗ ಬೆಂಗಳೂರಿನಲ್ಲಿಯೇ ಸುಮಾರು 600 ಶಾಲೆಗಳು ತಲೆ ಎತ್ತಿದವು. ಈ ಶಾಲೆಗಳು ತಾವು ಬರೆದು ಕೊಟ್ಟ ಮುಚ್ಚಳಿಕೆಯನ್ನು

ಧಿಕ್ಕರಿಸಿ, ಆಂಗ್ಲ ಭಾಷೆಯಲ್ಲೇ ಭೋದಿಸುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ವಿಭಾಗದ ನಿರ್ದೇಶಕ ಜಿ.ಎಲ್‌. ಹೆಗಡೆ ತಿಳಿಸಿದ್ದಾರೆ.

ಈ ಸಂಬಂಧ ಅವರು ಹೊರಡಿಸಿರುವ ಆದೇಶದಲ್ಲಿ ಈ ಶಾಲೆಗಳು 1ರಿಂದ 4ನೇ ತರಗತಿವರೆಗೆ ಕನ್ನಡದಲ್ಲಿ ಶಿಕ್ಷಣ ಭೋದಿಸುವ ಬಗ್ಗೆ ಶಾಲೆಯ ನಾಮಫಲಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದೂ ಸೂಚಿಸಿದ್ದಾರೆ. ಮಗು ಶಾಲೆಯನ್ನು ಬಿಟ್ಟಾಗ ಟ್ರಾನ್ಸ್‌ವರ್‌ ಸರ್ಟಿಫಿಕೇಟ್‌ನಲ್ಲಿ ಕೂಡ ಕನ್ನಡ ಮಾಧ್ಯಮ ಎಂದೇ ನಮೂದಿಸತಕ್ಕದ್ದು ಎಂದು ಅವರು ಹೇಳಿದ್ದಾರೆ.

ಪ್ರವೇಶ ಅರ್ಜಿಗಳಲ್ಲಿ ಕೂಡ ಕನ್ನಡ ಮಾಧ್ಯಮ ಅಥವಾ ಮಾತೃಭಾಷಾ ಮಾಧ್ಯಮ ಎಂದು ಮುದ್ರಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಕೆಲವು ಶಾಲೆಗಳು ಮುಚ್ಚಳಿಕೆಗೆ ವಿರುದ್ಧವಾಗಿ ಇಂಗ್ಲಿಷ್‌ ಮೀಡಿಯಂ ಶಾಲೆ ನಡೆಸುತ್ತಿರುವ ವಿಷಯವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಬಹಿರಂಗಗೊಳಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+