Get Updates
Get notified of breaking news, exclusive insights, and must-see stories!

ನಂಜನಗೂಡಿನ ಸುಗಂಧ ದ್ರವ್ಯತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ

ನಂಜನಗೂಡು : ಇಲ್ಲಿನ ಕೈಗಾರಿಕಾ ಬಡಾವಣೆಯ ಸುಗಂಧ ದ್ರವ್ಯ ತಯಾರಿಕೆಯ ‘ಸೂಪರ್‌ಫೈನ್‌ ಆರೋಮ್ಯಾಟಿಕ್‌ ಪ್ರೆೃವೇಟ್‌ ಲಿ.ಕಾರ್ಖಾನೆ’ಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿರುವ ಸ್ಫೋಟದಲ್ಲಿ ಮೂವರು ಗಾಯಗೊಂಡಿದ್ದು , 30 ಲಕ್ಷ ರುಪಾಯಿ ಬೆಲೆ ಬೆಳುವ ಆಸ್ತಿ ಬೆಂಕಿಗೆ ಆಹುತಿಯಾಗಿದೆ.

ಕಾರ್ಖಾನೆಯ ಹಿರಿಯ ವ್ಯವಸ್ಥಾಪಕ ಜಯಂತ್‌, ಇಂಜಿನಿಯರ್‌ ಅಂಬುಗೇಶ್‌ ಹಾಗೂ ಆಪರೇಟರ್‌ ರಂಗಸ್ವಾಮಿ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಸ್ಫೋಟದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ನೌಕರರು ಇಲ್ಲದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ . ರಾಸಾಯನಿಕ ಮಿಶ್ರಿತ ಡಬ್ಬದಲ್ಲಿ ಹೊಗೆಯಾಡುತ್ತಿದ್ದುದನ್ನು ಗಮನಿಸಿದ ರಂಗಸ್ವಾಮಿ, ಶಾಖವನ್ನು ಶಮನಗೊಳಿಸುವ ಪರಿಕರಗಳನ್ನು ತರಲು ಘಟಕದಿಂದ ಹೊರಹೋಗಿ ಹಿಂತಿರುಗುವಷ್ಟರಲ್ಲಿ ಸ್ಫೋಟ ಸಂಭವಿಸಿದೆ.

ಘಟನೆಯ ಭೀಕರ ಶಬ್ದ ಪಟ್ಟಣದ ಬಹುಭಾಗದವರೆಗೆ ಕೇಳಿಸಿದ್ದು , ಇದು ಭೂಕಂಪವಿರಬಹುದೆಂದು ನಾಗರಿಕರು ತಲ್ಲಣಗೊಂಡಿದ್ದರು. ಸುಗಂಧದ್ರವ್ಯ ತಯಾರಿಕೆಯಲ್ಲಿ ಬಳಸುವ ಪರಾಸಿಡಿಕ್‌ ಆ್ಯಸಿಡ್‌ ಹಾಗೂ ಹೈಡ್ರೋಜನ್‌ ಪರಾಕ್ಸೈಡ್‌ ಮಿಶ್ರಣದ ಪ್ಲಾಸ್ಟಿಕ್‌ ಡಬ್ಬ ಸಿಡಿದು ಈ ಸ್ಫೋಟ ಸಂಭವಿಸಿದೆ ಎಂದು ಕಾರ್ಖಾನೆಯ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+