Get Updates
Get notified of breaking news, exclusive insights, and must-see stories!

ದೂದ್‌ ಗಂಗಾ ನೀರಾವರಿಯೋಜನೆ :ಮಹಾರಾಷ್ಟ್ರದೊಂದಿಗೆ ಒಪ್ಪಂದ

ಮುಂಬಯಿ : ದೂದ್‌ಗಂಗಾ ಜಂಟಿ ನೀರಾವರಿ ಯೋಜನೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಒಪ್ಪಂದ ಏರ್ಪಟ್ಟಿದೆ. ಶನಿವಾರ ಮಧ್ಯಾಹ್ನ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್‌ ದೇಶ್‌ಮುಖ್‌ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಜಂಟಿ ನೀರಾವರಿ ಯೋಜನೆ ಒಪ್ಪಂದದಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 15167 ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಒಪ್ಪಂದದ ರೀತ್ಯ ಕರ್ನಾಟಕವು ದೂದ್‌ಗಂಗಾದಿಂದ 4 ಟಿ.ಎಂ.ಸಿ. ನೀರು ಪಡೆಯಬಹುದಾಗಿದೆ.

ಬಹುದಿನಗಳಿಂದ ಇತ್ಯರ್ಥವಾಗದೇ ಉಳಿದಿದ್ದ ದೂದ್‌ಗಂಗಾ ನದಿಯ ಕಾಲಂಬವಾಡಿ ಯೋಜನೆಯ ನೀರನ್ನು ಬಳಸಿಕೊಳ್ಳುವ ಸಲುವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಶನಿವಾರ ಮುಂಬಯಿಯಲ್ಲಿ ನಡೆಸಿದ ಮಹತ್ವದ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಕಾಳಂಬವಾಡಿ ಯೋಜನೆ ಪೂರ್ಣವಾಗಿ 20 ವರ್ಷಗಳೇ ಆಗಿದ್ದರೂ ಕೂಡ ರಾಜ್ಯದ ನೀರಿನ ಬಳಕೆಯ ಬಗ್ಗೆ ಗಮನ ಹರಿಸಿರಲಿಲ್ಲ. ಈ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಟ್ಟ ಮುಖ್ಯಮಂತ್ರಿ ಕೃಷ್ಣ ಕೊನೆಗೂ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+