ಗಣೇಶೋತ್ಸವದ ಅಂಗವಾಗಿ ಆ. 26ರಂದು ಮಕ್ಕಳಿಗೆ ದೇವರನಾಮ ಸ್ಪರ್ಧೆ
ಬೆಂಗಳೂರು : ಬುಲ್ ಟೆಂಪಲ್ ರಸ್ತೆಯ ದೊಡ್ಡ ಗಣಪನ ದೇಗುಲ ಆವರಣದಲ್ಲಿರುವ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯು 33ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಮಕ್ಕಳಿಗಾಗಿ ದೇವರನಾಮ ಸ್ಪರ್ಧೆಯನ್ನು ಏರ್ಪಡಿಸಿದೆ.
12 ವರ್ಷದೊಳಗಿನ ಮಕ್ಕಳಿಗಾಗಿ ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ ಎಂದು ಸೇವಾ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ತಿಳಿಸಿದ್ದಾರೆ. ಗಣೇಶೋತ್ಸವದ ಅಂಗವಾಗಿ ದಿನಾಂಕ 22-8-01ರಿಂದ 30-8-01ರವರೆಗೆ ಬುಲ್‌ಟೆಂಪಲ್ ರಸ್ತೆಯ ಶ್ರೀಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ.
ಪ್ರತಿವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸುತ್ತಾ ಬಂದಿದ್ದು, ಈ ಬಾರಿ ಸಮಿತಿಯ ಉಪಾಧ್ಯಕ್ಷರಾದ 80ರ ಹರೆಯದ ಬಿ. ಶಂಕರ್‌ರಾವ್ ಅವರನ್ನು ಸತ್ಕರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಉತ್ಸವದ ಅಂಗವಾಗಿ ವಿಷ್ಣು ಸಹಸ್ರನಾಮ ಹೋಮ, ಸತ್ಯನಾರಾಯಣ ಪೂಜೆ, ಸಹಸ್ರ ಮೋದಕ ಗಣಹೋಮವನ್ನು ಸಹ ಏರ್ಪಡಿಸಲಾಗಿದ್ದು, ಶ್ರೀಮತ್ಪರಮಹಂಸ ಶ್ರೀರಂಗಪ್ರಿಯ ಮಹಾ ದೇಶಿಕಾಚಾರ್ಯ ಶ್ರೀಪಾದರು ಆಶೀರ್ವಚನ ನೀಡುವರು ಎಂದು ಅವರು ತಿಳಿಸಿದ್ದಾರೆ. ದೇವರನಾಮ ಸ್ಪರ್ಧೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬುಲ್ ಟೆಂಪಲ್ ರಸ್ತೆಯ ದೊಡ್ಡ ಗಣಪನ ಗುಡಿಯಲ್ಲಿ ಪಡೆಯಬಹುದು.
22ರಿಂದ ಪ್ರತಿದಿನ ಸಂಜೆ 6-30ಕ್ಕೆ ನಡೆವ ಕಾರ್ಯಕ್ರಮಗಳ ಪಟ್ಟಿ ಹೀಗಿದೆ:
ಆಗಸ್ಟ್ 22 - ಗಣೇಶನ ಪ್ರತಿಷ್ಠಾಪನೆ, ಸ್ಮರಣ ಸಂಚಿಕೆ ಬಿಡುಗಡೆ, ವಿದ್ವಾನ್ ಗುರುರಾಜ ದಾಸರಿಂದ ಹರಿಕಥೆ
ಆಗಸ್ಟ್ 23 - ವಿದ್ವಾನ್ ಮಾರುತಿ ಪ್ರಸಾದ್ ಹಾಗೂ ವೃಂದದವರಿಂದ ಹಾಡುಗಾರಿಕೆ
ಆಗಸ್ಟ್ 24 - ವಿದ್ವಾನ್ ಕೆ.ಎಸ್. ಗೋಪಾಲಕೃಷ್ಣನ್ ಅವರಿಂದ ಕೊಳಲು ವಾದನ
ಆಗಸ್ಟ್ 25 - ಎಂ.ಎಸ್. ಲಾವಣ್ಯ - ಸುಬ್ಬುಲಕ್ಷ್ಮೀ ಅವರಿಂದ ದ್ವಂದ್ವ ಸ್ಯಾಕ್ಸೋಫೋನ್
ಆಗಸ್ಟ್ 26- ಚಿರಂಜೀವಿ ಬಿ. ಗೋವಿಂದ್ ಮತ್ತು ತಂಡದವರಿಂದ ಭಕ್ತಿಗೀತೆಗಳು
ಆಗಸ್ಟ್ 27- ಆರ್. ವಿಜಯಲಕ್ಷ್ಮೀ - ಆರ್. ಚಿತ್ರಾ ಹಾಡುಗಾರಿಕೆ
ಆಗಸ್ಟ್ 28- ವಿದುಷಿ ಚಂದನ್ ಬಾಲ ಮತ್ತು ತಂಡದವರಿಂದ ಹಾಡುಗಾರಿಕೆ
ಆಗಸ್ಟ್ 29 - ವಿದ್ವಾನ್ ಡಾ. ವಾಗೀಶ್ ಹಾಗೂ ವೃಂದದವರಿಂದ ಹಾಡುಗಾರಿಕೆ
ಆಗಸ್ಟ್ 30 - ಶಂಕರ ಶ್ಯಾನುಭಾಗ್ ಮತ್ತು ತಂಡದವರಿಂದ ಸುಗಮ ಸಂಗೀತ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications