Get Updates
Get notified of breaking news, exclusive insights, and must-see stories!

ಭಾರತೀಯ ತೈಲ ನಿಗಮದಿಂದ ದೇಶಾದ್ಯಂತ ಎಲ್‌ಪಿಜಿ ವಿತರಣಾ ಕೇಂದ್ರ

ಬೆಂಗಳೂರು : ವಾಹನಗಳಲ್ಲಿ ಎಲ್‌ಪಿಜಿ ಇಂಧನ ಬಳಸಲು ಕೇಂದ್ರ ಸರ್ಕಾರ ಆಗಸ್ಟ್‌ ತಿಂಗಳಲ್ಲಿ ಅನುಮತಿ ನೀಡುವ ನಿರೀಕ್ಷೆಯಿದ್ದು , ಇದೇ ಮೊದಲ ಬಾರಿಗೆ ದೇಶಾದ್ಯಂತ ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಭಾರತೀಯ ತೈಲ ನಿಗಮ (ಐಒಸಿ) ಉದ್ದೇಶಿಸಿದೆ.

ಇದೇ ವರ್ಷ 116 ಎಲ್‌ಪಿಜಿ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲಾಗುವುದು. ದೆಹಲಿಯಲ್ಲಿ ಈಗಾಗಲೇ 8 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು , ಬೆಂಗಳೂರಿನಲ್ಲಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಐಒಸಿಯ ಮಾರುಕಟ್ಟೆ ನಿರ್ದೇಶಕ ಒ.ಎನ್‌. ಮರ್ವಾಹ ತಿಳಿಸಿದರು.

ತಿದ್ದುಪಡಿಗೊಂಡಿರುವ ಮೋಟಾರು ವಾಹನಗಳ ಕಾಯ್ದೆಗೆ ಈಗಾಗಲೇ ರಾಷ್ಟ್ರಪತಿಗಳ ಅಂಗೀಕಾರ ಸಿಕ್ಕಿದ್ದು , ಆಗಸ್ಟ್‌ನಲ್ಲಿ ವಾಹನಗಳಲ್ಲಿ ಸಿಲಿಂಡರ್‌ ಬಳಕೆಗೆ ಅನುಮತಿ ನೀಡುವ ಆದೇಶವನ್ನು ಸರ್ಕಾರ ಹೊರಡಿಸುವ ಸಂಭವವಿದೆ. ಸಿಲಿಂಡರ್‌ ಬಳಕೆ- ಅಳವಡಿಕೆಯಂತಹ ಸೂಕ್ಷ್ಮ ವಿಷಯಗಳ ಬಗೆಗೆ ಸಚಿವಾಲಯ ನಿಗಾವಹಿಸಿದ್ದು , ಸಚಿವಾಲಯದ ಸೂಚನೆಯ ಮೇರೆಗೆ ಸಿಲಿಂಡರ್‌ ಬಳಕೆ- ಅಳವಡಿಕೆಗಳನ್ನು ನಿರ್ಧರಿಸಲಾಗುವುದು ಎಂದು ಮರ್ವಾಹ ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+