ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಐಡಿಸಿ ಟಾಪ್‌-15’ ವಿಶ್ವ ತರಬೇತಿ ಕೇಂದ್ರಗಳ ಪಟ್ಟಿಯಲ್ಲಿ ‘ಎನ್‌ಐಐಟಿ’

By Staff
|
Google Oneindia Kannada News

ನವದೆಹಲಿ : ಭಾರತದ ಕಂಪ್ಯೂಟರ್‌ ಶೈಕ್ಷಣಿಕ ವಲಯದ ದಿಗ್ಗಜ ‘ಎನ್‌ಐಐಟಿ’ 2000 ಇಸವಿಯ ಅತ್ಯುತ್ತಮ ತರಬೇತಿ ನೀಡುವ ವಿಶ್ವದ 15 ಸಂಸ್ಥೆಗಳಲ್ಲಿ ಒಂದೆನ್ನುವ ಅಗ್ಗಳಿಕೆಗೆ ಪಾತ್ರವಾಗಿದೆ.

ಅಮೇರಿಕಾದ ಸಂಸ್ಥೆಯಾಂದು ನಡೆಸಿರುವ ಸಮೀಕ್ಷೆಯಲ್ಲಿ ಈ ಸಂಗತಿ ಹೊರಬಿದ್ದಿದ್ದು ಜಾಗತಿಕ ಹುರಿಯಾಳುಗಳಾದ ಅಮೇರಿಕಾದ ‘ಐಬಿಎಂ ಗ್ಲೋಬಲ್‌ ಸರ್ವೀಸಸ್‌’ ಹಾಗೂ ಯುರೋಪ್‌ನ ‘ಸ್ಯಾಪ್‌’ (ಎಸ್‌ಎಪಿ) ಗಳೊಂದಿಗೆ ‘ಎನ್‌ಐಐಟಿ’ ಗುರ್ತಿಸಿಕೊಂಡಿರುವುದು ಇನ್ನೊಂದು ವಿಶೇಷ.

ಏಷ್ಯಾದ ಮೊದಲ ಸಂಸ್ಥೆ !
ಜಾಗತಿಕ ಮಾರುಕಟ್ಟೆಯ ಅಧ್ಯಯನ ಹಾಗೂ ಸಲಹೆ ನೀಡುವಲ್ಲಿ ಎತ್ತಿದಗೈ ಎನಿಸಿರುವ ಅಮೇರಿಕಾದ ‘ಇಂಟರ್‌ನ್ಯಾಶನಲ್‌ ಡೇಟಾ ಕಾರ್ಪೊರೇಷನ್‌’ (ಐಡಿಸಿ) ಈ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ‘ಎನ್‌ಐಐಟಿ’ ಸೇರ್ಪಡೆಯಾಂದಿಗೆ ಇದೇ ಮೊದಲ ಬಾರಿಗೆ ‘ಐಡಿಸಿ ಟಾಪ್‌-15’ ಪಟ್ಟಿಯಲ್ಲಿ ಏಷ್ಯಾದ ಶೈಕ್ಷಣಿಕ ಹಾಗೂ ತರಬೇತಿ ಸಂಸ್ಥೆಯಾಂದು ಸ್ಥಾನ ಪಡೆದಂತಾಗಿದೆ. ಯುರೋಪ್‌ ಹಾಗೂ ಅಮೇರಿಕಾಗಳನ್ನು ಹೊರತುಪಡಿಸಿದಂತೆ ಪಟ್ಟಿಯಲ್ಲಿರುವ ಇತರ ಪ್ರದೇಶಗಳ ಏಕೈಕ ಸಂಸ್ಥೆ ಎನ್ನುವ ಅಗ್ಗಳಿಕೆಯೂ ‘ಎನ್‌ಐಐಟಿ’ ಗೆ ದಕ್ಕಿದೆ.

ಐಡಿಸಿ ಕಂಡುಕೊಂಡಿರುವಂತೆ ವಾಣಿಜ್ಯ ದೃಷ್ಟಿಯಿಂದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 5 ಸಂಸ್ಥೆಗಳಲ್ಲಿ ‘ಎನ್‌ಐಐಟಿ’ ಸೇರಿದೆ. ಪಟ್ಟಿಯಲ್ಲಿ ಕಾಣಿಸಿರುವ ಹೊಸ ಮುಖಗಳಲ್ಲಿ ‘ಸೀಮನ್ಸ್‌ ಬಿಜಿನೆಸ್‌ ಸರ್ವೀಸಸ್‌’ ಹಾಗೂ ‘ದಿ ಗೇಟ್‌ವೇ ಲರ್ನಿಂಗ್‌’ ಕೂಡ ಸೇರಿವೆ.

ಇದೊಂದು ಮೈಲುಗಲ್ಲು - ಎನ್‌ಐಟಿಟಿ ಅಧ್ಯಕ್ಷರ ಸಂತಸ
ನಮ್ಮ ಪ್ರಯತ್ನ ಹಾಗೂ ಜನತೆಯನ್ನು ತಲುಪುವ ಗುರಿಯಲ್ಲಿನ ಯಶಸ್ಸನ್ನು ಜಗತ್ತು ಗುರ್ತಿಸಿದೆ ಎಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ಮನ್ನಣೆಯ ಬಗೆಗೆ ‘ಎನ್‌ಐಐಟಿ’ ಅಧ್ಯಕ್ಷ ರಾಜೇಂದ್ರ ಎಸ್‌. ಪವಾರ್‌ ಪ್ರತಿಕ್ರಿಯಿಸಿದ್ದಾರೆ. ಇದೊಂದು ಮೈಲುಗಲ್ಲು , ನಂಬರ್‌ 1 ಆಗುವತ್ತ ಪ್ರೋತ್ಸಾಹ ನೀಡುವ ವಿಷಯ ಎಂದು ಪವಾರ್‌ ಸಂತೋಷ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಾವು ರೂಪಿಸಿದ ಪ್ರತಿಭೆಗಳನ್ನು ಜಾಗತಿಕ ಕಂಪ್ಯೂಟರ್‌ ಕ್ಷೇತ್ರವೂ ಒಪ್ಪಿಕೊಂಡಿದೆ ಎಂದೂ ಪವಾರ್‌ ಹೇಳಿದ್ದಾರೆ. ಪ್ರಸ್ತುತ 26 ದೇಶಗಳಲ್ಲಿ ಕ್ರಿಯಾಶೀಲವಾಗಿರುವ ‘ಎನ್‌ಐಐಟಿ’ 2200 ಶೈಕ್ಷಣಿಕ ಕೇಂದ್ರಗಳನ್ನು ಹೊಂದಿದೆ. ಪ್ರಸಕ್ತ ವರ್ಷವೇ ಮೈಕ್ರೋಸಾಫ್ಟ್‌ನಿಂದ ‘ಅತ್ಯುತ್ತಮ ತರಬೇತಿ’ ಪ್ರಶಸ್ತಿಯನ್ನೂ ‘ಎನ್‌ಐಐಟಿ’ ಪಡೆದುದನ್ನು ಇಲ್ಲಿ ಸ್ಮರಿಸಬಹುದು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X