Get Updates
Get notified of breaking news, exclusive insights, and must-see stories!

ಲಾರಾಗಿಂತ ಸಚಿನ್‌ ಹೇಗೆ ಮೇಲು ?ಬ್ರಾಡ್ಮನ್‌ ಹೇಳುತ್ತಾರೆ...

ಗ್ರ್ಯಾಮ್‌ ಪೊಲಾಕ್‌, ಜಾರ್ಜ್‌ ಹೆಡ್ಲಿ, ಹ್ಯಾಮಂಡ್‌, ಬ್ರಿಯಾನ್‌ ಲಾರಾ, ಮಾರ್ಕ್‌ ವಾ, ಸ್ಟೀವ್‌ ವಾ, ವಿವ್‌ ರಿಚರ್ಡ್ಸ್‌, ಎವರ್ಟನ್‌ ವೀಕ್ಸ್‌, ಸ್ಟಾ ್ಯನ್‌ ಮ್ಯಾಕೇಬ್‌, ಚಾರ್ಲಿ ಮೆಕಾರ್ಟ್ನಿ, ಗ್ರೆಗ್‌ ಚಾಪೆಲ್‌, ನೀಲ್‌ ಹಾರ್ವೆ... ಇವರೆಲ್ಲರಿಗಿಂತ ಸಚಿನ್‌ ತೆಂಡೂಲ್ಕರ್‌ ಮೇಲು ! ಹೌದು, ಸರ್‌ ಡಾನ್‌ ಬ್ರಾಡ್ಮನ್‌ ಕನಸಿನ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಏಷ್ಯಾದ ಹಾಗೂ ಪ್ರಸ್ತುತ ಆಡುತ್ತಿರುವ ಏಕೈಕ ಆಟಗಾರ ಸಚಿನ್‌.

ಕನಸಿನ ತಂಡ ಕಟ್ಟಲು ಬ್ರಾಡ್‌ಮನ್‌ ಗುರುತು ಹಾಕಿಕೊಂಡದ್ದು 69 ಕ್ರಿಕೆಟಿಗರನ್ನ. ಇದರಲ್ಲಿದ್ದುದು ಭಾರತದ ಮೂವರು : ಸಚಿನ್‌, ಕಪಿಲ್‌ ದೇವ್‌ ಹಾಗೂ ಸುನಿಲ್‌ ಗವಾಸ್ಕರ್‌. 12 ಮಂದಿಯ ಅಂತಿಮ ಪಟ್ಟಿ ತಲುಪಿದ್ದು ಸಚಿನ್‌ ಮಾತ್ರ. ಈ ಹೊತ್ತು ವಿಶ್ವಾದ್ಯಂತ ಚರ್ಚೆಯಾಗುತ್ತಿರುವುದು ಇದೇ ವಿಷಯ.

ಸಚಿನ್‌ಗೇ ಯಾಕೀ ಗೌರವ ಯಾಕೆ ?

ಹೆಂಡತಿಯಾಡನೆ ಕೂತು ಮನೆಯಲ್ಲಿ ಟೀವಿ ನೋಡುತ್ತಿದ್ದ ಬ್ರಾಡ್ಮನ್‌ ಸುಮಾರು ಹೊತ್ತು ಕಣ್ಣು ಮಿಟುಕಿಸಲೇ ಇಲ್ಲ. ಹರೆಯದ ಹುಡುಗ ಬ್ಯಾಟ್‌ ಬೀಸುತ್ತಿದ್ದಾನೆ; ಥೇಟ್‌ ತಮ್ಮದೇ ಶೈಲಿ. ಆತನೇ ಸಚಿನ್‌. ತಾನು ಹೊಡೆದ ಚೆಂಡಿನ ಗುರಿ ಬ್ರಾಡ್ಮನ್‌ ಮನಸ್ಸಾಗಿತ್ತು ಅನ್ನೋದು ಖುದ್ದು ತೆಂಡೂಲ್ಕರ್‌ಗೇ ಗೊತ್ತಿರಲಿಲ್ಲ. ಮೆಚ್ಚಾದ ಹುಡುಗನಿಗೆ ತಮ್ಮ 90ನೇ ಹುಟ್ಟುಹಬ್ಬ ಸಮಾರಂಭಕ್ಕೆ ಬ್ರಾಡ್ಮನ್‌ ಬುಲಾವು ಕೊಟ್ಟರು. ಆ ಕೂಟಕ್ಕೆ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಕೂಡ ಬಂದಿದ್ದರು. ಆದರೂ, ಬ್ರಾಡ್ಮನ್‌ ಕಣ್ಣು ತುಂಬಿಸಿಕೊಂಡದ್ದು ಸಚಿನ್ನನ್ನೇ.

ರೋಲ್ಯಾಂಡ್‌ ಪೆರ್ರಿ ಬರೆದಿರುವ ‘ಬ್ರಾಡ್ಮನ್ಸ್‌ ಬೆಸ್ಟ್‌’ ಕೃತಿಯಲ್ಲಿ ಬ್ರಾಡ್ಮನ್‌ ಮಾತುಗಳು ಅನಾವರಣಗೊಂಡಿರುವುದು ಹೀಗೆ- ‘ಸಚಿನ್‌ ಮತ್ತು ಲಾರಾ ನನ್ನ ದೃಷ್ಟಿಯಲ್ಲಿ ಇತರೆ ಕ್ರಿಕೆಟರಿಗಿಂತ ಒಂದು ಮೆಟ್ಟಿಲು ಮೇಲೆ ನಿಂತಿದ್ದಾರೆ. 90ರ ದಶಕದಲ್ಲಿ ಈ ಇಬ್ಬರಲ್ಲಿ ಕೆಲವು ಸಾಮ್ಯತೆ ಹಾಗೂ ಬಹುತೇಕ ವ್ಯತ್ಯಾಸ ಗಮನಿಸಿದೆ. ಇಬ್ಬರೂ ಆಟಗಾರರಲ್ಲಿ ಆಕ್ರಮಣಕಾರಿ ನೀತಿಯಿದೆ. ಆದರೆ ಲಾರಾ ಸದಾ ಇದಕ್ಕೆ ಬದ್ಧ. ಡಿಫೆನ್ಸಿವ್‌ ಸ್ಟ್ರೋಕ್‌ನಲ್ಲಿ ಸಚಿನ್‌ದು ಮೈಲುಗೈ. ಆಟದ ಮೊನಚನ್ನು ದೀರ್ಘ ಕಾಲ ಉಳಿಸಿಕೊಂಡು, ಪ್ರತಿಭೆಯನ್ನು ಸದಾ ಸಾಣೆಗೆ ಒಡ್ಡುತ್ತಾ ಬಂದ ಸಚಿನ್‌, ಲಾರಾಗಿಂತ ಎತ್ತರ ಕಾಣುತ್ತಾರೆ, ಹತ್ತಿರಾಗುತ್ತಾರೆ’.

ವಾ ಸಹೋದರರ ಪೈಕಿ ಮಾರ್ಕ್‌ ಕಲಾತ್ಮಕ ಆಟಗಾರ. ಸ್ಟೀವ್‌, ಒತ್ತಡದ ನೊಗವನ್ನು ಹೊತ್ತು ಎಷ್ಟೋ ಬಾರಿ ದಡ ಮುಟ್ಟಿದ ಧೀಮಂತ. ಆದರೂ ಬ್ರಾಡ್ಮನ್‌ ಮನಸ್ಸಲ್ಲಿ ಸಚಿನ್‌ ಎಂಬ ಬೆಳಕಿನ ಮುಂದೆ ಇವರೆಲ್ಲಾ ಕಾಣದೆ ಹೋದರು. ಒಟ್ಟಿನಲ್ಲಿ ಸಚಿನ್‌ ಸಾಧನೆಯ ಕಿರೀಟದಲ್ಲಿ ಇನ್ನೊಂದು ಗರಿ ಮೂಡಿದೆ. ಬ್ರಾಡ್ಮನ್‌ ಕನಸಿನ, ಸರ್ವಕಾಲಿಕ ವಿಶ್ವ ಇಲೆವೆನ್‌ ತಂಡದಲ್ಲಿರುವ ಈ ಹೊತ್ತೂ ಆಡುತ್ತಿರುವ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಅಗ್ಗಳಿಕೆ ಅವರದು.

ಬ್ರಾಡ್ಮನ್‌ ಕನಸಿನ ಕ್ರಿಕೆಟ್‌ ತಂಡ ಹೀಗಿದೆ- ಬ್ಯಾರಿ ರಿಚರ್ಡ್ಸ್‌(ದಕ್ಷಿಣ ಆಫ್ರಿಕ), ಎ.ಮೊರಿಸ್‌ (ಆಸ್ಟ್ರೇಲಿಯಾ), ಡಾನ್‌ ಬ್ರಾಡ್ಮನ್‌(ಆಸ್ಟ್ರೇಲಿಯಾ), ಸಚಿನ್‌ ತೆಂಡೂಲ್ಕರ್‌ (ಭಾರತ), ಗ್ಯಾರಿ ಸೋಬರ್ಸ್‌ (ವೆಸ್ಟಿಂಡೀಸ್‌), ಡಾನ್‌ ಟಾಲನ್‌(ಆಸ್ಟ್ರೇಲಿಯಾ), ರೇ ಲಿಂಡ್‌ವಾಲ್‌ (ಆಸ್ಟ್ರೇಲಿಯಾ), ಡೆನಿಸ್‌ ಲಿಲಿ (ಆಸ್ಟ್ರೇಲಿಯಾ), ಅಲೆಕ್‌ ಬೆಡ್‌ಸರ್‌, ಬಿಲ್‌ ಓ ರೆಲಿ (ಆಸ್ಟ್ರೇಲಿಯಾ), ಸಿ.ಗ್ರಿಮ್ಮೆಟ್‌(ಆಸ್ಟ್ರೇಲಿಯಾ), ವಾಲ್ಲಿ ಹಮ್ಮೊಂಡ್‌ (ಇಂಗ್ಲೆಂಡ್‌- 12ನೇ ಆಟಗಾರ)

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+